Advertisement
ಹೌದು, ಹೀಗೊಂದು ಪ್ರಶ್ನೆಯನ್ನು ಸ್ವತಃ ಮೆಸ್ಸಿ ಅವರೇ ಹುಟ್ಟು ಹಾಕಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಮೆಸ್ಸಿ, “ವಿಶ್ವಕಪ್ ಬಳಿಕ ನಿವೃತ್ತಿ ನೀಡುವ ಕುರಿತಂತೆ ಈಗಲೇ ಏನೂ ಹೇಳಲಾಗದು. ನಾವು ಹೇಗೆ ಆಡುತ್ತೇವೆ, ಹೇಗೆ ಕೂಟವನ್ನು ಅಂತ್ಯಗೊಳಿಸುತ್ತೇವೆ ಎನ್ನುವುದರ ಮೇಲೆ ನನ್ನ ನಿರ್ಧಾರ ಪ್ರಕಟವಾಗಲಿದೆ’ ಎಂದು ತಿಳಿಸಿದ್ದಾರೆ.“ಮೂರು ಫೈನಲ್ ಕಂಡಿದ್ದೇವೆ. ಆದರೆ ಇಲ್ಲಿ ಎಡವಿದ್ದೇವೆ. ಗೆಲುವು ಅತ್ಯಗತ್ಯ. ಜತೆಗೆ ಈ ಸಲ ಕಪ್ ಗೆಲ್ಲುವುದು ಅಷ್ಟೊಂದು ಸುಲಭವಿಲ್ಲ. ಬ್ರಝಿಲ್, ಜರ್ಮನಿ, ಸ್ಪೇನ್, ಫ್ರಾನ್ಸ್ ಹಾಗೂ ಬೆಲ್ಜಿಯಂನಿಂದ ಪ್ರಬಲ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ನಮ್ಮಲ್ಲೂ ಅತ್ಯುತ್ತಮ ಆಟಗಾರರಿದ್ದಾರೆ. ಯಾವುದೇ ಆಟಗಾರರು ಎದುರಿಗೆ ನಿಂತರೂ ಅವರಿಗೆ ಶಾಕ್ ನೀಡುವ ವಿಶ್ವಾಸ ನಮ್ಮ ತಂಡಕ್ಕಿದೆ’ ಎಂದು ಮೆಸ್ಸಿ ಹೇಳಿದರು.