Advertisement

ಪುತ್ತೂರಿನಲ್ಲೂ ಮೆಸ್ಕಾಂ ಬಿಲ್‌ ಅವಾಂತರ!

12:47 AM May 15, 2020 | Sriram |

ಪುತ್ತೂರು: ಲಾಕ್‌ಡೌನ್‌ ಮಧ್ಯೆಯೂ ಮೆಸ್ಕಾಂ ವಿದ್ಯುತ್‌ ಬಿಲ್‌ನ ವ್ಯತ್ಯಯ ಪುತ್ತೂರು ಭಾಗದಲ್ಲಿಯೂ ಹಲವು ಮಂದಿ ಗ್ರಾಹಕರ ನಿದ್ದೆಗೆಡಿಸಿದೆ.

Advertisement

50 ದಿನಗಳಿಂದ ಬಾಗಿಲು ತೆರೆಯದ ವರ್ತಕರ ಅಂಗಡಿಗಳಿಗೆ ಮೀಟರ್‌ ತಿರುಗದೆಯೂ ಅತ್ಯಧಿಕ ಬಿಲ್‌ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. 800 ರೂ. ಬಿಲ್‌ ಬರುವ ಕಡೆ 3,832 ರೂ. ಬಿಲ್‌ ಬಂದಿದೆ. 3 ಸಾವಿರ ಬಿಲ್‌ ಬರುತ್ತಿದ್ದ ಅಂಗಡಿಗಳಿಗೆ 5 ಸಾವಿರ ರೂ. ಬಿಲ್‌ ನೀಡಲಾಗಿದೆ.

ಮೆಸ್ಕಾಂ ನಿಯಮದಂತೆ ಕನಿಷ್ಠ ಬಿಲ್‌ ಬರಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದ ಅಂಗಡಿಗಳು ಮುಚ್ಚಿದ್ದು ವಿದ್ಯುತ್‌ ಬಳ ಸ ದಿದ್ದರೂ ಏಕಾಎಕಿ ಬಿಲ್‌ ಮೊತ್ತ ಅಧಿಕಗೊಂಡಿದೆ. ವಿದ್ಯುತ್‌ ಮಾಪಕ ಓದದೆಯೇ ಈ ಬಿಲ್‌ಗೆ ಮೆಸ್ಕಾಂ ಅನುಸರಿಸಿದ ಮಾನದಂಡ ಯಾವುದು ಎಂಬುದು ಮಾತ್ರ ಯಕ್ಷ ಪ್ರಶ್ನೆ!

5 ಪಟ್ಟು ಜಾಸ್ತಿ ಬಿಲ್‌
ಸಾಮಾನ್ಯವಾಗಿ ತಿಂಗಳಿಗೆ 800 ರೂ. ವಿದ್ಯುತ್‌ ಬಿಲ್‌ ಬರುತ್ತಿತ್ತು. ಒಂದು ತಿಂಗಳು ನಾನು ಸ್ಟುಡಿಯೋ ಬಾಗಿಲು ತೆರೆದಿಲ್ಲ. ಮೂರು ದಿನಗಳ ಹಿಂದೆ ಬಾಗಿಲು ತೆರೆಯಲಾಗಿದೆ. ಮೆಸ್ಕಾಂ 3,832 ರೂ. ಬಿಲ್‌ ನೀಡಿದೆ. ಈ ಕುರಿತು ಮೆಸ್ಕಾಂ ಇಲಾಖೆಯನ್ನು ಸಂಪರ್ಕಿಸಿದರೆ ಮುಂದಿನ ಬಾರಿ ಸರಿ ಮಾಡುವಾ ಎಂದಿದ್ದಾರೆ. ಅನಂತರ ನಿವೀಗ 900 ರೂ. ಮಾತ್ರ ಪಾವತಿ ಮಾಡಿ ಎಂದು ತಿಳಿಸಿದರು. ಒಟ್ಟಿನಲ್ಲಿ ಈ ಮೆಸ್ಕಾಂ ಬಿಲ್‌ನ ಅವಾಂತರದಿಂದ ನಮಗೆ ಗೊಂದಲ ಉಂಟಾಗಿದೆ ಎನ್ನುತ್ತಾರೆ ನಗರದ ಸ್ಟುಡಿಯೋ ಮಾಲಕ ಅಚ್ಯುತ ಕಡ್ಯ.

ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮೆಸ್ಕಾಂ ಬಿಲ್‌ಗ‌ಳ ಅವಾಂತರದ ಕುರಿತು ಪ್ರಸ್ತಾವವಾಗಿತ್ತು. ಮೆಸ್ಕಾಂ ಇಲಾಖೆ ತತ್‌ಕ್ಷಣ ಈ ಬಿಲ್‌ಗ‌ಳನ್ನು ಮರುಪರಿಶೀಲನೆ ಮಾಡಬೇಕು. ಜೂನ್‌ ಅಂತ್ಯದ ತನಕ ಯಾವುದೇ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಬಾರದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಅವರು ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಮೆಸ್ಕಾಂ ಬಿಲ್‌ ಅವಾಂತರಕ್ಕೆ ಮಾತ್ರ ಕಡಿವಾಣ ಹಾಕಿಲ್ಲ.

Advertisement

ಪುತ್ತೂರಿನ ರಿಕ್ಷಾ ಚಾಲಕರೊಬ್ಬರಿಗೆ ತಿಂಗಳ ಬಿಲ್‌ 200 ರೂ. ಬರುತ್ತಿತ್ತು. ಕಳೆದ ಬಾರಿ ಬಿಲ್‌ ಪಾವತಿ ಮಾಡುವಾಗ ಅವರು ಹೆಚ್ಚುವರಿಯಾಗಿ 450 ರೂ. ಕಟ್ಟಿದ್ದರು. ಆದರೆ ಈ ಬಾರಿ ಬಿಲ್‌ ಬರುವಾಗ 499 ರೂ. ಕಟ್ಟುವಂತೆ ಬಂದ ಬಿಲ್‌ ನೋಡಿ ಅವರಿಗೆ ಶಾಕ್‌! ಅವರು ಹೆಚ್ಚುವರಿಯಾಗಿ ಕಟ್ಟಿದ್ದ ಹಣ ಇನ್ನೂ ಇದ್ದರೂ ಏಕಾಏಕಿ ಅತ್ಯಧಿಕ ಬಿಲ್‌ ನೀಡಿದ ಮೆಸ್ಕಾಂ ಇಲಾಖೆಯನ್ನು ಸಂಪರ್ಕಿಸಿದಾಗ ಸರಿ ಮಾಡುವಾ ಎಂಬ ಭರವಸೆ ದೊರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next