Advertisement

ಭಗವಾನ್‌ ಮಹಾವೀರರ ಸಂದೇಶ ಸಾರ್ವಕಾಲಿಕ: ಡಾ|ಸಂಪತ್‌ಕುಮಾರ್‌

10:08 AM Mar 30, 2018 | |

ಬಂದರು: ಭಗವಾನ್‌ ಮಹಾವೀರರ ಸಂದೇಶಗಳು ಸಾರ್ವಕಾಲಿಕ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ| ಬಿ.ಪಿ. ಸಂಪತ್‌ಕುಮಾರ್‌ ಹೇಳಿದರು. ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಜೈನ್‌ ಸೊಸೈಟಿಯ ಸಹಯೋಗದಲ್ಲಿ ಬಜಿಲ ಕೇರಿ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಗುರುವಾರ ಉಪನ್ಯಾಸ ನೀಡಿ, ವಿಶ್ವ ಭ್ರಾತೃತ್ವ ಹಾಗೂ ವಿಶ್ವ ಸಮಾನತೆಯನ್ನು ಸಾರಿದ ಮಹಾನ್‌ ಪುರುಷ ಅವರು ಎಂದರು.

Advertisement

ಜೈನ ಸೊಸೈಟಿ ಅಧ್ಯಕ್ಷ ಎಲ್‌.ಡಿ. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಸುರೇಶ ಬಲ್ಲಾಳ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ., ಸನತ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು. ಜೈನ ಸೊಸೈಟಿ ಕಾರ್ಯದರ್ಶಿ ಪುಷ್ಪರಾಜ್‌ ಜೈನ್‌ ಸ್ವಾಗತಿಸಿದರು.

ಸತ್ಯ, ಅಹಿಂಸೆ ಪಾಲಿಸಿ
ಭಗವಾನ್‌ ಮಹಾವೀರರ ಜಯಂತಿಆಚರಣೆ ಮೂಲಕ ಸರಕಾರ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಜನರನ್ನು ಕರ್ಮ ಮಾರ್ಗದಿಂದ ಜ್ಞಾನ ಮಾರ್ಗದೆಡೆಗೆ ಮುನ್ನಡೆಸಿದವರು ಮಹಾವೀರರು. ಸತ್ಯ, ಅಹಿಂಸೆಯನ್ನು ಪಾಲಿಸುವಂತೆ ಬೋಧಿಸಿದರು. ಅಂತಹ ಮಹಾ ಪುರುಷರ ತತ್ತ್ವಾದರ್ಶಗಳನ್ನು ಪಾಲಿಸುವುದರೊಂದಿಗೆ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಾ| ಬಿ.ಪಿ. ಸಂಪತ್‌ಕುಮಾರ್‌ ಅವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next