Advertisement

ಅಂಬಿಗರ ಚೌಡಯ್ಯ ವಚನಗಳಲ್ಲಿ ಸಮಾನತೆ ಸಂದೇಶ

12:37 PM Jan 22, 2021 | Team Udayavani |

ಚಿಕ್ಕಬಳ್ಳಾಪುರ: ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಗಳು ಒಂದು ಸಂಘ-ಸಮುದಾಯಕ್ಕೆ ಸೀಮಿತವಾದು ದ್ದಲ್ಲ. ಅವರ ವಚನಗಳಲ್ಲಿ ಸಮಾನತೆ, ಸಾಮರಸ್ಯದ ಸಾರ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಸ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಅವರು ತನ್ನ ಅನುಭವ ಮಂಟಪದಲ್ಲಿ ತನ್ನದೇ ಆದ ಛಾಪು ಮೂಡಿಸಿದಂತಹ ಮಹನೀಯರು. ಹೆಣ್ಣು ಮಕ್ಕಳ ಬಗ್ಗೆ ಅಪಾರವಾಗಿ ಗೌರವಿಸುವ ನಿಷ್ಠಾವಂತರಾಗಿದ್ದರು ಎಂದು ಹೇಳಿದರು.

ಇದನ್ನೂ ಓದಿ:ಪ್ರಮಾಣ ಪತ್ರ ವಿತರಿಸಲು ವಸೂಲಿ ಮಾಡಿದರೆ ಕ್ರಮ

ಸಮಾಜಕ್ಕೆ ಒಳಿತು: ಆತ್ಮವಿಶ್ವಾಸವಿರುವ 50 ಜನರು, ಆತ್ಮವಿಶ್ವಾಸವಿಲ್ಲದ ಸಾವಿರ ಜನರ ಸಮಾನ ಎಂದು ವಿವೇಕಾನಂದರು ಹೇಳಿದ್ದಾರೆ. ಅದರಂತೆ ಎಲ್ಲರೂ ಸಮಾನತೆ ಯಿಂದ ಬಾಳಿ ಬದುಕಬೇಕು. ಅವರ ವಚನ ಗಳ ಪಾಲನೆಯಿಂದ ಸಮಾಜಕ್ಕೆ ಒಳಿತಾ ಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕರಾದ ಪ್ರಕಾಶ್‌ ಮಾತನಾಡಿ, ವಿಶ್ವದಲ್ಲಿಯೇ ಭಾರತ ದೇಶವು ಹಲವಾರು ಮಹಾನ್‌ ವ್ಯಕ್ತಿಗಳು, ಚಿಂತಕರು, ಕ್ರಾಂತಿಕಾರರು ಹಾಗೂ ಸಾಧು ಸಂತರನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಉತ್ತಮ ಶಿಕ್ಷಣದ ಮೂಲಕ ವಿಶ್ವದಲ್ಲಿಯೇ ನಮ್ಮ ದೇಶವನ್ನು ಜ್ಞಾನದ ಗುರು ಎಂದು ಕರೆಯುವಂತೆ ಶ್ರಮ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಗಾ.ನ.ಅಶ್ವತ್ಥ್ ಅವರು ಅಂಬಿಗರ ಚೌಡಯ್ಯ ಅವರ ವಚನಗಳನ್ನು ಹಾಗೂ ವಿಚಾರಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.

Advertisement

ಇದೇ ಸಂದರ್ಭದಲ್ಲಿ ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಎಚ್‌ .ನಾಗರಾಜ್‌, ಚಿಕ್ಕಬಳ್ಳಾಪುರ ತಾ.ಅಧ್ಯಕ್ಷ ರವಿಕುಮಾರ್‌, ಶಿಡ್ಲಘಟ್ಟ ತಾಲೂಕಿನ ಅಧ್ಯಕ್ಷ ಶಿವಣ್ಣ, ಸಮುದಾಯದಮುಖಂಡರು, ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next