Advertisement
ಪ್ರಸಕ್ತ ಚಾಲ್ತಿಯಲ್ಲಿ ರುವ ದರಗಳಿಂದ ಮೆಸ್ಕಾಂ ತನ್ನ ಆದಾಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದರ ಏರಿಕೆ ಅಗತ್ಯ ಎಂಬುದು ಮೆಸ್ಕಾಂ ಅಭಿಪ್ರಾಯ.ಆದಾಯವನ್ನು ಮೀರಿದ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ದರ ಏರಿಕೆ ಯನ್ನು ನಿಲ್ಲಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈಗಿನ ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಆರ್ಥಿಕ ವರ್ಷ 2024-2025ಕ್ಕೆ 4,929.98 ಕೋ.ರೂ. ಆದಾಯ ನಿರೀಕ್ಷಿಸ ಲಾಗಿದ್ದು, ವೆಚ್ಚ ಮಾತ್ರ 5,281.93 ಕೋ.ರೂ. ಆಗಲಿದೆ. 351.96 ಕೋ.ರೂ. ಕೊರತೆ ಉಲ್ಲೇಖೀಸಿದ ಮೆಸ್ಕಾಂ 0.59 ರೂ. ಏರಿಕೆಗೆ ಒಲವು ತೋರಿದೆ.
Related Articles
ಎಲ್‌ಟಿ-2ಎ ಗೃಹ ಬಳಕೆ ದೀಪ, ಸಂಯುಕ್ತ ದೀಪ/ಸಂಪೂರ್ಣ ವಿದ್ಯುತ್ ಗೃಹ, ವಾಣಿಜ್ಯೇತರ ದೀಪ, ತಾಪನ ಹಾಗೂ ಮೊಟಿವ್ ಪವರ್ ಸ್ಥಾಪನಗಳ 50 ಕಿ. ವ್ಯಾಟ್‌ವರೆಗೆ ಪ್ರತೀ ಕಿ. ವ್ಯಾಟ್‌ಗೆ ಈಗ 110 ರೂ. ಇರುವುದನ್ನು ಮುಂದೆ 115 ರೂ. ಏರಿಸಬೇಕು. 50 ಕಿ.ವ್ಯಾ. ಮೀರಿದ ಪ್ರತೀ ಹೆಚ್ಚುವರಿ ಕಿ. ವ್ಯಾಟ್‌ಗೆ 210 ರೂ. ಇರುವುದು 215 ರೂ.ಗೆ ಏರಿಸಬೇಕು. ಉಳಿದಂತೆ ವಾಣಿಜ್ಯ ಬಳಕೆ, ನೀರಾವರಿ ಪಂಪುಸೆಟ್‌ಗಳು, ರಬ್ಬರ್, ಕಾಫಿ, ಟೀ, ಅಡಿಕೆ ಬೆಳೆ, ಕೈಗಾರಿಕೆಗಳು ಸಹಿತ ವಿವಿಧ ಬಳಕೆಯ ದರ ಏರಿಕೆಗೆ ಪ್ರಸ್ತಾವನೆಯನ್ನು ಮೆಸ್ಕಾಂ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ.
Advertisement
ಭಾಗ್ಯಜ್ಯೋತಿಯೂ ತುಟ್ಟಿ!ಎಲ್‌ಟಿ-1 ಭಾಗ್ಯಜ್ಯೋತಿ/ ಕುಟೀರ ಜ್ಯೋತಿಗೆ ಮಾಸಿಕ ಈಗ ಕನಿಷ್ಠ 100 ರೂ. ಇರುವುದನ್ನು 105 ರೂ.ಗೆ ಹಾಗೂ ಬಳಸಿದ ಪ್ರತೀ ಯೂನಿಟ್‌ಗೆ 8.61 ರೂ. ಇರುವು ದನ್ನು 8.91 ರೂ.ಏರಿಸುವ ಪ್ರಸ್ತಾವನೆ ಇದೆ. 2024-25ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 0.59 ರೂ. ದರ ಏರಿಕೆ ಪ್ರಸ್ತಾವನೆಯನ್ನು ಮೆಸ್ಕಾಂ ಸಲ್ಲಿಸಿದೆ. ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳ ಮೂಲಕ ವಿದ್ಯುತ್ ವಿತರಣ ಜಾಲದ ವ್ಯವಸ್ಥೆಯ ಅಭಿ ವೃದ್ಧಿಗೆ ಮೆಸ್ಕಾಂ ಆದ್ಯತೆ ನೀಡಿದೆ.
– ಡಿ. ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ