Advertisement
ಇಷ್ಟು ಹೇಳಿದ ಮೇಲೆ ನಿಮಗೆ ಒಂದಂತೂ ಅರ್ಥವಾಗಿರುತ್ತದೆ. ಅದು ಮನಸ್ವಿನಿ “ಪಾದರಸ’ದ ನಾಯಕಿ ಎಂದು. ಹೌದು, “ಪಾದರಸ’ದ ಇಬ್ಬರು ನಾಯಕಿಯರಲ್ಲಿ ಮನಸ್ವಿನಿ ಕೂಡಾ ಒಬ್ಬರು. ಅವರೇ ಹೇಳುವಂತೆ ಈ ಚಿತ್ರದ ಸೆಕೆಂಡ್ ಹೀರೋಯಿನ್. ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಜನ ತಮ್ಮ ಪಾತ್ರವನ್ನು ಇಷ್ಟಪಡುತ್ತಾರೆಂಬ ವಿಶ್ವಾಸದಲ್ಲಿದ್ದಾರೆ ಮನಸ್ವಿನಿ. ಇಲ್ಲಿ ಅವರು ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. “ತುಂಬಾ ಮುಗ್ಧ ಹುಡುಗಿಯ ಪಾತ್ರ. ಯಾರು ಬೇಕಾದರೂ ಮೋಸ ಮಾಡಬಹುದಾದಂತಹ ಪಾತ್ರ ನನ್ನದು’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ. ಮನಸ್ವಿನಿ ಈಗಾಗಲೇ “ಶಾಲಿನಿ’, “ಜನಗಣಮನ’, “ಸಿಂಹಸೇನಾ’, “ಪ್ರೇಮಾಂತರಂಗ’, “ದೇವರೇ ಗತಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಂದಾಪುರ ಮೂಲದ ಮನಸ್ವಿನಿಗೆ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಚಿಕ್ಕಂದಿನಿಂದಲೇ ಇತ್ತಂತೆ. ಅದು ಈಡೇರಿದೆ. ಮನಸ್ವಿನಿಗೆ ತುಂಬಾ ಮುಗ್ಧವಾದ ಪಾತ್ರದಲ್ಲಿ ನಟಿಸುವ ಆಸೆಯಂತೆ. ಮುಂದೆ ಅದು ಈಡೇರುತ್ತದೆ ಎಂಬ ವಿಶ್ವಾಸ ಅವರಿಗಿದೆ. Advertisement
ಪಾದರಸದ ಹುಡುಗಿ
06:00 AM Aug 10, 2018 | |
Advertisement
Udayavani is now on Telegram. Click here to join our channel and stay updated with the latest news.