Advertisement
ಸೋಮವಾರ ಕಗ್ಗೋಡ ಗ್ರಾಮದಲ್ಲಿ ಭಾರತೀಯ ವಿಕಾಸ ಸಂಗಮದಲ್ಲಿ ಪಾಲ್ಗೊಂಡು ಯೋಗ, ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡಿದ ಅವರು, ಯೋಗ ಜೀವನದ ದೈನಂದಿನ ಅಭ್ಯಾಸವಾಗಬೇಕು. ಬೇಗ ಮಲಗಬೇಕು, ಬೇಗ ಏಳಬೇಕು, ತಡವಾಗಿ ಏಳುವುದು ಪಾಪದ ಕೆಲಸ ಎಂದು ರಾಮಾಯಣ ಹೇಳುತ್ತದೆ.ಪ್ರತಿಯೊಬ್ಬರು ಬೆಳಗ್ಗೆ ಯೋಗಿಯಾಗಬೇಕು, ದಿನವೀಡಿ ಕರ್ಮಯೋಗಿಯಾಗಬೇಕು. ನಾನು ಕಳೆದ 40 ವರ್ಷಗಳಿಂದ ಒಂದೇ ಒಂದು ದಿನ ವಿಶ್ರಾಂತಿ ಪಡೆದುಕೊಂಡಿಲ್ಲ, ಹಿಮಾಲಯಕ್ಕೂ ಹೋದರೂ ನನಗೆ ಚಳಿಯಾಗುವುದಿಲ್ಲ, ಇದಕ್ಕೆಲ್ಲ ನನಗೆ ಚೈತನ್ಯ ನೀಡಿದ್ದು ಯೋಗ ಹಾಗೂ ಪ್ರಾಣಾಯಾಮವೇ.
Related Articles
Advertisement
ಭಾರತೀಯ ಸಂಸ್ಕೃತಿ, ಧರ್ಮ ಅತ್ಯಂತ ಶ್ರೇಷ್ಠ. ಭಾರತೀಯ ಸಂಸ್ಕೃತಿ ಇಬ್ಬರು ಅಥವಾ ಮೂವರು ವ್ಯಕ್ತಿಗಳಿಗೆ ಸೀಮಿತವಾಗುವುದಿಲ್ಲ. ಪ್ರಪಂಚ ಬೇರೆ ಧರ್ಮದ ಸಂಸ್ಕೃತಿಗಳು ಕೇವಲ ಮೂರು ಅಥವಾ ನಾಲ್ಕು ವ್ಯಕ್ತಿಗಳಿಗೆ ಸೀಮಿತವಾಗುತ್ತದೆ ಎಂದರು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಕೋಟಿ ಕೋಟಿ ಸಂತ ಗಣಗಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ವಿಜ್ಞಾನ, ಧರ್ಮ, ಅಧ್ಯಾತ್ಮಿಕತೆ ಹೀಗೆ ಎಲ್ಲ ವಿಷಯಗಳ ಹೂರಣವಿದೆ. ಕುರ್ ಆನ್, ಬೈಬಲ್‌ನಲ್ಲಿ ಹಲವಾರು ಒಳ್ಳೆಯ ವಿಷಯಗಳಿಗೆ, ಬದುಕುವ ದಾರಿ ಇದೆ, ಆದರೆ ವಿಜ್ಞಾನವಿಲ್ಲ, ಗಣಿತವಿಲ್ಲ, ವೈದ್ಯಕೀಯ ವಿಜ್ಞಾನವಿಲ್ಲ, ಈ ರೀತಿಯ ಯಾವುದೇ ಅಂಶಗಳು ಕುರ್‌ಆನ್, ಬೈಬಲ್‌ನಲ್ಲಿ ಕಂಡು ಬರುವುದಿಲ್ಲ ಎಂದು ಬಾಬಾ ವಿಶ್ಲೇಷಿಸಿದರು.
ಬಾಬಾ ರಾಮದೇವ ಕನ್ನಡ ಪ್ರೇಮ: ನಮಸ್ಕಾರ, ಚೆನ್ನಾಗಿದ್ದೀರಾ ಎಂದೆಲ್ಲ ಕನ್ನಡದಲ್ಲಿ ಕೆಲ ಪದಗಳನ್ನು ಕನ್ನಡದ ಸಮಸ್ತ ಸಹೋದರ-ಸಹೋದರಿಯರೇ ನಮಸ್ಕಾರ, ಕನ್ನಡಿಗರು ಸ್ವಭಾವ, ದೇಶಭಕ್ತಿ, ಅಧ್ಯಾತ್ಮಿಕವಾಗಿ ಶ್ರೀಮಂತರು… ಎಂದು ಕನ್ನಡದಲ್ಲಿಯೇ ಹೇಳಿದರು. ನನಗೂ ಕನ್ನಡ ಬರುತ್ತದೆ ಎಂದು ತಮ್ಮ ಕನ್ನಡ ಪ್ರೇಮ ಮೆರೆದರು. ಬಾಬಾ ರಾಮದೇವ ಕನ್ನಡದಲ್ಲಿ ಮಾತನಾಡುತ್ತಲೇ ಸಭಿಕರ ಚಪ್ಪಾಳೆ ಸುರಿಮಳೆ ಹಾಗೂ ಹರ್ಷೋದ್ಘಾರ ಕೇಳಿಬಂತು.