Advertisement

ನಕಾರಾತ್ಮಕ ಅಂಶ ತಡೆದರೆ ಮಾನಸಿಕ ಸ್ಥಿರತೆ

07:23 AM Jan 13, 2019 | Team Udayavani |

ಮೈಸೂರು: ಆಂತರಿಕ ಸ್ಥಿರತೆಯ ಕೊರತೆಯಿಂದಾಗಿ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ಹೆಚ್ಚಿನ ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ನಕಾರಾತ್ಮಕ ಅಂಶಗಳನ್ನು ನಿರ್ಮೂಲನೆ ಮಾಡಿದರೆ ಮಾನಸಿಕ ಸ್ಥಿರತೆ ಮೂಡಲಿದ್ದು, ಇಂತಹ ಅವಘಡಗಳನ್ನು ತಡೆಯಬಹುದು ಎಂದು ಸ್ಕ್ವಾಡ್ರನ್‌ ಲೀಡರ್‌ ಅಶೋಕ್‌ ಗಾಬಾ ಹೇಳಿದರು.

Advertisement

ನಗರದ ಹುಣಸೂರು ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನ ಸರೋವರದಲ್ಲಿ  ಸ್ವ ಸಶಕ್ತೀಕರಣ ಹಾಗೂ ಆಂತರಿಕ ಬಲವರ್ಧನೆ ವಿಷಯದ ಬಗ್ಗೆ ಭದ್ರತಾ ಪಡೆಗಳಿಗಾಗಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ತ ಚಾಂಚಲ್ಯಕ್ಕೆ ಎಡೆ ಮಾಡಿಕೊಡುವ ಕೋಪ, ಈಷ್ಯೆì,  ಖನ್ನತೆ ಮುಂತಾದವುಗಳಿಂದ ಇಂತಹ ಅವಘಡಗಳು ನಡೆಯುತ್ತಿವೆ. ದೇಶದ ಜನರು ನೆಮ್ಮದಿಯಿಂದ ನಿದ್ರೆ ಮಾಡಲು ಭದ್ರತಾ ಪಡೆಗಳ ಸೇವೆ ಪ್ರಶಂಸಾರ್ಹ. ಆದರೆ, ಅವರು ಕಾರಣಾಂತರಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು ಇದನ್ನು ನಿರ್ಮೂಲನೆ ಮಾಡಲು ಮನಸ್ಸಿನ ಚಿಂತನೆಯ ಪಥ್ಯವೇ ಮೂಲ ಔಷಧ. ನಮ್ಮೊಳಗೆ ಬೀಡುಬಿಟ್ಟಿರುವ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಸಕಾರಾತ್ಮಕ ಅಭ್ಯಾಸಗಳನ್ನು ಅಭಿವೃದ್ಧಿ ಮಾಡಿಕೊಳ್ಳುವುದು ಅವಶ್ಯ ಎಂದು ಹೇಳಿದರು.

ರೈಲ್ವೆ ಸುರûಾ ಪಡೆಯ ವಿಭಾಗೀಯ ಆಯುಕ್ತ ಕೆ.ಸಿ.ಕಬ್ಬೂರ್‌, ಭಾರತೀಯ ನೋಟು ಮುದ್ರಣಾಲಯದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್‌ ಮಂಜೀತ್‌ ಕುಮಾರ್‌ ಮಾತನಾಡಿದರು. ಕರ್ನಲ್‌ ಬಿ.ಸಿ.ಸತಿ, ಕಮಾಂಡರ್‌ ಶಿವ್‌ಸಿಂಗ್‌, ಬಿ.ಕೆ.ಲಕ್ಷ್ಮೀ, ಬಿ.ಕೆ. ಶುಕ್ಲಾ ದೀದಿ, ಬಿ.ಕೆ.ಯೋಗೇಶ್ವರಿ, ಬಿ.ಕೆ.ಮಂಜುಳಾ, ಬಿ.ಕೆ.ಕೃಷ್ಣಮೂರ್ತಿ, ಬಿ.ಕೆ.ರಂಗನಾಥ್‌ ಉಪಸ್ಥಿತರಿದ್ದರು. ಮುಂಬೈನ ಮ್ಯಾನೇಜ್‌ಮೆಂಟ್‌ ತಜ್ಞ ಡಾ.ಸ್ವಾಮಿನಾಥನ್‌, ಬಿ.ಕೆ.ದೀಪಾ ಮತ್ತು ಪಂಜಾಬ್‌ನ ಡಾ.ಕರಣ್‌ಸಿಂಗ್‌ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.   

Advertisement

Udayavani is now on Telegram. Click here to join our channel and stay updated with the latest news.

Next