Advertisement
ಸರಣಿ ಕೊಲೆ, ದರೋಡೆ, ಅಪಹರಣಗಳು ಹೇಗೆ ನಡೆಯುತ್ತದೆ?ತುಂಬಾ ಆಶ್ಚರ್ಯವಾಗಬಹುದು. ಶಾಂತವಾಗಿ ಕಾಣಿಸುವ ಕಣ್ಣಿಗೆ, ಹಿತವಾಗಿ ಸದಾ ಸಂಭ್ರಮ ಕೊಡುವ ಚಂದ್ರ ನಮ್ಮ ಕೃತ ಗುಣಧರ್ಮಗಳಿಗೆ ಗೋಮುಖ ವ್ಯಾಘ್ರತನಕ್ಕೆ ಕಾರಣಮಾಡಿ, ಲಕ್ಷಿ$¾ಯಾಗಿ ಮನೆ ಮನ ಬೆಳಗಬೇಕಾದ ಹೆಣ್ತನ ಬಿಟ್ಟು ರಾಕ್ಷಸಿಯನ್ನಾಗಿ ಪರಿವರ್ತಿಸುವ ಗಂಡನ್ನು ಕೃತಗೊಳಿಸುವ ಅತಿರೇಕತನವನ್ನು ಚಂದ್ರ ಕೊಡಬಹುದು. ಚಂದ್ರ ಕ್ಷೀಣನಾದಾಗ ನೀಚತ್ವವನ್ನು ಹೊಂದಿದಾಗ ಶನಿಯೊಂದಿಗೆ ರಾಹು, ಕೇತುಗಳ ಜೊತೆಗೋ, ಸೂರ್ಯನೊಂದಿಗೋ, ಶುಕ್ರನೊಂದಿಗೋ ದುಃಸ್ಥಾನದಲ್ಲಿ ಕುಳಿತಿರುವಾಗಲೋ, ನಕಾರಾತ್ಮಕ ಶಕ್ತಿಯನ್ನು ನೀಡಬಹುದು. ಹುಣ್ಣಿಮೆ ಅಮಾವಾಸ್ಯೆಗಳಂದು ವಿಚಿತ್ರವಾಗಿ, ಉನ್ಮಾದಕ್ಕೆ ಒಳಗಾಗಿ ನಿಯಂತ್ರಣ ಮೀರಿ ವರ್ತಿಸಬಹುದು. ತಾನೇ ಸರಿ ಎಂಬ ಹಠಮಾರಿತನ ತೋರಬಹುದು. ನಂಬಿಕೆ ಇಟ್ಟವರಿಗೆ ದ್ರೋಹ ಎಸಗುವ ಪಾಷಂಡಿತನ ತೋರಿಸಬಹುದು. ನಾಗರೀಕತೆ ಮರೆತು ಅನೇಕಾನೇಕ ದುರ್ವರ್ತನೆ, ಕೊಲೆ ಸುಲಿಗೆಯಂಥ ಹೇಯ ಕೃತ್ಯಗಳನ್ನೂ ಮಾಡಬಹುದು.
ಕುಜ, ರಾಹು, ಕೇತು, ಶನಿ, ಶುಕ್ರ ಅಥವಾ ಸೂರ್ಯನಷ್ಟೇ ಬುಧ ಗುರು ಗ್ರಹಗಳು ಕೂಡಾ ಚಂದ್ರನ ಜೊತೆ ಸೇರಿ ಕಿರಿಕಿರಿಗಳನ್ನು ಹುಟ್ಟು ಹಾಕಬಹುದು. ಆದರೆ ಗುರುಗ್ರಹ ಸಾಧಾರಣವಾಗಿ ಚಂದ್ರನ ಜೊತೆ ಸೇರಿ ಕೆಟ್ಟ ಪರಿಣಾಮ ಕೊಡುವುದು ಕಡಿಮೆ. ಆದರೂ ಇನ್ನೇನೋ ಸುವ್ಯವಸ್ಥಿತ ಸಮತೋಲನ ಅಲ್ಲದ, ಮತಾöವೋ ಗ್ರಹಗಳು ಸಂಯೋಜನೆಯಾಗಿ ಜಾತಕದಲ್ಲಿ ಸಂಭವಿಸಿದರೆ ಕಷ್ಟವಾಗುತ್ತದೆ. ಹಲವು ಬಾರಿ ದುಷ್ಟತನವೇ ಆಗುತ್ತದೆ. ವ್ಯಕ್ತಿಯಿಂದ ಎಂದಲ್ಲ. ತನಗೆ ತಾನೇ ಹಲವು ತೊಂದರೆಗಳನ್ನು ಒಬ್ಬ ವ್ಯಕ್ತಿ ಮಾಡಿಕೊಳ್ಳಬಹುದು. ಆತ್ಮಹತ್ಯೆ, ಕುಡಿತ, ಮಾದಕ ವಸ್ತು ಸೇವನೆ, ತಲೆಹಿಡುಕ ತನ ನಡೆಸಿ ಬದುಕು ನಡೆಸುವ ದುರ್ಭರತೆಯ ದಾರಿ ಹಿಡಿಯಬಹುದು. ಮನಸ್ಸಿನಲ್ಲಿ ದಾಡ್ಯìತೆಗಳಿರದೆ ಒಂದು ರೀತಿಯ ಮನೋ ವೈಕಲ್ಯತೆಗಳನ್ನು ಪ್ರದರ್ಶಿಸುತ್ತಾರೆ. ಸಣ್ಣ ಮಾತುಗಳಿಗೂ ವಿಪರೀತವಾಗಿ ಸ್ಪಂದಿಸಿ ತಮ್ಮ ಜೊತೆಗಿರುವ ಜನರ ಬದುಕನ್ನು ದುರಂತಗಳಿಗೆ ನೂಕುವ ಆತ್ಮದ್ರೋಹಿ ಕೆಲಸಗಳನ್ನು ಮಾಡಬಹುದು. ಒಳ್ಳೆಯ ಮಾರ್ಗದಲ್ಲಿದ್ದರೂ ತಮ್ಮ ನಿಸ್ವಾರ್ಥ ಪ್ರಮಾಣಿಕ ಕಪಟ ವಿರದ ನಡೆನುಡಿಗಳಿಂದ ತಮಗೆ ತಾವೇ ಅನ್ಯಾಯ ಮಾಡಿಕೊಂಡು ಅಯೋಗ್ಯರನ್ನು ಬೆಂಬಲಿಸುವ, ಸಾಹಾಯ ಮಾಡುವ ದಡ್ಡತನ ಪ್ರದರ್ಶಿಸಬಹುದು. ಚಂದ್ರನ ಮೂಲಕ ಅತೀಂದ್ರಿಯ ಶಕ್ತಿ ದೊರಕಬಹುದೇ ?
ಅತೀಂದ್ರಿಯ ಶಕ್ತಿ ದೊರಕುವುದರಲ್ಲಿ ಅನುಮಾನವಿಲ್ಲ. ರಾಹು, ಕೇತುಗಳು, ಶನೈಶ್ಚರ, ಕುಜರ ಪ್ರಾಬಲ್ಯವನ್ನು ಅನ್ಯ ಕಾರಣಗಳಿಂದಾಗಿ ಕೆಲವು ಸಕಾರಾತ್ಮಕತೆ ಪ್ರದರ್ಶಿಸಿದಾಗ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸುವ ಚೈತನ್ಯ ಒಬ್ಬ ವ್ಯಕ್ತಿ ಸಂಪಾದಿಸಬಹುದು. ಆದರೆ ಸ್ವತಃ ಚಂದ್ರನು ಇಂಥ ಅತೀಂದ್ರಿಯ ಶಕ್ತಿ ಪಡೆದ ವ್ಯಕ್ತಿಯ ಜಾತಕದಲ್ಲಿ ರಾಜಯೋಗವನ್ನು ಪಡೆದ ಸಂದರ್ಭ ಕೂಡಿ ಬಂದರೆ ಒಳಿತಿಗಾಗಿನ, ಕೀರ್ತಿಗಾಗಿನ ದಾರಿಯನ್ನು ಒದಗಿಸಿ ಕೊಡುತ್ತಾನೆ. ರಾಜಯೋಗದ ಶಕ್ತಿಗೆ ಒಳ್ಳೆಯ, ಅಧಿಕ ಬಲವಿರದಿದ್ದಲ್ಲಿ ಅತೀಂದ್ರಿಯ ಶಕ್ತಿ ಇದ್ದೂ ಜನರ ಅಪಹಾ+++ಸ್ಯಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಒಂದಕ್ಕೊಂದು ಸಂಬಂಧಗಳಿರದ ಮಾತುಗಳನ್ನು ಆಡುತ್ತ ತನ್ನ ಮಾತುಗಳನ್ನು ತಾನೇ ನಿರಾಕರಿಸುವ ಹುಂಬತನ ಪ್ರದರ್ಶಿಸುತ್ತಾನೆ.
Related Articles
ಈ ಸಂಚಿಕೆಯಲ್ಲಿ ಚಂದ್ರನ ಬಗ್ಗೆ ಮಾತ್ರ ವಿವರ ಒದಗಿಸಲಾಗಿದೆ. ಮನಸ್ಸಿನ ಅಸ್ವಾಸ್ಥ್ಯದ ವಿಷಯ ಬಂದಾಗ ಇನ್ನಷ್ಟು ಗ್ರಹಗಳು ಕೂಡಾ ತಮ್ಮ ತಮ್ಮ ಕೊಡುಗೆ ಕೊಡುತ್ತವೆ. ಅವು ಮನಸ್ಸಿನ ಅಸ್ವಾಸ್ಥ್ಯತೆ ಮೀರಿ ಕ್ರಿಮಿನಲ್ ಕೆಲಸಗಳಿಗೆ ಕಾರಣ ಮಾಡಿಕೊಡುವ ವೈಪರೀತ್ಯ ಸೃಷ್ಟಿಸಬಹುದು. ಜಗತ್ತಿನಲ್ಲಿ ಸರ್ವಾಧಿಕಾರಿಗಳು, ಜಗತ್ತಿಗೆ ಸಹಾಯ ಮಾಡಬೇಕಾದ ಜನ ದುರಹಂಕಾರಿಗಳಾಗುತ್ತಾರೆ. ತಮ್ಮ ಕರ್ತವ್ಯ ಮರೆತು ನಿರ್ವಹಿಸಬೇಕಾದ ಕಾರ್ಯದಿಂದ ದೂರವಾಗಿ ಜನರಿಗೆ ತೊಂದರೆಯನ್ನೇ ನಿರ್ಮಿಸುವ ಉಪದ್ಯಾಪ ಕೊಡುತ್ತಾರೆ. ಪ್ರತಿಭಾವಂತರಾಗಿ ಮೇಲೇರುವ ಸೊಗಸನ್ನು ಬಿಟ್ಟು, ಮಾದಕ ವಸ್ತುಗಳಿಗೆ ಹಿಂದೆ ಬೀಳುತ್ತಾರೆ.
Advertisement
ಇತರ ಗ್ರಹಗಳು ಒಗ್ಗೂಡಿದಾಗ ಜಗತ್ತಿನ ಶಾಂತಿಗೆ ಧಕ್ಕೆ ತಂದ ಒಸಾಮ ಬಿನ್ ಲಾಡನ್ ಆಗುವ ವೈಪರೀತ್ಯವನ್ನೋ, ರೇಪ್ ಕೇಸುಗಳ ಮೂಲಕ ಶಾಂತಿಯ ಬದುಕಿನ ದಾರಿಯನ್ನು ಕೆಡಿಸಿಕೊಳ್ಳುವುದು. ದರೋಡೆ ಮಾಡಿ ಹಣ ಎಗರಿಸುವ, ಭಯೋತ್ಪಾದಕತೆಯಿಂದ ಜಗತ್ತಿನ ಸ್ವಾಸ್ಥ್ಯ ಕೆಡಿಸುವ ಕೆಲಸ ನಡೆಸುತ್ತಿರುತ್ತಾರೆ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ವಿಚಾರಗಳನ್ನು ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕುರಿತ ಮತ್ತಷ್ಟು ಮಾಹಿತಿ ಪಡೆಯೋಣ.
ಬಾಲಾರಿಷ್ಟಗಳಿಗೆ ಚಂದ್ರ ಕಾರಣನಾಗುತ್ತಾನೆಯೇ?ಹೌದು ದುರ್ಬಲ ಬುಧನೊಂದಿಗೆ ಚಂದ್ರ ಬಾಲಾರಿಷ್ಟವನ್ನು ಒದಗಿಸಿ ಬೆಳೆಯುವ ಮಗುವಿನ ಕುಂಠಿತ ಬೆಳವಣಿಗೆಗಳಿಗೆ ಕಾರಣ ಮಾಡಿಕೊಡುತ್ತಾನೆ. ಮಗು ಉಳಿದ ಮಕ್ಕಳಂತೆ ಚಟುವಟಿಕೆಗಳನ್ನು ಹೊಂದಿರದೆ ಮಂಕಾಗಿರುತ್ತದೆ. ತಂದೆ-ತಾಯಿಗೆ ಚಟುವಟಿಕೆಯಿಂದಿರದ ಮಗು ನೋವಿಗೆ ಕಾರಣವಾಗುತ್ತದೆ. ಇನ್ನೂ ಅನೇಕ ಸಲ ಪರೀತವಾದ ಚುರುಕುತನ ಹೊಸ ಹೊಸ ರೀತಿಯಲ್ಲಿ ಓಡಾಡುವುದು, ಕುಣಿಯುವುದು ಕುಪ್ಪಳಿಸುವುದು ಏಕಾಗ್ರತೆ ಇರದೆ ವಿದ್ಯಾಭ್ಯಾಸದಲ್ಲಿ ದುರ್ಬಲರಾಗುವುದು, ತಂದೆತಾಯಿಗೆ ನಿಯಂತ್ರಿಸಲು ಸಾಧ್ಯವಾಗದಷ್ಟು ಚೇಷ್ಟೆ, ತುಂಟತನ ಮಾಡುವುದು ಇತ್ಯಾದಿ ಸಮಸ್ಯೆಗಳು ಇರುತ್ತವೆ. ಈ ಚೈತನ್ಯ ಒಂದು ಮಿತಿ ದಾಟಿ ತಲೆನೋವಿಗೆ ಕಾರಣವಾಗುವ ವಿಷಯವಾಗುತ್ತದೆ. ಮಗು ಎಂದೂ ಗ್ರಹಿಸದೆ ಮೂಗು ಮುರಿಯುವುದು, ಟೀಕಿಸುವ ಜನರಿಂದಾಗಿ ತಂದೆ ತಾಯಿಗೆ ಕಷ್ಟವಾಗುತ್ತಲೇ ಇರುತ್ತದೆ. ಎಷ್ಟೋ ಸಲ ವೈದ್ಯರ ನೆರವು ಪಡೆಯಲು ಹೋದರೆ ವೈದ್ಯರು ಮಂಕು ಕವಿಯುವ ಔಷಧಗಳನ್ನು ಕೊಡುತ್ತಾರೆ. ಇದರಿಂದ ಮಕ್ಕಳು ಚಟುವಟಿಕೆಗಳೇ ಇರದ ಹಾಗೆ ತಟಸ್ಥವಾಗಿ ಕ್ರಿಯಾಶೀಲತೆ ಕಳೆದುಕೊಳ್ಳುತ್ತಾರೆ. ಅನಂತಶಾಸ್ತ್ರಿ