Advertisement
ತಲೆಮಾರುಗಳಿಂದ ಬಂದಿದ್ದ ವೈದ್ಯ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಮೈಸೂರಿನ ಬೋಗಾದಿ ನಿವಾಸಿ ಶಾಬಾದ್ ಶರೀಫ್ ಕೊಲೆಯಾದವರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಹುಡುಕಾಟ ನಡೆದಿದೆ ಎಂದು ಹೇಳಲಾಗಿದೆ.
Related Articles
Advertisement
ಇದನ್ನೂ ಓದಿ:ತಪ್ಪಿಸಿಕೊಳ್ಳಲು ಯತ್ನ : ಆ್ಯಸಿಡ್ ದಾಳಿಕೋರ ನಾಗೇಶ್ ಕಾಲಿಗೆ ಪೊಲೀಸರ ಗುಂಡು!
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿರುವ ಹೊತ್ತಿನಲ್ಲಿ ಕೇರಳದ ಸಚಿವಾಲಯದ ಮುಂದೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕೆಲವರು ಪ್ರತಿಭಟನೆ ಇಳಿದಿದ್ದಾರೆ. ಮಾತ್ರವಲ್ಲ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರಿಗೆ ಒಬ್ಬನ ಬಳಿ ಇದ್ದ ಪೆನ್ ಡ್ರೈವ್ ಮೇಲೆ ಕುತೂಹಲ ಮೂಡಿ, ಆ ಕುರಿತು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಮೈಸೂರು ಮೂಲದ ಶರೀಫ್ ಎಂಬ ವ್ಯಕ್ತಿಯ ಕೊಲೆ ಹಾಗೂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಕುರಿತು ತನಿಖೆ ತೀವ್ರಗೊಳಿಸಿದ ವೇಳೆ ಘಟನೆ ಹಿಂದೆ ಆರೇಳು ಮಂದಿ ಇರುವುದು ಕಂಡುಬಂದಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳಾದ ಮಲ್ಲಪುರಂ ಜಿಲ್ಲಾ ಪೊಲೀಸರು ಇದಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆ ಮುಂದುವರೆಸಿದ್ದಾರೆ.
ಬೊಗಾದಿ ನಿವಾಸಿ ಶಾಬಾದ್ ಶರೀಫ್ ನಾಪತ್ತೆ ಸಂಬಂಧ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಪೊಲೀಸರು ಎಲ್ಲಾ ಆಯಮದಲ್ಲೂ ಶೋಧ ನಡೆಸಿದ್ದರು ವ್ಯಕ್ತಿ ಪತ್ತೆಯಾಗಿರಲಿಲ್ಲ. ಈಗ ಕೇರಳದಲ್ಲಿ ಹತ್ಯೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. -ಪ್ರದೀಪ್ ಗುಂಟಿ, ಡಿಸಿಪಿ ಮೈಸೂರು.