Advertisement

ಮೊರಾರ್ಜಿ ದೇಸಾಯಿ ಶಾಲೆಯ ಸವಿನೆನಪು

08:15 AM Feb 09, 2018 | |

ಬಾಲ್ಯದ ನೆನಪನ್ನು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಅವರ ಶಾಲೆ-ಕಾಲೇಜಿನ ನೆನಪನ್ನು ಹೇಳಿಕೊಳ್ಳುತ್ತಾರೆ. ನಾನು ಈಗ ಹೇಳಲು ಹೊರಟಿರುವುದು ಕೋಟೇಶ್ವರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಕಳೆದ ಐದು ವರ್ಷದ ಅನುಭವವನ್ನು. ವಸತಿ ಶಾಲೆಗೂ ಬೇರೆ ಶಾಲೆಗಳಿಗೂ ಅಜಗಜಾಂತರವಿದೆ. ಈ ಶಾಲೆಗೆ ಸೇರಲು ಇಚ್ಛಿಸುವವರು ಐದನೆಯ ತರಗತಿಯ ಕೊನೆಯಲ್ಲಿ ಒಂದು ಪ್ರವೇಶ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಬೇಕು. ಹಾಗಾದಲ್ಲಿ ಐದು ವರ್ಷ ಉಚಿತ ವಿದ್ಯಾಭ್ಯಾಸ, ಇಂಗ್ಲಿಷ್‌ ಮೀಡಿಯಂ ಹಾಗೂ ವಸತಿ ಊಟ ಇತ್ಯಾದಿ ದೊರಕುತ್ತದೆ. ಈ ಸೌಲಭ್ಯ ಪಡೆದವರಲ್ಲಿ ನಾನೂ ಒಬ್ಬಳು. ಐದನೆಯ ತರಗತಿ ಮುಗಿದಾಗ ಮೊರಾರ್ಜಿ ದೇಸಾಯಿ ಪ್ರವೇಶ ಪತ್ರಿಕೆ ಬರೆದು ಉತ್ತೀರ್ಣಳಾದೆ ಹಾಗೂ ಕೋಟೇಶ್ವರ ಮೊರಾರ್ಜಿ ದೇಸಾಯಿ ಶಾಲೆಗೆ ಸೇರ್ಪಡೆಯಾದೆ. ಲಗ್ಗೇಜ್‌ ಹಿಡಿದು  ಅಪ್ಪ-ಅಮ್ಮನ ಜೊತೆ ಹಾಸ್ಟೆಲ್‌ನ ದಾರಿ ಹಿಡಿದ ನನಗೆ ಒಂದು ಕಡೆ ಖುಷಿ ಇದ್ದರೆ, ಇನ್ನೊಂದು ಕಡೆ ಅಪ್ಪ-ಅಮ್ಮನಿಂದ ದೂರ ಇರಬೇಕಲ್ಲ ಎನ್ನುವ ದುಃಖ. ಕುಂಭಾಶಿಯÇÉೇ ಮನೆ ಇದ್ದರೂ ಪ್ರತಿದಿನ ಕೋಟೇಶ್ವರ ಶಾಲೆಗೆ ಹೋಗಿ ಬರುವಂತೆಯೂ ಇರಲಿಲ್ಲ. ಯಾಕೆಂದರೆ, ಅದು ವಸತಿ ಶಾಲೆ. ಹಾಸ್ಟೆಲ್‌ಗೆ ಹೋದ ಮೊದಲನೆಯ ದಿನ ನರ್ವಸ್‌ ಆಗಿ¨ªೆ. ಅದರಲ್ಲೂ ಹೊಸ ಹೊಸ ಮಕ್ಕಳು ಲಗೇಜ್‌ ಹಿಡಿದು ಮನೆಯಿಂದ ಬರುವವರು ಅಪ್ಪ-ಅಮ್ಮ ಬಿಟ್ಟು ಹೋಗುವಾಗ ಅಳುತ್ತಿದ್ದರು. ಇದನ್ನೆಲ್ಲ ನೋಡಿದ ನನಗೂ ಅಮ್ಮನ ನೆನಪು ಇನ್ನೂ ಜಾಸ್ತಿ ಆಗ್ತಿತ್ತು. ಬರ್ತಾ ಬರ್ತಾ ಎಲ್ಲ ತನ್ನಿಂದತಾನೇ ಸರಿ ಆಗತೊಡಗಿತು. ಅಲ್ಲದೆ ಓದಿನ ಕಡೆ ಗಮನ ಜಾಸ್ತಿ ಆಗತೊಡಗಿತು.

Advertisement

ಬೆಳಿಗ್ಗೆ ಎದ್ದು ಹಲ್ಲುಜ್ಜಿ ವ್ಯಾಯಾಮ. ಸರ್‌ ಬಂದು ವ್ಯಾಯಾಮ ಹೇಳಿಕೊಟ್ಟು ನಂತರ ಬೆಳಿಗ್ಗೆಯ ಪ್ರೇಯರ್‌ ಮಾಡಿ ಟೀ ಕುಡಿದು ಕಾಲೇಜಿಗೆ ರೆಡಿ ಆಗಿ ತಿಂಡಿಗೆ ಹೋಗುತ್ತಿದ್ದೆವು. ಅದಾದಮೇಲೆ ರೂಮ್‌ ಮತ್ತು ಕಾರಿಡಾರ್‌ ಕ್ಲೀನ್‌ ಮಾಡಿ ಶೂ ಸಾಕÕ… ಟೈ, ಬೆಲ್ಟ…, ಬ್ಯಾಚ್‌, ಯೂನಿಫಾರ್ಮ್, ವೈಟ್‌ ರಿಬ್ಬನ್‌ ಹಾಕಿ ಹೋಗುವುದು ನೋಡುವುದೇ ಒಂದು ಚೆಂದವಾಗಿತ್ತು. ಅಷ್ಟು ಚೆನ್ನಾಗಿತ್ತು ಮೊರಾರ್ಜಿ ದೇಸಾಯಿ ಶಾಲೆಯ ಸಮವಸ್ತ್ರ. ದಿನಬೆಳಗಾದರೆ ಪೀಟಿ ಮಾಸ್ಟ್ರೆ ಪ್ರೀತೇಶ್‌ ಸರ್‌ ಹತ್ತಿರ ಬೈಗುಳ ಕೇಳದ ಒಂದು ದಿನವಿಲ್ಲ. ಕೆಲವೊಮ್ಮೆ ಅವರ ಬೈಯುYಳದಿಂದ ಅಳುತ್ತಿದ್ದುದೂ ಉಂಟು. ಕಾರಣ ಇದ್ದು ಬೈಸಿಕೊಳ್ಳುವುದಕ್ಕಿಂತ ಅವರ ಬಳಿ ವಿನಾಕಾರಣ ಬೈಸಿಕೊಂಡದೇ ಜಾಸ್ತಿ. ಯಾಕಾದ್ರೂ ಮೊರಾರ್ಜಿ ದೇಸಾಯಿಗೆ ಸೇರಿದೆನಪ್ಪಾ ಎಂದು ಅಂದುಕೊಂಡಿದ್ದೆ. ಎಲ್ಲ ಸರಿಯಾಗಿ ಇರುವಾಗ ಈ ಪೀಟಿ ಮಾಸ್ಟ್ರದ್ದು ಮಾತ್ರ ಬೈಯುYಳ ಕೇಳಬೇಕಲ್ಲ ಅನ್ನಿಸ್ತಿತ್ತು. ಶಾಲೆಯಲ್ಲಿ ಟೀಚರುಗಳು ಪರೀಕ್ಷೆಯ ಟೈಮಲ್ಲಿ ತುಂಬಾ ಕೋಆಪರೇಷನ್‌ ಕೊಡುತ್ತಿದ್ದರು.ಎಲ್ಲ ಶಾಲೆ ಬೆಳಿಗ್ಗೆಯಿಂದ ಸಂಜೆ ತನಕ ಇದ್ರೆ, ನಮ್‌ ಸ್ಕೂಲ್‌ನಲ್ಲಿ ಮಾತ್ರ ರಾತ್ರಿ ಕೂಡ ಟೀಚರುಗಳು ನಮ್ಮ ಜೊತೆ ಕುಳಿತುಕೊಳ್ಳುತ್ತಿದ್ದರು. ರಾತ್ರಿಯ ವೇಳೆ ಪರೀಕ್ಷೆ ಟೈಮಲ್ಲಿ ಹಾಸ್ಟೆಲಲ್ಲಿ ಓದೋ ಬದುÛ ಕ್ಲಾಸ್‌ರೂಮಲ್ಲಿ ಕೂತ್ಕೊಂಡು ಓದ್ತಾ ಇದ್ವಿ. ಹಾಗೆ ಓದುತ್ತಿರಬೇಕಾದರೆ ಏನಾದರೆ ಡೌಟು ಇದ್ರೆ ಟೀಚರುಗಳು ಸಹಾಯ ಮಾಡುತ್ತಿದ್ದರು. ಹಾಗಾಗಿ ಟೀಚರುಗಳಿಗೆಲ್ಲ ಒಮ್ಮೆ ಥ್ಯಾಂಕ್ಸ್‌ ಹೇಳಲೇಬೇಕು.

ಇವತ್ತು ನಾನು ಕೆಎಂಸಿಯಲ್ಲಿ ಓದ್ತಾ ಇದೇನೆ. ನಾನು ಇಲ್ಲಿ ಓದಬೇಕೆಂದರೆ ಇದಕ್ಕೆ ಕಾರಣವೇ ನಾನು ಹಿಂದೆ ಓದಿದ ಶಾಲೆ. ಕ್ಲಾಸ್‌ಮುಗಿಸಿ ಹಾಸ್ಟೆಲ್‌ಗೆ ಬರ್ತಾ ತಿಂಡಿ ಮತ್ತು ಹಾಲು ಕುಡಿದು ಸ್ನಾನ ಮಾಡಲು ಮತ್ತು ಬಟ್ಟೆ ಒಗೆಯಲು ನಾ ಮುಂದು ನೀ ಮುಂದು ಅಂತ ಓಡುತ್ತೇವೆ. ವಾಶ್‌ ರೂಮ್ಸ… ಹಾಗೂ ಬಟ್ಟೆ ಒಗೆಯೋ ಕಲ್ಲು ಯಾವಾಗಲೂ ರಶ್‌. ಕೆಲಸ ಮುಗಿಸಿ ಆರು ಗಂಟೆಗೆ ಹಾಲ್‌ಗೆ ಹೋಗಬೇಕಿತ್ತು. ಓದುವ ಹಾಲ್‌ನಲ್ಲಿ ಯಾರಾದರೂ ಓದಬಹುದು ಬಿಟ್ಟು ಮಾತನಾಡ್ತಿದ್ರೆ ಮಾತನಾಡಿದವರ ಹೆಸರು ಬರೀಲಿಕ್ಕೆ ಲೀಡರ್ಸ್‌ ಇದ್ರು. ಹಾಗೆ ಏನಾದ್ರೂ ಮಾತನಾಡಲೇ ಬೇಕಿದ್ದರೆ ಪುಸ್ತಕ ಅಡ್ಡ ಹಿಡಿದು ಕದ್ದು ಮಾತಾಡುತ್ತಿದ್ದೆವು. ಅದರ ಮಜಾನೇ ಬೇರೆ. ಕೆಲವೊಮ್ಮೆ ಪುಸ್ತಕದಲ್ಲಿ ಬರೆದು ತೋರಿಸಿ ಮಾತಾಡ್ತಿದ್ವಿ. ನಮ್ಮ ಚಲನವಲನಗಳನ್ನು ಗಮನಿಸಲು ಗುಪ್ತಮಂತ್ರಿಗಳು ಇದ್ದರು. ಸಂಜೆ ಗಂಟೆ ಪ್ರೇಯರ್‌ ಮಾಡಿ ಎಂಟು ಗಂಟೆಯ ಹೊತ್ತಿಗೆ ಊಟ ಮಾಡಿ ನಂತರ ಸ್ವಲ್ಪ ಹೊತ್ತು ಓದು ಮುಂದುವರಿಸಿ ಮತ್ತೆ ಮಲಗಲು ಹೋಗ್ತಿದ್ವಿ. ಶುಕ್ರವಾರದಂದು ಬಾಲಸಭೆ ನಡೆಸುತ್ತಿದ್ದರು. ಅದರಿಂದ ತುಂಬ ಖುಷಿಯಾಗ್ತಿತ್ತು. ಜೊತೆಗೆ ನಾಲೇಜ್‌ ಕೂಡ ಸಿಕ್ತಿತ್ತು. ಬಾಲಸಭೆಯಲ್ಲಿ ಸ್ವಾಗತ ಭಾಷಣದಿಂದ ಹಿಡಿದು ಪ್ರೇಯರ್‌ ಹಾಡು ಹೇಳುವುದು, ನೃತ್ಯ ಮಾಡುವುದು, ರಸಪ್ರಶ್ನೆ ಕೇಳುವುದು, ಪ್ರಹಸನ ಮಾಡುವುದು, ಜೋಕ್‌ ಹೇಳುವುದು, ಒಗಟು ಹೇಳುವುದು, ಯೋಗ ಮಾಡುವುದು ಇತ್ಯಾದಿ ಇರುತ್ತಿತ್ತು. ಮೊರಾರ್ಜಿಯ ಸಿಹಿನೆನಪುಗಳನ್ನು ಹೇಳಲು ಹೋದರೆ ಸಮಯ ಸಾಲಲ್ಲ. ಯಾಕಂದ್ರೆ ಅದು ಸುಮಾರು ಐದು ವರ್ಷಗಳ ಅನುಭವ. ಯಾವ ಸ್ವರ್ಗಕ್ಕೂ ಕಮ್ಮಿ ಇಲ್ಲದ ಮೊರಾರ್ಜಿ ದೇಸಾಯಿ ಶಾಲೆಯ ನೆನಪನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ. ಮತ್ತೂಮ್ಮೆ ಮೊರಾರ್ಜಿ ದೇಸಾಯಿಯವರಿಗೆ ನಮ್ಮೆಲ್ಲರ ಹೃದಯಪೂರ್ವಕ ಧನ್ಯವಾದಗಳು.

ಖಾಜಿ ಶಬನಾಜ್‌ ಸ್ಕೂಲ್‌ ಆಫ್ ಎಲೈಡ್‌ ಹೆಲ್ತ್‌ ಸಾಯನ್ಸಸ್‌ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next