Advertisement

ಮುಂಡರಗಿ: ಶರಣರ ಚರಿತಾಮೃತ ಪ್ರವಚನ ಮಂಗಲ

05:12 PM Aug 06, 2018 | Team Udayavani |

ಮುಂಡರಗಿ: ಇಳಕಲ್‌ನ ಮಹಾಂತ ಜೋಳಿಗೆಯ ಸಾಮಾಜಿಕ ಹರಿಕಾರ ಡಾ| ಮಹಾಂತ ಶಿವಯೋಗಿಗಳು ತಾಯಿಯಂತಹ ಅಂತಃಕರಣ ಹೊಂದಿದ್ದರು ಎಂದು ಡಾ| ತೋಂಟದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಜ| ತೋಂಟದಾರ್ಯ ಮಠದಲ್ಲಿ ನಡೆದ ಶರಣರ ಚರಿತಾಮೃತ ಪ್ರವಚನ ಮಂಗಲ, ಮಾಸಿಕ ಶಿವಾನುಭವ, ಲಿಂ| ಡಾ| ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಮಹಾಂತ ಶಿವಯೋಗಿಗಳು ಕೋಟಿಗೊಬ್ಬರಂತೆ ಸಿಗುತ್ತಾರೆ. ಬಸವ ತತ್ವನಿಷ್ಠರಾಗಿ ಯಾವುದೇ ಸಂದರ್ಭದಲ್ಲಿ ರಾಜಿಮಾಡಿಕೊಳ್ಳದೇ ಸಾಮಾಜಿಕ ಕಳಕಳಿ ಹೊಂದಿದ್ದರು. ಬಸವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಶಿಷ್ಯರನ್ನು ಮಮತಾಮೂರ್ತಿಯಂತೆ ಬೆಳೆಸುವಲ್ಲಿ ಪ್ರಮುಖ ಪತ್ರ ವಹಿಸಿದ್ದರು. ಅಲ್ಲದೇ ಒಂದು ಕಾಲದ ಜನಾಂಗವನ್ನು ಕಟ್ಟುವ ಕೆಲಸವನ್ನು ಮಹಾಂತ ಸ್ವಾಮೀಜಿ ಮಾಡಿದ್ದರು ಎಂದು ಜ| ತೋಂಟದ ಸಿದ್ದಲಿಂಗ ಸ್ವಾಮೀಜಿ ನುಡಿದರು. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ವಿರಕ್ತ ಮಠಗಳ ಪರಂಪರೆಯು ಜಾತ್ಯತೀತ್ಯ ನಿಲುವು, ಸಮಾನತೆಯ ತತ್ವಗಳು ಜನರನ್ನು ಸೆಳೆಯುತ್ತವೆ. ಬಸವ ತತ್ವದ ಅರಿವು, ಆಚಾರ, ಅನುಭಾವ ಹೆಜ್ಜೆಯನ್ನು ಜೀವನದಲ್ಲಿ ಆಚರಣೆಗೆ ಮಹಾಂತ ಸ್ವಾಮೀಜಿ ತಂದಿದ್ದರು ಎಂದ ಅವರು, ಬಸವತತ್ವ ಉಳಿಸುವ ಸವಾಲು ನಮ್ಮೆದುರಿಗೆ ಇದೆ. ಬಸವಧರ್ಮ ಪ್ರಚಾರಕರ ಕೊರತೆಯು ಎದ್ದು ಕಾಣುತ್ತಿದೆ. ಬಸವ ತತ್ವದ ಆಚಾರ, ಸಂಸ್ಕಾರವನ್ನು ಮಕ್ಕಳಿಗೆ ಕಲಿಸಲು ಮುಂದಾಗಬೇಕು ಎಂದರು. 

ಇಳಕಲ್‌ನ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಬಸವತತ್ವ ಉಳಿಸಲು ಪ್ರತಿಯೊಬ್ಬರೂ ಎದೆಗೊಟ್ಟು ಕೆಲಸ ಮಾಡುವ ಅಗತ್ಯವಿದೆ. ಬಸವದಿ ಪ್ರಮಥರ ಆಶಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ಎಸ್‌.ಎಸ್‌. ಪಟ್ಟಣಶೆಟ್ಟರ್‌, ಮುದುಗಲ್‌ನ ಮಹಾಂತ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ಶ್ರೀನಿವಾಸ ಉಪ್ಪಿನಬೆಟಗೇರಿ, ಡಾ| ಶಿವಕುಮಾರ ಕುಬಸದ, ಸೊಲಭಣ್ಣ ಜೋಬಾಳಿ, ಎಚ್‌. ವಿರುಪಾಕ್ಷಗೌಡ, ಸೋಮೇಶ್ವರ ಉಪ್ಪಿನಬೆಟ್ಟಗೇರಿ, ಉಮೇಶಯ್ಯ ಹಿರೇಮಠ, ವಿಶ್ವನಾಥ ಉಳ್ಳಾಗಡ್ಡಿ, ಶಿವಾನಂ ಕಡಪಟ್ಟಿ, ಗಿರೀಶಗೌಡ ಪಾಟೀಲ ಮತ್ತಿತರರು ಇದ್ದರು. ಕೊಟ್ರೇಶ ಅಂಗಡಿ, ದ್ರುವಕುಮಾರ ಹೊಸಮನಿ, ನಾಗೇಶ ಹುಬ್ಬಳ್ಳಿ, ಪಾಲಾಕ್ಷಿ ಗಣದಿನ್ನಿ, ಆನಂದಗೌಡ ಪಾಟೀಲ, ಈಶ್ವರಪ್ಪ ಬೆಟಗೇರಿ ಇದ್ದರು. ಎ.ಕೆ. ಮುಲ್ಲಾನವರ ಸ್ವಾಗತಿಸಿ, ನಿರೂಪಿಸಿದರು. ಮುಂಡರಗಿ: ಜ| ತೋಂಟದಾರ್ಯ ಮಠದಲ್ಲಿ ನಡೆದ ಪ್ರವಚನ ಮಂಗಲ, ಡಾ| ಮಹಾಂತ ಶಿವಯೋಗಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಡಾ| ತೋಂಟದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next