ಗೋಲ್ಡ್ ಕೋಸ್ಟ್: ಕಾಂಗರೂ ನೆಲದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ವೇಟ್ ಲಿಫ್ಟಿಂಗ್ ನ 69 ಕೆ.ಜಿ ವಿಭಾಗದಲ್ಲಿ ಪೂನಂ ಯಾದವ್, 10 ಮೀ. ಮಹಿಳಾ ಏರ್ ಪಿಸ್ತೂಲ್‌ನಲ್ಲಿ 16ರ ಹುಡುಗಿ ಮನು ಭಾಕರ್ ಹಾಗೂ ಟೇಬಲ್ ಟೆನಿಸ್‌ನಲ್ಲಿ ಭಾರತ ಮಹಿಳಾ ತಂಡ ಸ್ವರ್ಣದ ಸಾಧನೆ ಮಾಡಿದ್ದಾರೆ.
ಉಳಿದಂತೆ 10 ಮೀ. ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧುಗೆ ಬೆಳ್ಳಿ, ಪುರುಷರ 94 ಕೆ.ಜಿ ವಿಭಾಗದ ವೇಟ್‌ಲಿμrಂಗ್ ವಿಕಾಸ್ ಠಾಕೂರ್ ಕಂಚು ಹಾಗೂ ಪುರುಷರ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ರವಿ ಕುಮಾರ್ ಕಂಚು ಗೆದ್ದು ಭಾರತೀಯರ ಗೌರವವನ್ನು ಹೆಚ್ಚಿಸಿದ್ದಾರೆ. ಭಾರತ ಕೂಟದ 5ನೇ ದಿನ ಒಟ್ಟಾರೆ 6 ಪದಕ ಗೆದ್ದುಕೊಂಡಿತು. ಇದರಲ್ಲಿ 4 ಪದಕವನ್ನು ಮಹಿಳೆಯರು ಗೆದ್ದರು ಎನ್ನುವುದು ವಿಶೇಷ.
ಪೂನಂ ಚಿನ್ನದ ಹುಡುಗಿ: ವೇಟ್ ಲಿಫ್ಟಿಂಗ್ ಭಾರತದ ಚಿನ್ನದ ಪಾರಮ್ಯ ಭಾನುವಾರವೂ ಮುಂದುವರಿಯಿತು. ವನಿತೆಯರ 69 ಕೆಜಿ ವಿಭಾಗದಲ್ಲಿ ಪೂನಂ ಯಾದವ್ ಸ್ವರ್ಣದಿಂದ ಸಿಂಗಾರಗೊಂಡರು. ಕಳೆದ ಗ್ಲಾಸೊYà ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಪೂನಂ ಯಾದವ್ ಗೋಲ್ಡ್ ಕೋಸ್ಟ್‌ನಲ್ಲಿ ನೇರವಾಗಿ ಚಿನ್ನವನ್ನೇ ಎತ್ತಿದರು. ಪೂನಂ ಒಟ್ಟು 222 ಕೆಜಿ (110+122) ಭಾರವೆತ್ತಿ ಪೋಡಿಯಂನಲ್ಲಿ ಬಹಳ ಎತ್ತರದಲ್ಲಿ ಕಾಣಿಸಿಕೊಂಡರು. ಇದು ಪೂನಂ ಅವರ ಶ್ರೇಷ್ಠ ವೈಯಕ್ತಿಕ ನಿರ್ವಹಣೆಯಾಗಿದೆ. ಇಂಗ್ಲೆಂಡಿನ ಸಾರಾ ಡೇವಿಸ್ 217 ಕೆಜಿಯೊಂದಿಗೆ (95+122) ಬೆಳ್ಳಿ ಪದಕ ಜಯಿಸಿದರೆ, μಜಿಯ ಅಪೊಲೋನಿಯಾ ವೈವೈ 216 ಕೆಜಿ ಭಾರದೊಂದಿಗೆ (100+116) ಕಂಚಿನ ಪದಕ ಗೆದ್ದರು.
16ರ ಮನು ದಾಖಲೆ, ಹೀನಾಗೆ ಬೆಳ್ಳಿ: 16 ವರ್ಷದ ಮನುಭಾಕರ್ 10 ಮೀ. ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡರು. ಇದು ಕಾಮನ್ ವೆಲ್ತ್‌ನಲ್ಲಿ ಅವರ ಮೊದಲ ಪದಕ ಎನ್ನುವುದು ವಿಶೇಷ. ಅವರು ಒಟ್ಟು ದಾಖಲೆಯ 240.9 ಅಂಕ ಪಡೆದುಕೊಂಡು ಈ ಸಾಧನೆ ಮಾಡಿದರು. ಇದೇ ವಿಭಾಗದಲ್ಲಿ ಹೀನಾ ಸಿಧು ಒಟ್ಟು 234 ಅಂಕ ಪಡೆದು ಬೆಳ್ಳಿ ಪದಕ ಗೆದ್ದರು.
ಟಿಟಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ: ಟೇಬಲ್ ಟೆನಿಸ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಫೈನಲ್‌ನಲ್ಲಿ 3-1 ಅಂತರದಿಂದ ಬಲಿಷ್ಠ ಸಿಂಗಾಪುರ ತಂಡವನ್ನು ಸೋಲಿಸಿದರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್‌ನ ಇತಿಹಾಸದಲ್ಲಿ ಭಾರತೀಯರು ಗೆದ್ದ ಮೊದಲ ಪದಕ. ವಿಜೇತ ತಂಡದಲ್ಲಿ ಮನಿಕಾ ಬಾತ್ರಾ, ಮಧುರಿಕಾ ಪಾಟ್ಕರ್,
ಮೌಮಾ ದಾಸ್ ಅವರನ್ನು ಒಳಗೊಂಡಿತ್ತು.ವಿಕಾಸ್, ರವಿಗೆ ಕಂಚು: ಪುರುಷರ 94 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ವಿಕಾಸ್ ಠಾಕೂರ್‌ಗೆ ಕಂಚಿನ ಪದಕ ಪಡೆದರು.
ಪುರುಷರ ವಿಭಾಗದ 10 ಮೀ. ಏರ್ ರೈಫಲ್ ಶೂಟಿಂಗ್‌ನಲ್ಲಿ ರವಿ ಕುಮಾರ್ ಕಂಚಿನ ಪದಕ ಪಡೆದುಕೊಂಡರು.ಭಾರತ ಜಿಮ್ನಾಸ್ಟಿಕ್ ತಂಡಕ್ಕೆ ದಂಡ: ತಮ್ಮ ಉಡುಪಿನಲ್ಲಿ ರಾಷ್ಟ್ರೀಯ ಲಾಂಭನವನ್ನು ಬಳಸದ ಕಾರಣಕ್ಕೆ ಭಾರತ ಜಿಮ್ನಾಸ್ಟಿಕ್ ತಂಡದ ಸ್ಪರ್ಧಿಗಳು ದಂಡಕ್ಕೆ ಒಳಗಾಗಿದ್ದಾರೆ. ತಂಡ ವಿಭಾಗದಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ರಾಷ್ಟ್ರೀಯ ಲಾಂಛನವನ್ನು ಬಳಸಿರದ ಹಿನ್ನೆಲೆಯಲ್ಲಿ ಅರುಣಾ ರೆಡ್ಡಿ, ಪ್ರಣಿತಿ ನಾಯಕ್, ಪ್ರಣಿತಿ ದಾಸ್ ಅಂಕ ಕಳೆದುಕೊಳ್ಳಬೇಕಾಯಿತು.