Advertisement

#Melodi: ಉತ್ತಮ ಸ್ನೇಹಿತರ ಭೇಟಿ- ವೈರಲ್‌ ಆಯ್ತು ಪಿಎಂ ಮೋದಿ-ಇಟಲಿ ಪ್ರಧಾನಿ ಮಿಲೋನಿ ಸೆಲ್ಫಿ

09:51 PM Dec 02, 2023 | Team Udayavani |

ನವದೆಹಲಿ: ದುಬೈನ ವಿಶ್ವ ಹವಾಮಾನ ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟೆಲಿ ಪ್ರಧಾನಿ ಜಾರ್ಜಿಯಾ ಮಿಲೋನಿ ಭೇಟಿಯ ಫೋಟೋ ಈಗ ವೈರಲ್‌ ಆಗಿದೆ. ಶುಕ್ರವಾರ ಇಟೆಲಿಯ ಪ್ರಧಾನಿ, ಭಾರತದ ಪ್ರಧಾನಿ ಮೋದಿ ಜತೆಗೆ ತೆಗೆದುಕೊಂಡಿದ್ದ ಸೆಲ್ಫಿಯನ್ನು ಟ್ವೀಟ್‌ ಮಾಡಿ “ಕಾಪ್‌24ರಲ್ಲಿ ಉತ್ತಮ ಸ್ನೇಹಿತರು’ ಎಂದು ಬರೆದುಕೊಂಡಿದ್ದರು. ಅದಕ್ಕೆ ಶನಿವಾರ ಉತ್ತರವಾಗಿ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ “ಸ್ನೇಹಿತರನ್ನು ಭೇಟಿಯಾಗುವುದು ಯಾವತ್ತೂ ಖುಷಿಯ ವಿಚಾರ’ ಎಂದು ಬರೆದುಕೊಂಡಿದ್ದಾರೆ.

Advertisement

ಇದೇ ಸಂದರ್ಭದಲ್ಲಿ ಕತಾರ್‌ನ ದೊರೆ ಅಮೀರ್‌ ಶೇಖ್‌ ತಮೀಮ್‌ ಬಿನ್‌ ಹಮ್ಮದ್‌ ಅಲ್‌-ಥಾನಿಯವರ ಜತೆಗೆ ಕೂಡ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಆ ದೇಶದಲ್ಲಿ ಇರುವ ಭಾರತೀಯ ಸಮುದಾಯವರ ಕ್ಷೇಮ ವಿಚಾರ, ಎರಡೂ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹವಮಾನ ಶೃಂಗದಲ್ಲಿ ಬ್ರೆಜಿಲ್‌ ಅಧ್ಯಕ್ಷ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರ ಜತೆಗೆ ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next