Advertisement

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

09:59 PM May 22, 2022 | Team Udayavani |

ಬಂಟ್ವಾಳ: ಸಾಮಾನ್ಯ ವಾಗಿ ರಜಾದಿನವಾದರೆ ಹೆದ್ದಾರಿಗಳ ಸಹಿತ ಬಹುತೇಕ ರಸ್ತೆಗಳು ಖಾಲಿ ಇರುತ್ತವೆ. ಆದರೆ ಮೇ 22ರ ರವಿವಾರ ಶುಭ ಸಮಾರಂಭಗಳು ನಿಬಿಡವಾಗಿದ್ದ ಪರಿಣಾಮ ಎಲ್ಲೆಡೆ ಟ್ರಾಫಿಕ್‌ ಜಾಮ್‌ ಕಂಡುಬಂದಿತ್ತು.
ಬಿ.ಸಿ.ರೋಡು- ಅಡ್ಡಹೊಳೆ ರಾ. ಹೆದ್ದಾರಿ ಯನ್ನು ಅಭಿವೃದ್ಧಿಗಾಗಿ ಅಗೆ ಯಲಾಗಿದ್ದು, ರವಿವಾರ ಸಂಜೆಯ ವರೆಗೂ ಟ್ರಾಫಿಕ್‌ ಜಾಮ್‌ ಇತ್ತು.

Advertisement

ಮೆಲ್ಕಾರ್‌ ಜಂಕ್ಷನ್‌ನಲ್ಲಿ ಮುಡಿಪು ಭಾಗದಿಂದ ಬರುವ ರಸ್ತೆಯೂ ಕೂಡಿಕೊಳ್ಳುತ್ತಿದ್ದು, ಒಂದು ಬದಿ ಹೆದ್ದಾರಿ ಅಗೆದು ಗೊಂದಲಮಯ ಸ್ಥಿತಿ ಇದೆ. ಹೀಗಾಗಿ ವಾಹನಗಳ ಅಡ್ಡಾದಿಡ್ಡಿ ಚಲನೆಯಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು.

ಆ್ಯಂಬುಲೆನ್ಸ್‌ ಕೂಡ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ತೊಂದರೆ ಆಗಿದ್ದು, ಬಳಿಕ ಸಾರ್ವಜನಿಕರೇ ರಸ್ತೆಗಿಳಿದು ವಾಹನಗಳಿಗೆ ಸೂಚನೆ ನೀಡಿ ಸರಾಗ ಸಂಚಾರಕ್ಕೆ ಸಹಕರಿಸಿದರು.

ಗುರುವಾಯನಕೆರೆಯಲ್ಲೂ
ಬೆಳ್ತಂಗಡಿ: ಗುರುವಾಯನಕೆರೆ ಯಲ್ಲಿ ರವಿವಾರ ಮಧ್ಯಾಹ್ನ ವಿಪರೀತ ವಾಹನ ದಟ್ಟಣೆಯಿಂದ ತಾಸುಗಟ್ಟಲೆ ಸಂಚಾರಕ್ಕೆ ಅಡಚಣೆಯಾಯಿತು.

ಬೆಳ್ತಂಗಡಿವರೆಗೂ ವಾಹನಗಳು ಸಾಲುಗಟ್ಟಿದ್ದವು. ಬೆಳ್ತಂಗಡಿಯಂದ ಗುರುವಾಯನ ಕೆರೆಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು. ನಿರಂತರ ಮಳೆಯೂ ಸುರಿಯುತ್ತಿದ್ದ ಕಾರಣ ವಾಹನ ಸವಾರರು ಇನ್ನಷ್ಟು ಸಮಸ್ಯೆ ಎದುರಿಸುವಂತಾಯಿತು.

Advertisement

ಗುರುವಾಯನ ಕೆರೆಯಲ್ಲಿ ಆ್ಯಂಬುಲೆನ್ಸ್‌ ಒಂದು ಟ್ರಾಫಿಕ್‌ ಜಾಮ್‌ ನಡುವೆ ಸಿಲುಕಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next