Advertisement
ಮೆಲ್ಕಾರ್ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಜತೆಗೆ ಕೊಣಾಜೆ, ಮುಡಿಪು ಭಾಗದಿಂದ ಆಗಮಿಸಿರುವ ಪ್ರಮುಖ ರಸ್ತೆ ಮೆಲ್ಕಾರ್‌ನಲ್ಲಿ ಸೇರುತ್ತಿರುವುದರಿಂದ ದಿನದ ಎಲ್ಲ ಹೊತ್ತು ಸಾವಿರಾರು ವಾಹನಗಳು ಓಡಾಡುತ್ತಲೇ ಇರುತ್ತದೆ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೆ ವಾಹನ ಸಾಗುವುದಕ್ಕೆ ಯಾವುದೇ ಸೂಚನೆಗಳು ಇಲ್ಲದೇ ಇರುವುದರಿಂದ ಚಾಲಕರು/ಸವಾರರು ಗೊಂದಲಕ್ಕೀಡಾಗಿ ಅಪಘಾತ ಸಂಭವಿಸುತ್ತದೆ.
ಪ್ರತಿದಿನವೂ ಬೆಳಗ್ಗಿನಿಂದ ರಾತ್ರಿವರೆಗೂ ಮೆಲ್ಕಾರ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಪೊಲೀಸ್ ಸಿಬಂದಿ ಯನ್ನು ನಿಯೋಜಿಸಬೇಕು. ಹೆಚ್ಚು ವಾಹನದೊತ್ತಡ ಇದ್ದಾಗ ಪೊಲೀಸರು ಎಲ್ಲ ರಸ್ತೆಗಳಲ್ಲೂ ಕ್ರಮವಾಗಿ ವಾಹನಗಳನ್ನು ಬಿಡುವುದಕ್ಕೆ ಅನುಕೂಲವಾಗುತ್ತದೆ. ಜತೆಗೆ ಜನರು ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ರಸ್ತೆ ದಾಟುವ ವೇಳೆಯೂ ಸಹಕಾರಿಯಾಗಲಿದೆ ಎಂದು ಈ ಭಾಗದ ಪುರಸಭೆ ಮಾಜಿ ಸದಸ್ಯ ದಾಮೋದರ್ ಮೆಲ್ಕಾರ್ ಹೇಳುತ್ತಾರೆ.