Advertisement
ಗೆದ್ದರೆ ಮೊದಲನೆಯದುಆಸ್ಟ್ರೇಲಿಯ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಸ್ವಾತಂತ್ರ್ಯ ಬಂದ ವರ್ಷದಿಂದಲೂ ಅಂದರೆ 1947ರಿಂದ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಆದರೆ ಒಂದೇ ಒಂದು ಸರಣಿ ಗೆದ್ದಿಲ್ಲ. ಅಷ್ಟೇಕೆ, ಈವರೆಗೆ 43 ಟೆಸ್ಟ್‌ಗಳನ್ನಾಡಿದರೂ ಜಯಿಸಿದ್ದು 7ರಲ್ಲಿ ಮಾತ್ರ. ಈ ಬಾರಿ ಕೊಹ್ಲಿ ಪಡೆ 2-1 ಮುನ್ನಡೆ ಸಾಧಿಸಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಈ ಹಿನ್ನೆಲೆ ಯಲ್ಲೇ ಇಂದಿನ ಗೆಲುವು ಭಾರತೀಯ ಕ್ರಿಕೆಟಿ ನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಇದು ಭಾರತೀಯ ಟೆಸ್ಟ್ ಚರಿತ್ರೆಯ 150ನೇ ಜಯಭೇರಿ.
ಪರ್ತ್ ಸೋಲಿನ ಬಳಿಕ ಕೊಹ್ಲಿ ತಂಡ ಮೆಲ್ಬರ್ನ್ ನಲ್ಲಿ ತಿರುಗಿ ಬಿದ್ದ ಪರಿ ಅಮೋಘ. ಈ “ಮೆಲ್ಬರ್ನ್ ಮ್ಯಾಜಿಕ್’ಗೆ ಕಾರಣ – ಮೊದಲನೆಯದು ಅದೃಷ್ಟದ ಟಾಸ್. ಅಂತಿಮ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಯಾವತ್ತೂ ಕಠಿನ. ಮೂರೂ ಟೆಸ್ಟ್ ಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದವರೇ ಗೆದ್ದದ್ದು. ಟೊಂಕ ಕಟ್ಟಿದ ಅಗರ್ವಾಲ್
ಓಪನಿಂಗ್ ವೈಫಲ್ಯದಿಂದ ನರಳುತ್ತಿದ್ದ ತಂಡಕ್ಕೆ ಪರಿಹಾರ ಬೇಕಲ್ಲ? ಇದಕ್ಕೆ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಟೊಂಕ ಕಟ್ಟಿದರು. ಪೂಜಾರ, ಕೊಹ್ಲಿ, ರೋಹಿತ್ ಸೇರಿ ಮೊತ್ತವನ್ನು 400ರ ಗಡಿ ದಾಟಿಸಿದ್ದು ಅನುಕೂಲವಾಯಿತು. ಅನಂತರದ್ದು ಬುಮ್ರಾ ಜಾದೂ. ಈ ಅಸಾಮಾನ್ಯ ಸಾಹಸ ಸಿಡ್ನಿಯಲ್ಲಿ ಸಿಡಿಯಲು ಸ್ಫೂರ್ತಿ ತುಂಬಿದೆ.
Related Articles
Advertisement