Advertisement

ಇಂದು ಕನಕಪುರದಲ್ಲಿ ನಡೆದೀತೇ ಹೈಡ್ರಾಮಾ; ಪಾದಯಾತ್ರೆಗೆ ಕೈ ನಾಯಕರ ಸಂಗಮ

11:18 PM Jan 08, 2022 | Team Udayavani |

ಬೆಂಗಳೂರು/ರಾಮನಗರ: ಮೇಕೆದಾಟು ಯೋಜನೆಯ ತ್ವರಿತ ಜಾರಿ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ನಾಯಕರ ದಂಡು ಕನಕಪುರ ತಲುಪಿದೆ.

Advertisement

ರವಿವಾರ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಉದ್ಘಾಟಿಸುವರು.

ಕನ್ನಡ ಚಲನಚಿತ್ರೋದ್ಯಮದ ಬೆಂಬಲವೂ ದೊರೆತಿದ್ದು, ನಟ ಶಿವರಾಜ್‌ಕುಮಾರ್‌, ದುನಿಯಾ ವಿಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದಾರೆ.

ಈ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಯಾದರೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಚಿಂತಿಸಿದ್ದು ಹೆಚ್ಚಿನ ಪೊಲೀಸ್‌ ನಿಯೋಜನೆಗೂ ಸೂಚಿಸಿದೆ. ಕಾಂಗ್ರೆಸ್‌ ನಾಯಕರು ಎಣಿಸಿದಂತೆ ನಡೆಯದಿದ್ದರೆ ಸಂಗಮದ ವೇದಿಕೆ “ಹೈಡ್ರಾಮಾ’ಕ್ಕೆ ಸಾಕ್ಷಿಯಾಗಬಹುದು.

ಇದನ್ನೂ ಓದಿ:ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕರೇ ಬದಲು; 100 ದಿನಗಳಲ್ಲಿ 3ನೇ ಡಿಜಿಪಿ

Advertisement

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ ಹಿರಿಯ ನಾಯಕರು ಹಾಗೂ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಕನಕಪುರ ನಿವಾಸದಲ್ಲೇ ಶಾಸಕಾಂಗ ಸಭೆ ನಡೆಸಿ, ಸರಕಾರವು ಕಾನೂನು ಕ್ರಮಕ್ಕೆ ಮುಂದಾಗಿ ಗೃಹ ಬಂಧನ ಅಥವಾ ಪಾದಯಾತ್ರೆ ಸಂದರ್ಭದಲ್ಲಿ ಬಂಧಿಸಿದರೆ ಏನು ಮಾಡಬೇಕು ಎಂದು ಚರ್ಚಿಸಲಾಯಿತು. ಬದಲಿ ಕಾರ್ಯತಂತ್ರದ ಬಗ್ಗೆ ನಾಯಕರು ಗುಟ್ಟು ಬಿಟ್ಟುಕೊಡುತ್ತಿಲ್ಲ.

2013ರ ಸೆಪ್ಟಂಬರ್‌ನಲ್ಲೇ ನಾವು ಯೋಜನೆ ಅನುಷ್ಠಾನಕ್ಕಾಗಿ ಪ್ರಯತ್ನ ಪ್ರಾರಂಭಿಸಿದೆವು. ಎರಡೂ ವರೆ ವರ್ಷವಾದರೂ ಬಿಜೆಪಿ ಏನೂ ಮಾಡಿಲ್ಲ. ಯಡಿಯೂರಪ್ಪ ಸಿಎಂ ಆಗಿ ದ್ದಾಗ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದರು. ಸುಪ್ರೀಂ ಕೋರ್ಟ್‌, ಕಾವೇರಿ ಜಲ ಪ್ರಾಧಿಕಾರ, ಹಸುರು ನ್ಯಾಯಾಧಿಕರಣ ಎಲ್ಲಿಯೂ ಯೋಜನೆ ಜಾರಿ ಮಾಡದಂತೆ ತಡೆ ನೀಡಿಲ್ಲ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next