Advertisement
ಇದರಿಂದ ಶಬ್ದ ಮತ್ತು ಪರಿಸರ ಮಾಲಿನ್ಯ ಮುಕ್ತ ಜತೆಗೆ ಆರಾಮದಾಯಕ ದೂರದ ಪ್ರಯಾಣ ನನಸಾಗಿದ್ದು, ವಿಜಯದಶಮಿಯಂತಹ ಸುದಿನದಿಂದ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕೋಚ್ ಬಸ್‌ಗಳು 45 ಮಂದಿ ಸಾರ್ವಜನಿಕರು ಮತ್ತು ಓರ್ವ ಚಾಲಕ ಮತ್ತೋರ್ವ ಸಹ ಚಾಲಕನನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದ್ದು, ದೂರದ ಪ್ರಯಾಣ ಆರಾಮದಾಯಕವಾಗಿಸುವ ಸಲುವಾಗಿ ಈ ಬಸ್‌ಗಳು ಹವಾನಿಯಂತ್ರಣ ವ್ಯವಸ್ಥೆ ಜತೆಗೆ ಪುಷ್ ಬ್ಯಾಕ್ ಆಸನಗಳನ್ನು ಹೊಂದಿದ್ದು ಆ ಮೂಲಕ ಪ್ರಯಾಣವನ್ನು ಸುಖಕರವಾಗಿಸಲಿವೆ.
Related Articles
ಇಂದಿನ ಅಗತ್ಯತೆಗೆ ತಕ್ಕಂತೆ ವಿನ್ಯಾಸಗೊಂಡಿರುವ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳಲ್ಲಿ ಟೆಲಿವಿಷನ್ ಮತ್ತು ಮಾಹಿತಿ ವ್ಯವಸ್ಥೆ ಇದ್ದು, ಜತೆಗೆ ಪ್ರತಿ ಅಸನದಲ್ಲಿ ಯುಎಸ್‌ಬಿ ಎಲೆಕ್ಟ್ರಿಕಲ್ ಚಾರ್ಜಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಐದು ಕ್ಯೂಬಿಕ್ ಮೀಟರ್‌ನಷ್ಟು ಸರಂಜಾಮು ಇರಿಸಿಕೊಳ್ಳಲು ಸ್ಥಳಾವಕಾಶ ಒದಗಿಸಲಾಗಿದೆ.
Advertisement
ಇದನ್ನೂ ಓದಿ:500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ
ಅಗ್ಗದ ಪ್ರಯಾಣ:ಪ್ರಸ್ತುತ ದೂರದ ಪ್ರಯಾಣಕ್ಕೆ ಬಳಕೆಯಲ್ಲಿರುವ ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದಲ್ಲಿ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳು ಅಗ್ಗದ ಪ್ರಯಾಣಕ್ಕೆ ನಾಂದಿ ಹಾಡಿದ್ದು, ಸಂಚಾರ ಮತ್ತು ನಿರ್ವಹಣೆಯಲ್ಲಿ ಮಿತವ್ಯಯಿ ಎನಿಸಿಕೊಂಡಿದೆ. ಲಿಯಾನ್ ಪಾಸ್ಪೇಟ್ ತಂತ್ರಜ್ಞಾನ ಅಳವಡಿತ ಬ್ಯಾಟರಿಯ ಈವೀ ಟ್ರಾನ್ಸ್ ಬಸ್‌ಗಳನ್ನು ಭಾರತದಲ್ಲಿ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ತಯಾರಿಸುತ್ತಿದೆ. ಕೋಚ್ ಬಸ್‌ಗಳ ತಯಾರಿ ವೇಳೆ ಸುರಕ್ಷತೆಯನ್ನು ಆದ್ಯತೆಯಾಗಿಸಿಕೊಂಡಿದ್ದು, ಇ.ಯು. ಗುಣಮಟ್ಟಕ್ಕೆ ತಕ್ಕಂತೆ ಚಾಲಕ ಸ್ನೇಹಿ ವ್ಯವಸ್ಥೆ ಹೊಂದಿದೆ ಮತ್ತು ಭಾರತೀಯ ನಿಯಂತ್ರಣ ನಿಯಮಾನುಸಾರ ಈವೀ ಟ್ರಾನ್ಸ್ ಬಸ್‌ಗಳು ಸಿದ್ಧಗೊಂಡಿದ್ದು, ಆತಂಕದ ವೇಳೆ ಅಲಾರಾಮ್ ವ್ಯವಸ್ಥೆ, ತುರ್ತು ದೀಪಗಳ ವ್ಯವಸ್ಥೆ ಹೊಂದಿದೆ. ಈಗಾಗಲೇ ಈವೀ ಟ್ರಾನ್ಸ್ ಕೋಚ್ ಬಸ್‌ಗಳು ಸೂರತ್, ಸಿಲ್ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದ್ದು, ಪುರಿ ಬಸ್ ಸೇವೆ ಎಲೆಕ್ಟ್ರಿಕ್ ಬಸ್ ಸೇವೆಗಳ ವಲಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ. ಎಂಇಐಎಲ್‌ನ ಶೇ.100ರಷ್ಟು ಪಾಲುದಾರಿಕೆಯ ಸಂಸ್ಥೆಯಾಗಿರುವ ಈವೀ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಸಂಸ್ಥೆಯು ಮಾರಾಟ, ಗುತ್ತಿಗೆ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬಸ್ ಸೇವೆಗಳನ್ನು ಒದಗಿಸುತ್ತಿದ್ದು, ಪ್ರಸ್ತುತ ದೇಶಾದ್ಯಂತ 400 ಬಸ್‌ಗಳು ಸಂಚರಿಸುತ್ತಿವೆ. ಈವೀ ಟ್ರಾನ್ಸ್ ತನ್ನದೇ ಆದ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ. ಫೇಮ್ 1 ಮತ್ತು ಫೇಮ್ 2 ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲೆಕ್ಟ್ರಿಕಲ್ ಬಸ್‌ಗಳ ಅಳವಡಿಕೆಗೆ ಮುಂದಡಿ ಇರಿಸಿದೆ.