ಶಿವರಾಜ್ ಕುಮಾರ್ ನಾಯಕರಾಗಿ ಅಭಿನಯಿಸಲಿರುವ 124 ನೇ ಚಿತ್ರಕ್ಕೆ ಪರಭಾಷಾ ನಟಿ ಮೆಹ್ರೀನ್ ಪಿರ್ಜಾಡಾ ನಾಯಕಿಯಾಗಿದ್ದಾರೆ. ಎಫ್2 ಹಾಗೂ ಪಟಾಸ್ ಚಿತ್ರಗಳಲ್ಲಿ ನಟಿಸಿರುವ ಮೆಹ್ರೀನ್, ಸದ್ಯ ಅನಿಲ್ ರವಿಪುಡಿ ಅವರ ಎಫ್3 ಚಿತ್ರದಲ್ಲಿ ಬಿಝಿಯಾಗಿದ್ದಾರೆ.
ಚಿತ್ರದ ಕಥೆ ಇಷ್ಟಪಟ್ಟಿರುವ ಮೆಹ್ರೀನ್, ತಾವು ಈ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರಂತೆ. ಅಂದಹಾಗೆ, ಇದು ಔಟ್ ಅಂಡ್ ಔಟ್ ಲವ್ ಸ್ಟೋರಿ ಚಿತ್ರವಾಗಿದೆ.
ಇದನ್ನೂ ಓದಿ:ಮತ್ತೆ ಕೋಟಿಗೊಬ್ಬನತ್ತ ಸುದೀಪ್: ಡಬ್ಬಿಂಗ್ ಶುರು ಮಾಡಿದ ಕಿಚ್ಚ
ಬಾಲಶ್ರೀ ರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ರಾಮ್ ದುಲಿಪುಡಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಖ್ಯಾತ ನಟರಾದ ನಾಜರ್, ಸಂಪತ್ ಹಾಗೂ ಮಂಗ್ಲಿ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಶಿವರಾಜ್‌ಕುಮಾರ್ ತಮ್ಮ123ನೇ ಚಿತ್ರ “ಬೈರಾಗಿ’ಯಲ್ಲಿ ನಟಿಸುತ್ತಿದ್ದು,ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದು,ಕೃಷ್ಣ ಸಾರ್ಥಕ್ ನಿರ್ಮಿಸುತ್ತಿದ್ದಾರೆ.