ಢಾಕಾ: ಕ್ರಿಕೆಟ್ ನಲ್ಲಿ ನೋ ಬಾಲ್ ದೊರೆತರೆ ಬ್ಯಾಟರ್ ಗಳು ಸಹಜವಾಗಿಯೇ ಸಂತಸ ಪಡುತ್ತಾರೆ. ನೋ ಬಾಲ್ ಜೊತೆ ಬರುವ ಫ್ರೀ ಹಿಟ್ ಗೆ ಬ್ಯಾಟರ್ ಗಳು ಮನಬಂದಂತೆ ಬ್ಯಾಟ್ ಬೀಸುತ್ತಾರೆ. ಬೌಲರ್ ಕ್ರೀಸ್ ದಾಟಿ ಬಂದರೆ, ಬ್ಯಾಟರ್ ಸೊಂಟದ ಮೇಲಿನ ಫುಲ್-ಟಾಸ್ ಸಾಮಾನ್ಯವಾಗಿ ನೋಬಾಲ್ ಗಳು ಎಂದು ಪರಿಗಣಿಸಲ್ಪಡುತ್ತದೆ. ಆದರೆ ಈ ಎರಡೂ ರೀತಿಯಲ್ಲದೆ ಬಾಂಗ್ಲಾದೇಶ ತಂಡವು ಎರಡನೇ ಏಕದಿನ ತಂಡದಲ್ಲಿ ವಿಚಿತ್ರ ರೀತಿಯಲ್ಲಿ ನೋ ಬಾಲ್ ನೀಡಿದೆ.
ಅದು ಹೇಗೆಂದರೆ, ಬೌಲರ್ ಚೆಂಡು ಎಸೆಯುವ ಭರದಲ್ಲಿ ಬೌಲಿಂಗ್ ಸೈಡ್ ನ ಸ್ಟಂಪ್ ಗೆ ಕಾಲು ತಾಗಿಸಿದ್ದೇ ಕಾರಣ. ಅದೂ ಒಂದು ಬಾರಿಯಲ್ಲ, ಬದಲಾಗಿ ಎರಡು ಸಲ.
ಬಾಂಗ್ಲಾದೇಶ ಪರ ಎರಡು ಪಂದ್ಯಗಳಲ್ಲಿ ಗೆಲುವಿನ ರೂವಾರಿ ಮೆಹಿದಿ ಹಸನ್ ಅವರೇ ಈ ರೀತಿ ಮಾಡಿದವರು. ಸ್ಪಿನ್ನರ್ ಆಗಿರುವ ಮೆಹಿದಿ ಸತತ ಎರಡು ಎಸೆತಗಳಲ್ಲಿ ಇದೇ ರೀತಿಯ ಪ್ರಮಾದ ಮಾಡಿದ್ದರು.
ಭಾರತದ ಬ್ಯಾಟಿಂಗ್ ನ 21ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಹಸನ್ ಓವರ್ ನ 5 ಮತ್ತು 6 ನೇ ಎಸೆತದಲ್ಲಿ ಸ್ಟಂಪ್ ಗಳನ್ನು ಮುಗ್ಗರಿಸಿ ತೊಂದರೆಗೊಳಗಾದರು.
ಇದನ್ನೂ ಓದಿ:ಗುಜರಾತ್: ಮೋರ್ಬಿ ಸೇತುವೆ ದುರಂತದ ವೇಳೆ ಜನರ ರಕ್ಷಣೆಗೆ ನದಿಗೆ ಹಾರಿದ್ದ ಬಿಜೆಪಿ ಅಭ್ಯರ್ಥಿ ಮುನ್ನಡೆ
ಶ್ರೇಯಸ್ ಅಯ್ಯರ್ ಅವರು ಮೊದಲ ನೋ-ಬಾಲ್ ನ ನಂತರ ನೀಡಲಾದ ಫ್ರೀ-ಹಿಟ್‌ನಲ್ಲಿ ಸಿಂಗಲ್ ಅನ್ನು ಮಾತ್ರ ತೆಗೆದುಕೊಂಡು, 6ನೇ ಎಸೆತದಲ್ಲಿ ಹಸನ್ ಮತ್ತೊಂದು ನೋ-ಬಾಲ್ ಬೌಲ್ ಮಾಡಿದ ನಂತರ ನೀಡಿದ ಎರಡನೇ ಫ್ರೀ-ಹಿಟ್‌ನಲ್ಲಿ ಅವರು ಬೌಂಡರಿ ಬಾರಿಸಿದರು.
ಸರಣಿಯ ಮೊದಲೆರಡು ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶವು ಸರಣಿ ಜಯಿಸಿದೆ.