Advertisement

ಸಲ್ಮಾನ್‌ ಖಾನ್ ಜಮ್ಮು ಕಾಶ್ಮೀರದ ಬ್ರಾಂಡ್‌ ಅಂಬಾಸಡರ್‌: ಮುಫ್ತಿ ಬಯಕೆ

12:13 PM Mar 18, 2017 | Team Udayavani |

ಮುಂಬಯಿ : “ಜಮ್ಮು ಕಾಶ್ಮೀರದಲ್ಲೀಗ ರಾಜಕೀಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.  ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಸುರಕ್ಷಿತವಾಗಿದೆ. ಒಂದು ವೇಳೆ ಅವಕಾಶ ಸಿಕ್ಕರೆ ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮವನ್ನು ಪ್ರಚುರಪಡಿಸಲು ನಾನು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರನ್ನು ಬ್ರಾಂಡ್‌ ಅಂಬಾಸಡರ್‌ ಆಗುವಂತೆ ಕೇಳಿಕೊಳ್ಳಲು ಇಷ್ಟಪಡುತ್ತೇನೆ’ ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ. 

Advertisement

ಮೆಹಬೂಬ ಮುಫ್ತಿ ಅವರು ಪ್ರಕೃತ ತಮ್ಮ ರಾಜ್ಯದ ಪ್ರವಾಸೋದ್ಯಮ ಪ್ರಚಾರಾರ್ಥವಾಗಿ ಮುಂಬಯಿಯಲ್ಲಿದ್ದಾರೆ; ಚಿತ್ರ ನಿರ್ದೇಶಕನಾಗಿರುವ ನಟ ಇಮ್ರಾನ್‌ ಖಾನ್‌ ಅವರ ಸರ್‌ಗೊಶಿಯಾಂ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಮೆಹಬೂಬ ಅವರು “ಮುಂಬಯಿಗರು ಈ ವರ್ಷ ಜಮ್ಮು ಕಾಶ್ಮೀರಕ್ಕೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡಬೇಕು’ ಎಂದು ಕರೆ ನೀಡಿದರು. 

‘ಈ ವರ್ಷ ಚಳಿಗಾಲದಲ್ಲಿ ಜಮ್ಮು ಕಾಶ್ಮೀರ ಸರಕಾರವು ಏಶ್ಯದ ಅತೀ ದೊಡ್ಡ ಟ್ಯುಲಿಪ್‌ ಗಾರ್ಡನ್‌ ಇರುವ ಶ್ರೀನಗರದಲ್ಲಿ ಟ್ಯುಲಿಪ್‌ ಉತ್ಸವವನ್ನು ಏರ್ಪಡಿಸಲು ಉದ್ದೇಶಿಸಿದೆ. ಈ ಉತ್ಸವಕ್ಕೆ ನಿಮಗೆಲ್ಲ ನಾನು ಈಗಲೇ ಆಹ್ವಾನ ನೀಡುತ್ತಿದ್ದೇನೆ; ಕಾಶ್ಮೀರಕ್ಕೆ ನೀವೆಲ್ಲ ಭೇಟಿ ಕೊಡಿ; ನಮ್ಮ ರಾಜ್ಯ ಪ್ರವಾಸಿಗರಿಗೆ  ಸುರಕ್ಷಿತವಾಗಿದೆ’ ಎಂದು ಮೆಹಬೂಬ ಹೇಳಿದರು. 

ಹಿಂದಿ ಚಿತ್ರರಂಗದ ಹಿರಿಯ ಕಲಾವಿದರಾದ ಫ‌ರೀದಾ ಜಲಾಲ್‌, ಆಲೋಕ್‌ ನಾಥ್‌, ರಾಜಾ ಮುರಾದ್‌, ಕೌಶಲ್‌ ಟಂಡನ್‌ ಮತ್ತು ದೀಪ್‌ಶಿಖಾ ಸೇರಿದಂತೆ ಹಲವು ಪ್ರಮುಖ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next