Advertisement
ಕೇಂದ್ರ ಸರ್ಕಾರದ ಕೃಷಿ ಮತ್ತು ಭೂ ವಿಜ್ಞಾನಸಚಿವಾಲಯ ನೆರವಿನೊಂದಿಗೆ ಅಭಿವೃದ್ಧಿ ಪಡಿಸಿರುವಮೇಘದೂತ್ ತಂತ್ರಾಂಶ ಅನ್ನದಾತನಿಗೆಮಾರ್ಗದರ್ಶನ ನೀಡಲಿದೆ. ಯಾವ ಋತುವಿನಲ್ಲಿಎಂತಹ ಬೆಳೆಗೆ ಮೊರೆ ಹೋಗಬೇಕು. ಹವಾ ಮಾನಕ್ಕೆಅನುಗುಣವಾಗಿ ಬೆಳೆಗಳಿಗೆ ತಗಲಬಹುದಾದ ಕೀಟ, ರೋಗಬಾಧೆಗಳ ಬಗ್ಗೆಯೂ ಮಾಹಿತಿ ಕ್ಷಣಾರ್ಧದಲ್ಲಿಪ್ರಾಪ್ತ ವಾಗಲಿದ್ದು ಕೃಷಿಕರಿಗೆ ಸಾಕಷ್ಟು ಇದರಿಂದ ಪ್ರಯೋಜವಾಗಿದೆ.
Related Articles
Advertisement
ಯಾವ ಭಾಷೆಯಲ್ಲಿದೆ: ಕನ್ನಡ, ತೆಲಗು, ಮರಾಠಿ, ತಮಿಳು, ಹಿಂದಿ, ಇಂಗ್ಲಿಷ್ ಸೇರಿ ಒಟ್ಟು ದೇಶದ 10 ಭಾಷೆಯಲ್ಲಿ ಜಿಲ್ಲೆವಾರು ರೈತರಿಗೆ ವಾರದಲ್ಲಿ ಎರಡು ಸಲ ವಾತಾವರಣ ಅಂಶಗಳಾದ ಉಷ್ಣಾಂಶ, ಆದ್ರìತೆ, ಮಳೆ, ಮೋಡ, ಗಾಳಿಯ ದಿಕ್ಕು ಮತ್ತು ವೇಗ ಮುಂದಿನ ಐದು ದಿನಗಳಲ್ಲಿ ಇರಬಹುದಾದ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದೆ.
ವಾರದಲ್ಲಿ 2 ದಿವಸ ಅಪ್‌ಡೇಟ್: ಬದಲಾದ ಹವಾಮಾನದಲ್ಲಿ ಕೃಷಿಯನ್ನು ಲಾಭದಾಯಕವಾಗಿಸಲು ಭಾರತೀಯ ಹವಾಮಾನ ಇಲಾಖೆ ಮುಖಾಂತರ ಸಂಯೋಜಿತ ಕೃಷಿ ಸಲಹೆಗಳನ್ನು ರೈತರಿಗೆ ನೀಡುವ ಮಹತ್ವಕಾಂಕ್ಷೆಯೊಂದಿಗೆ ಬೆರಳ ತುದಿಯಲ್ಲಿ ಮಾಹಿತಿಯ ಆಗರ ತಂದಿಡಲಾಗಿದೆ, ಪ್ರತಿ ಮಂಗಳವಾರ, ಶುಕ್ರವಾರದಂದು ಅಗೋ ಮೆಟ್ ಫೀಲ್ಡ್ ಯೂನಿಟ್‌ಗಳು (ಎಎಂಎಫ್ಯು) ನೀಡುವ ಜಿಲ್ಲೆ, ಬೆಳೆವಾರು ಸಲಹೆಯನ್ನು ನೀಡಲಾಗುತ್ತಿದೆ.
ಯಾರ ಹೆಗಲ ಮೇಲಿದೆ ಜವಾಬ್ದಾರಿ: ದೇಶದ ಆಯಾ ಜಿಲ್ಲೆಯ ಬೆಳೆ ಪದ್ಧತಿ ಮತ್ತು ಭಿನ್ನವಾಗಿದ್ದು, ಆ್ಯಪ್ ಮೂಲಕ ಕೇಂದ್ರೀಕೃತ ಮಾಹಿತಿ ರವಾನೆ ಮಾಡಲಾಗದು ಎಂಬ ಉದ್ದೇಶದಿಂದ ಮಾಹಿತಿ ಅಪ್ ಡೇಟ್ ಮಾಡುವ ಜವಾಬ್ದಾರಿಯನ್ನು ಆಯಾ ಕೃಷಿ ಮತ್ತು ತೋಟ ಗಾರಿಕ ವಿವಿಗಳಿಗೆ ವಹಿಸಲಾಗಿದ್ದು, ವಿವಿಯಲ್ಲಿಯ ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗದಲ್ಲಿ ನೋಡಲ್ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ನೀಡಿದ್ದು ಅವರೇ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಜಿಲ್ಲೆ ಮಾಹಿತಿ ಎಲ್ಲಿಂದ ಹೋಗುತ್ತದೆ: ಶಿವಮೊಗ್ಗದ ನವುಲೆಯಲ್ಲಿರುವ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲೂ ಈ ವಿಭಾಗವಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಮಾಹಿತಿ ರವಾನಿಸಲಿದೆ.
ಆ್ಯಪ್‌ನಲ್ಲಿ ಏನಿದೆ?: ಎಲ್ಲಬೆಳೆಗಳ ಕುರಿತು ಮಾಹಿತಿ, ಸರ್ಕಾದ ಅಧಿಸೂಚನೆ, ಭೂತಕಾಲ ಮತ್ತುವರ್ತಮಾನದ ಹವಾಮಾನ, ಮುನ್ಸೂಚನೆ, ಶೀಘ್ರ ನೋಟ, ಉಷ್ಣಾಂಶ, ಆದ್ರìತೆ, ಮೋಡ, ಗಾಳಿಯ ದಿಕ್ಕು, ವೇಗ ಹಾಗೂ ಇತ್ಯಾದಿ ಮಾಹಿತಿ ಇದಲ್ಲಿ ಇರಲಿದೆ.
ಮೇಘದೂತ್ ತಂತ್ರಾಂಶ ಕೇವಲ ಕೃಷಿ ತೋಟಗಾರಿಕೆಗಷ್ಟೇಸೀಮಿತವಾಗದೆ ಜಾನುವಾರುಗಳಮಾಹಿತಿಯನ್ನು ಒಳಗೊಂಡಿದೆ, ಋತುವಿಗೆ ಅನುಗುಣವಾಗಿ ಜಾನುವಾರಕ್ಕೆಬರಬಹುದಾದ ಕಾಯಿಲೆ, ಕೊಡಿಸಬೇಕಾದ ಲಸಿಕೆ, ಔಷಧಗಳ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ, ಆಯಾ ಪ್ರದೇಶಕ್ಕೆಅನುಗುಣವಾಗಿ ಜಾನುವಾರು, ಕೋಳಿ,ಕುರಿ ಸಾಕಣೆ, ಮೀನುಗಾರಿಕೆ, ರೇಷ್ಮೆ ಎಲ್ಲಾ ಬಗ್ಗೆ ಮಾಹಿತಿ ದೊರೆಯುತ್ತಿದೆ.–ಜನಾರ್ದನ್, ಕೃಷಿ ಇಲಾಖೆಸಹಾಯಕ ನಿರ್ದೇಶಕ.
ಮೇಘದೂತ್ ಉತ್ತಮವಾಗ ಆ್ಯಪ್‌ಆಗಿದ್ದು ಇದನ್ನು ಬಳಕೆ ಮಾಡಿದರೆ ಕೃಷಿ ವಿದ್ಯಾಲಯಕ್ಕೆ ತೆರಳುವ ಅಗತ್ಯ ಇರುವುದಿಲ್ಲ. ಸಾಕಷ್ಟು ವೈಜ್ಞಾನಿಕವಾಗಿ ಬೆಳೆ ಮಾಡಲು ಅನುಕೂಲ ಆಗಲಿದೆ.–ಬಸವ ಯುವ ರೈತ ದಿಡಗ.
– ಶಾಮಸುಂದರ್ ಕೆ. ಅಣ್ಣೇನಹಳಿ