Advertisement

ವಿಶ್ವಪರಂಪರಾ ಪಟ್ಟಿಯ ಸಂಭವನೀಯ ಸ್ಥಳಗಳಲ್ಲಿ ಹಿರೇಬೆಣಕಲ್ ಶಿಲಾಯುಗದ ಸಮಾಧಿಗಳ ಪ್ರಸ್ತಾಪ

04:28 PM May 20, 2021 | Team Udayavani |

ಗಂಗಾವತಿ: ಕನ್ನಡಿಗರು ಹೆಮ್ಮೆಪಡುವಂತ ವಿಚಾರವೊಂದು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಯುನೆಸ್ಕೋ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ತಾಲೂಕಿನ ಹಿರೇಬೆಣಕಲ್ ಹತ್ತಿರ ಇರುವ ವಿಶ್ವವಿಖ್ಯಾತ ಶಿಲಾಯುಗದ ಶಿಲಾಸಮಾಧಿಗಳು ಮತ್ತು ಆದಿಮಾನವರು ಚಿತ್ರಿಸಿರುವ ಗುಹಾಂತರ ಚಿತ್ರಗಳನ್ನೊಳಗೊಂಡ ಏಳು ಗುಡ್ಡಪ್ರದೇಶವನ್ನು ವಿಶ್ವಪರಂಪರಾ ಪಟ್ಟಿಗೆ ಸೇರಿಸುವಂತೆ ಕೇಂದ್ರ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ವಿಶ್ವಸಂಸ್ಥೆಯ ಯುನೆಸ್ಕೋ ಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಯುನೆಸ್ಕೋ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

Advertisement

ಹಿರೇಬೆಣಕಲ್ ಶಿಲಾಯುಗದ ಸಮಾಧಿಗಳು ಮತ್ತು ಏಳುಗುಡ್ಡಪ್ರದೇಶದಲ್ಲಿರುವ ಆದಿಮಾನವರು ಬಿಡಿಸಿದ ಗುಹಾಂತರ ಚಿತ್ರಗಳನ್ನು ಸಂರಕ್ಷಣೆ ಮಾಡಿ ಪ್ರವಾಸಿ ತಾಣವಾಗಿ ಪರಿವರ್ತಿಸುವಂತೆ ‘ಉದಯವಾಣಿ’ ಪತ್ರಿಕೆ ಹಲವು ಭಾರಿ ವಿಶೇಷ ವರದಿ ಮಾಡಿ ಪುರಾತತ್ವ ಇಲಾಖೆ ಜಿಲ್ಲಾಡಳಿತ ಮತ್ತು ಸರಕಾರದ ಗಮನ ಸೆಳೆದಿತ್ತು. ಇತ್ತಿಚೆಗೆ ಕೇಂದ್ರ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ 2021 ರ ವಿಶ್ವಪರಂಪರಾ ಪಟ್ಟಿಯಲ್ಲಿ ಭಾರತದ 48 ಪ್ರವಾಸಿ ಮತ್ತು ಐತಿಹಾಸಿಕ ತಾಣಗಳನ್ನು ಸೇರ್ಪಡೆ ಮಾಡುವಂತೆ ಯುನೆಸ್ಕೋ ಗೆ ಸಲ್ಲಿಸಿರುವ ಪಟ್ಟಿಯಲ್ಲಿ ಹಿರೇಬೆಣಕಲ್ ಶಿಲಾಯುಗದ ಶಿಲಾಸಮಾಧಿಗಳು ಮತ್ತು ಆದಿಮಾನವರ ಗುಹಾಂತರ ಚಿತ್ರಗಳಿರುವ ಏಳುಗುಡ್ಡ ಪ್ರದೇಶವನ್ನು ಸೇರ್ಪಡೆ ಮಾಡುವಂತೆ ಅಗತ್ಯ ಮಾಹಿತಿ ದಾಖಲೆಗಳ ಜತೆಗೆ ಸಲ್ಲಿದೆ.

ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ: ಗೃಹ ಸಚಿವ ಬೊಮ್ಮಾಯಿ

ವಿಶ್ವಪರಂಪರೆಯ ಸಮಿತಿಯ 44ನೇ ಅಧಿವೇಶನವು 2021 ಜುಲೈ 16 ರಿಂದ 31 ವರಗೆ ಚೀನಾದ ಫುಜವ್ ನಗರದಲ್ಲಿ ನಡೆಯಲಿದ್ದು, ಸಮಿತಿಯ ಅಜೆಂಡಾದ 7 ಮತ್ತು 8 ರ ‘ಸಂರಕ್ಷಣೆ ಮತ್ತು ಸ್ಥಾಪನೆಯಲ್ಲಿ’ ಹಿರೇಬೆಣಕಲ್ ನ ಶಿಲಾಯುಗದ ಡಾಲ್ಮೆನ್ಸ್ ಮತ್ತ ವರ್ಣಚಿತ್ರಗಳು ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯವಿದೆ.

Advertisement

ಕಲ್ಲುಗಣಿಗಾರಿಕೆಯಿಂದ, ನಿಧಿಗಳ್ಳರಿಂದ, ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಶದ ಅಂಚಿನಲ್ಲಿರುವ ಈ ಪ್ರದೇಶವು, ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಬಹುದಾಗಿದೆ. ವಿಶ್ವಪರಂಪರಾ ಪಟ್ಟಿಯಲ್ಲಿ ಸೇರ್ಪಡೆಯಾದರೆ ಪ್ರವಾಸೋದ್ಯಮ ಬೆಳವಣಿಗೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next