Advertisement
ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಸರ್ಕ್ಯೂಟ್ ಗಳನ್ನು ರೂಪಿಸುವುದಾಗಿ ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿದೆ. ಮೆಗಾಸರ್ಕ್ಯೂಟ್ ಪ್ರವಾಸೋದ್ಯಮ ದೃಷ್ಟಿಯಿಂದ ಪೂರಕ ಉಪಕ್ರಮವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ ಈ ಪ್ರಸ್ತಾವ ಬಹಳಷ್ಟು ವರ್ಷಗಳ ಹಿಂದೆಯೂ ರೂಪುಗೊಂಡಿತ್ತು. ಸರಕಾರ ಈ ಪ್ರಸ್ತಾವನೆಗೂ ಮರುಜೀವ ನೀಡುವುದು ಅವಶ್ಯವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಎರಡೂ ಜಿಲ್ಲೆಗಳನ್ನು ಒಳಗೊಂಡ ಮೆಗಾ ಸರ್ಕ್ಯೂಟ್ ಪ್ರಸ್ತಾವನೆಯನ್ನು 2011ರಲ್ಲಿ ಮಾಡಲಾಗಿತ್ತು.
ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮೆಗಾ ಸರ್ಕ್ಯೂಟ್ ಉಪಯುಕ್ತ ಯೋಜನೆಯಾಗಬಲ್ಲದು. ಮೆಗಾಸರ್ಕ್ಯೂಟ್ ಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ಲಭಿಸುತ್ತದೆ. ಇದರ ಅನುಷ್ಠಾನ ಹೊಣೆ ರಾಜ್ಯ ಸರಕಾರದ್ದಾಗಿರುತ್ತದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ, ಕಲ್ಪಿಸುವುದು, ಆ ಮೂಲಕ ಇವುಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ನಕಾಶೆಯಲ್ಲಿ ಸ್ಥಾನಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯಲ್ಲಿರುವ ಹತ್ತಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅವಿಭಜಿತ ದ.ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ಪ್ರವಾಸೋದ್ಯಮ ಕೇಂದ್ರಗಳಿಗೆ ಇದರ ಪ್ರಯೋಜನ ಲಭಿಸಲಿದೆ.
Related Articles
Advertisement
ಪಂಚತಾರಾ ಹೊಟೇಲ್ ಇಲ್ಲಕರಾವಳಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಉತ್ಸುಕತೆ ತೋರುತ್ತಿದ್ದಾರೆ. ಆದರೆ ಮೂಲಸೌಕರ್ಯಗಳು ಹಾಗೂ ಪೂರಕ ವಾತಾವರಣ ಇನ್ನೂ ಪೂರ್ಣಪ್ರಮಾಣದಲ್ಲಿ ಅಭಿವೃದ್ದಿ ಕಾಣದಿರುವುದು ಹಿನ್ನಡೆಯಾಗಿ ಪರಿಣಾಮಿಸಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಸರ್ವಋತು ಬಂದರು ಇದೆ . ಇದೆಲ್ಲ ಪ್ರವಾಸಿಗರಿಗೆ ಪೂರಕವಾಗಿದೆ. ಆದರೆ ಇನ್ನೂ ಕೂಡಾ ಪಂಚತಾರಾ ಹೊಟೇಲ್‌ಗಳು ಬಂದಿಲ್ಲ. ಮಂಗಳೂರಿಗೆ ಬಂದ ಪ್ರವಾಸಿಗರು ಪಂಚತಾರಾ ಹೊಟೇಲ್ ಹುಡುಕಿಕೊಂಡು ಪಕ್ಕದ ಕೇರಳರಾಜ್ಯದ ಬೇಕಲಕ್ಕೆ ಹೋಗುತ್ತಿದ್ದಾರೆ. ಪ್ರಮುಖ ಸಂದರ್ಶನ ತಾಣಗಳು
ದ.ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳು ಸೇರಿದಂತೆ 18 ಪ್ರಮುಖ ತಾಣಗಳಿವೆ. ಇದರಲ್ಲಿ 11 ತಾಣಗಳು ಮಂಗಳೂರು ನಗರದಲ್ಲಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
ಶ್ರೀ ಕ್ಷೇತ್ರ ಪೊಳಲಿ
ಶ್ರೀ ಕ್ಷೇತ್ರ ಕಟೀಲು
ಶ್ರೀ ಮಂಗಳಾದೇವಿ ಕ್ಷೇತ್ರ
ಕದ್ರಿ ಶ್ರೀ ಮಂಜುನಾಥ ಕ್ಷೇತ್ರ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು
ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಚಾಪೆಲ್
ಉಳ್ಳಾಲ ಸಯ್ಯದ್ ಮದನಿ ದರ್ಗಾ
ಮೂಡಬಿದಿರೆ ಸಾವಿರಕಂಬ ಬಸದಿ
ಸಸಿಹಿತ್ಲು ಬೀಚ್
ಪಣಂಬೂರು ಬೀಚ್
ತಣ್ಣೀರುಬಾವಿ ಬೀಚ್
ಸುಲ್ತಾನ್ ಬತ್ತೇರಿ
ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರ
ಸೋಮೇಶ್ವರ ಬೀಚ್
ಪಿಳಿಕುಲ ನಿಸರ್ಗಧಾಮ ಕೇಶವ ಕುಂದರ್