Advertisement

Meg Lanning; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಘೋಷಿಸಿದ ಆಸೀಸ್ ನಾಯಕಿ

11:07 AM Nov 09, 2023 | Team Udayavani |

ಸಿಡ್ನಿ: ಆಸ್ಟ್ರೇಲಿಯಾ ವನಿತಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರು ಗುರುವಾರ ದಿಢೀರನೆ ವಿದಾಯ ಘೋಷಿಸಿ ಕ್ರಿಕೆಟ್ ವಲಯಕ್ಕೆ ಶಾಕ್ ನೀಡಿದ್ದಾರೆ. ಎರಡು ಬಾರಿಯ ಏಕದಿನ ವಿಶ್ವಕಪ್ ವಿಜೇತೆ ಮತ್ತು ಐದು ಬಾರಿಯ ಟಿ20 ವಿಶ್ವಕಪ್ ವಿಜೇತೆ ಲ್ಯಾನಿಂಗ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Advertisement

ಆಸೀಸ್ ಪರ ಎಂಟು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಮೆಗ್ ಲ್ಯಾನಿಂಗ್ ತನ್ನ 31ನೇ ಹರೆಯದಲ್ಲೇ ವಿದಾಯ ಹೇಳಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.

“ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿಯುವ ಈ ನಿರ್ಧಾರ ಕೈಗೊಳ್ಳಲು ಕಷ್ಟವಾಗಿತ್ತು. ಆದರೆ ಇದು ಸರಿಯಾದ ಸಮಯ ಎಂದು ನನಗನಿಸುತ್ತಿದೆ” ಎಂದು ಲ್ಯಾನಿಂಗ್ ಹೇಳಿದರು.

“13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆನಂದಿಸಲು ನಾನು ಅದೃಷ್ಟವಂತೆ. ಆದರೆ ಹೊಸದರ ಕಡೆಗೆ ಮುಖಮಾಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ತಂಡದ ಯಶಸ್ಸಿಗಾಗಿ ನೀವು ಆಟವನ್ನು ಆಡುತ್ತೀರಿ, ನಾನು ಸಾಧಿಸಲು ಸಾಧ್ಯವಾದ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ದಾರಿಯುದ್ದಕ್ಕೂ ಸಹ ಆಟಗಾರರೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:US Strikes: ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ: 9 ಮಂದಿ ಮೃತ್ಯು

Advertisement

ಲ್ಯಾನಿಂಗ್ ಅವರ ಮೊದಲ ಐಸಿಸಿ ಪ್ರಶಸ್ತಿಯು 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ T20 ವಿಶ್ವಕಪ್ ಆಗಿತ್ತು. ಅದರ ನಂತರ 2013 ರಲ್ಲಿ ಭಾರತದಲ್ಲಿ 50 ಓವರ್ ಗಳ ವಿಶ್ವಕಪ್ ಜಯಗಳಿಸಿದರು. 2014ರಲ್ಲಿ ನಾಯಕತ್ವ ಬಲಗೈ ಆಟಗಾರ್ತಿಯು ಆಸ್ಟ್ರೇಲಿಯಾವನ್ನು 182 ಪಂದ್ಯಗಳಲ್ಲಿ ಮುನ್ನಡೆಸಿದರು. ಅಲ್ಲದೆ ಐದು ಐಸಿಸಿ ಟ್ರೋಫಿಗಳನ್ನು ನಾಯಕಿಯಾಗಿ ಇವರು ಗೆದ್ದುಕೊಂಡಿದ್ದಾರೆ.

ಲ್ಯಾನಿಂಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 17 ಶತಕ ಗಳಿಸಿದ್ದಾರೆ. ಅದರಲ್ಲಿ 15 ಶತಕಗಳು ಏಕದಿನ ಕ್ರಿಕೆಟ್ ನಲ್ಲಿ ಬಂದಿದೆ. ಇದು ವನಿತಾ ಏಕದಿನ ಕ್ರಿಕೆಟ್ ನಲ್ಲಿ ದಾಖಲೆ. 103 ಏಕದಿನ ಪಂದ್ಯಗಳಲ್ಲಿ 4602 ರನ್, 132 ಟಿ20 ಪಂದ್ಯಗಳಿಂದ 3405 ರನ್ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next