Advertisement

ಕೊಂಕಣಿ ಸಾಹಿತ್ಯ ಅಕಾಡೆಮಿ ನಿಯೋಗದಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ-ಸಮಾಲೋಚನೆ

11:17 AM Dec 14, 2020 | Mithun PG |

ಮಂಗಳೂರು: ಹೊಸ ಶಿಕ್ಷಣ ನೀತಿಯ ಪ್ರಕಾರ “ಮಾತೃಭಾಷೆಯಲ್ಲೇ ಶಿಕ್ಷಣ” ಇದರನ್ವಯ ಕೊಂಕಣಿ ಮಾತೃಭಾಷಿಕರಿಗಾಗಿ ಕೊಂಕಣಿ ಮಾಧ್ಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಒಂದು ನಿಯೋಗದಿಂದ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.

Advertisement

ಈ ವೇಳೆ ಕೊಂಕಣಿ ಮಾಧ್ಯಮ ಅಗತ್ಯತೆಯನ್ನು ನಿಯೋಗ, ಶಿಕ್ಷಣ ಸಚಿವರಿಗೆ ವಿವರಿಸಿದೆ. ಇದಕ್ಕೆ ಸ್ಪಂದಿಸಿದ ಸಚಿವರು ಇದರ ಅನುಷ್ಟಾನಕ್ಕೆ ಬೇಕಾಗಿರುವ ನಿಯಮ ನಿಬಂಧನೆಗಳನ್ನು ಮನನ ಮಾಡಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸಹಕಾರದೊಂದಿಗೆ  ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ  ನೀಡಿದ್ದಾರೆ.

ಈ ನಿಯೋಗದಲ್ಲಿ ಅಕಾಡೆಮಿ ಅಧ್ಯಕ್ಷರು ಡಾ. ಜಗದೀಶ್ ಪೈ, ಹಾಗೂ ಸದಸ್ಯರಾದ ಅರುಣ್ ಜಿ. ಶೇಟ್, ನವೀನ ನಾಯಕ್, ಗುರುಮೂರ್ತಿ ವಿ. ಶೇಟ್, ನರಸಿಂಹ ಕಾಮತ್ ಉಪಸ್ಥಿತರಿದ್ದರು.

ಇದನ್ನೂ ಓದಿ:  ರಾಜಸ್ಥಾನ: ಸ್ಥಳೀಯ ನಗರ ಸಂಸ್ಥೆ ಚುನಾವಣೆ, ಕಾಂಗ್ರೆಸ್ ಭರ್ಜರಿ ಗೆಲುವು, ಬಿಜೆಪಿಗೆ ಹಿನ್ನಡೆ

Advertisement

Udayavani is now on Telegram. Click here to join our channel and stay updated with the latest news.

Next