Advertisement
ವಿವಿಧ ಭಾಗಗಳ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ, ನಗರದಲ್ಲಿ ರೌಡಿ-ಗೂಂಡಾಗಳ ಅಟ್ಟಹಾಸ ಮೀತಿ ಮೀರಿದೆ. ಅವರನ್ನೇಕೆ ಎನ್ ಕೌಂಟರ್ ಮಾಡಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಾರದು. ಕಳ್ಳತನ ನಿಯಂತ್ರಿಸಲು ಹಗಲು ಹೊತ್ತಿನಲ್ಲಿಯಂತೆ ರಾತ್ರಿಯೂ ಯಾಕೆ ನಿರಂತರ ಗಸ್ತು ಹೆಚ್ಚಿಸಬಾರದು. ಹಳೆಯ ಕಟ್ಟಡವೊಂದರಲ್ಲಿ ಸಂಜೆಯಾದರೆ ಸಾಕು ಬಾಲಕರು ಗಾಂಜಾ ಬಳಕೆ ಮಾಡುತ್ತಾರೆ. ಅದರ ಮೇಲೆ ನಿಗಾವಹಿಸಿ. ಆಟೋರಿಕ್ಷಾ, ದ್ವಿಚಕ್ರ ವಾಹನಗಳು ಕರ್ಕಶ ಶಬ್ದ ಮಾಡುತ್ತ ಸಾಗುತ್ತವೆ. ಅಂತಹ ವಾಹನಗಳ ಸವಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಿ. ಹಳೇಹುಬ್ಬಳ್ಳಿ ಭಾಗದಲ್ಲಿ ಸಂಚಾರ ಸಮಸ್ಯೆ ಬಗೆಹರಿಸಿ. ರೌಡಿಗಳು, ಪುಡಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಿ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಬೆಳಗ್ಗೆಯಿಂದಲೇ ಆರಂಭವಾಗಿ ತಡರಾತ್ರಿ ವರೆಗೆ ತೆರೆದುಕೊಂಡಿರುತ್ತವೆ. ಅವುಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
Related Articles
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ತಡೆಗಟ್ಟಲು ಹಾಗೂ ವಾಹನ ನಿಲುಗಡೆ ಸ್ಥಳ ಬಿಟ್ಟು ಬೇರೆಡೆ ನಿಲ್ಲಿಸುವ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲು ಆರು ಟೋಯಿಂಗ್ ವಾಹನಗಳಿಗಾಗಿ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳನ್ನು ಎತ್ತಿಕೊಂಡು ಠಾಣೆಗೆ ತಲುಪಿಸಲಿದ್ದಾರೆ. ನಾಲ್ಕು ಚಕ್ರದ ವಾಹನಗಳಿಗೆ 1200 ರೂ., ಆಟೋ ರಿಕ್ಷಾಗಳಿಗೆ 1000 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 600 ರೂ. ದಂಡ ವಿಧಿಸಲಾಗುವುದು ಹಾಗೂ ವಾಹನಗಳ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.
Advertisement
11 ರೌಡಿಗಳ ಮೇಲೆ ಕ್ರಮರೌಡಿ-ಗೂಂಡಾಗಳ ಮೇಲೆ ಒಮ್ಮೆಲೆ ಎನ್‌ಕೌಂಟರ್ ಮಾಡುವ ವ್ಯವಸ್ಥೆಯಿಲ್ಲ. ಆದರೆ ಪೊಲೀಸರ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಬರುವ ರೀತಿ ಅವರು ನಡೆದುಕೊಂಡರೆ ನಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಅವರ ಮೇಲೆ ಫೈರ್ ಮಾಡಲು ಹಿಂಜರಿಯುವುದಿಲ್ಲ. ಈಗಾಗಲೇ ರೌಡಿಗಳ ಮನೆ ಮೇಲೆ ದಾಳಿ ಮಾಡಿ 11 ಜನರನ್ನು ಜೈಲಿಗೆ ಕಳುಹಿಸಲಾಗಿದೆ.
ಎಂ.ಎನ್. ನಾಗರಾಜ,
ಹು-ಧಾ ಪೊಲೀಸ್ ಆಯುಕ್ತ