ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಹಲವು ಉದ್ಯಾನಗಳು ಆಕರ್ಷಣೆ ಕಳೆದುಕೊಂಡಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯ ಅರಣ್ಯ ಹಾಗೂ ತೋಟಗಾರಿಕಾ ವಿಭಾಗದ ಅಧಿಕಾರಿಗಳೊಂದಿಗೆ ಮಂಗಳವಾರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.ಈವೇಳೆ ಮಾತನಾಡಿದ ಆಡಳಿತಾಧಿಕಾರಿ, ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನಗಳನಿರ್ವಹಣೆ ಸರಿಪಡಿಸಿಕೊಳ್ಳಬೇಕು. ನಗರದ ಉದ್ಯಾನಗಳು, ರಸ್ತೆಮಾರ್ಗದಲ್ಲಿರುವ ಮೀಡಿಯನ್ಸ್ (ರಸ್ತೆ ಮಧ್ಯ ಭಾಗದ ಹೂ ಕುಂಡಗಳು)ಹಾಗೂವೃತ್ತಗಳನಿರ್ವಹಣೆಗೆಆದ್ಯತೆನೀಡಬೇಕು.ಜೆ.ಪಿ.ಪಾರ್ಕ್, ಸ್ವಾತಂತ್ರ್ಯ ಉದ್ಯಾನ, ಕೃಷ್ಣಾರಾವ್ ಉದ್ಯಾನ, ಜಯಮಹಲ್ ಉದ್ಯಾನ, ಬುಲೇವಾರ್ಡ್ ಉದ್ಯಾನ ಸೇರಿದಂತೆ ಪ್ರಮುಖ ಉದ್ಯಾನಗಳ ನಿರ್ವಹಣೆಗೆ ನಿರ್ದೇಶನ ನೀಡಿದರು.
ಸಿಎಸ್‌ಆರ್‌ನಿಂದ ಹಿಂಪಡೆಯಲು ಸೂಚನೆ: ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿನ ಮೀಡಿಯನ್ಸ್‌ಗಳ ನಿರ್ವಹಣೆಯನ್ನು (ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ) ಸಿಎಸ್‌ಆರ್‌ಗೆ ನೀಡಲಾಗಿದ್ದು, ಕೆಲವು ಭಾಗದಲ್ಲಿ ನಿರ್ವಹಣೆ ಲೋಪವಾಗಿದೆ.ಈ ಹಿನ್ನೆಲೆಯಲ್ಲಿ ಸಿಎಸ್ ಆರ್‌ನಡಿ ನಿರ್ವಹಣೆ ಆಗುತ್ತಿರುವ ಮೀಡಿಯನ್ಸ್‌ಗಳನ್ನು ಕೂಡಲೇ ಹಿಂಪಡೆದು ಪಾಲಿಕೆಯಿಂದಲೇ ಮೇಲ್ವಿಚಾರಣೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ವಿಭಾಗದ ಉಪ ನಿರ್ದೇಶಕರು ಗಂಗಾಧರ ಸ್ವಾಮಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,352 ಉದ್ಯಾನವನಗಳಿವೆ. ಈ ಪೈಕಿ 1,118 ಉದ್ಯಾನವಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, 234 ಉದ್ಯಾನವನಗಳು° ಅಭಿವೃದ್ಧಿಪಡಿಸಬೇಕಿದೆ ಎಂದರು.
ಮರ ತೆರವಿಗೆ ಆನ್‌ಲೈನ್ ವ್ಯವಸ್ಥೆ: ನಗರದಲ್ಲಿ ಒಣಗಿದ ಮರಗಳನ್ನು ತೆರವುಗೊಳಿಸಲು ಹಾಗೂ ಮರದ ಒಣಗಿದ ರಂಬೆ- ಕೊಂಬೆಗಳ ತೆರವು ವಿಚಾರವಾಗಿ ಸಾರ್ವಜನಿಕರ ದೂರುಗಳು ಬಂದರೆ ñರಿತ Ì ವಾಗಿ ಪರಿಹರಿಸಬೇಕು. ಇದಕ್ಕಾಗಿ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲು ಆಡಳಿತಾಧಿಕಾರಿ ಸೂಚನೆ ನೀಡಿದರು. ಇದೇ ವೇಳೆ ಸಸಿಗಳನ್ನು ನೆಡುವ ಬಗ್ಗೆ ಗಮನ ವಹಿಸುವಂತೆ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಸ್ವಾಮಿ ಮಾತನಾಡಿ, ಮರ ಬಿದ್ದಿರುವ ಬಗ್ಗೆ ದೂರು ಬಂದರೆ “ಟ್ರೀ ಕಮಿಟಿ’ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವುಗೊಳಿಸಲಾಗುತ್ತಿದೆ ಎಂದರು. ವಿಶೇಷ ಆಯುಕ್ತ ಜೆ.ಮಂಜುನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಸ್ವಾಮಿ ಹಾಗೂ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಗಂಗಾಧರ ಸ್ವಾಮಿ ಇತರರಿದ್ದರು.