Advertisement

ಸೌಹಾರ್ದ ಕಾಪಾಡಲು ದಲಿತ-ಲಿಂಗಾಯತ ಮುಖಂಡರ ಸಭೆ

05:07 PM Jun 12, 2017 | Team Udayavani |

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಹಿರಿಯ ದಲಿತ ಮುಖಂಡರ, ಲಿಂಗಾಯತ ಸಮಾಜದ ಮುಖಂಡರ ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳ, ವೀರಶೈವ ಬಸವ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಯಿತು. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಸೌಹಾರ್ದಯುತ ವಾತಾವರಣ ಬೆಳೆಸಲು ಈ ಸಮಿತಿ ಕಾರ್ಯನಿರ್ವಹಿಸಬೇಕು.

Advertisement

ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ಅಹಿತಕರ ಘಟನೆ ನಡೆದರೆ ಸಮಿತಿ ಅಲ್ಲಿಗೆ ಭೇಟಿ ನೀಡಿ ಶಾಂತಿ ಸಭೆ ನಡೆಸಿ, ಸೌಹಾರ್ದ ವಾತಾವರಣ ಮೂಡಿಸಲು ಕಾರ್ಯ ನಿರ್ವಹಿಸಬೇಕು. ಲಿಂಗಾಯತರು, ದಲಿತರು ಮತ್ತು ಇತರ ಎಲ್ಲ ವರ್ಗದ ಜನರೊಂದಿಗೆ ಸೇರಿ ಬದುಕುವ ಉತ್ತಮ ಮಾರ್ಗವನ್ನು ಸಮಿತಿ ಮೂಲಕ ಪ್ರಚಾರ ಪಡಿಸಬೇಕೆಂಬುದು ಸಭೆಯಲ್ಲಿದ್ದವರ ಅಭಿಪ್ರಾಯವಾಗಿತ್ತು. 

ಒಂದು ಊರಿನಲ್ಲಿ ಕೆಲ ಕಿಡಿಗೇಡಿಗಳಿಂದ ಮಾಡಿದ ಜಗಳ ಇಡೀ ಸಮಾಜದ ಮೇಲೆ ಹರಡಿ ಅಮಾಯಕರು ಎಷ್ಟೋ ಜನ ಸಂಕಷ್ಟಕ್ಕೆ ಈಡಾಗುವಂತಾಗಿದೆ. ಆದ್ದರಿಂದ ಈ ರೀತಿಯ ವಿಧ್ವಂಸಕ ಕೃತ್ಯ ಮಾಡಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಗೆ ಗುರಿಮಾಡಿಸಿ, ಅಮಾಯಕರನ್ನು ರಕ್ಷಿಸುವ ಕಾರ್ಯ ಈ ಸಮಿತಿ ಮಾಡಬೇಕು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಸಮಿತಿಯಲ್ಲಿ 21 ರಿಂದ 30 ಜನ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂದೆ ಪ್ರತಿ ತಾಲೂಕಿನಲ್ಲಿ ಇಂತಹ ಸಮಿತಿಗಳನ್ನು ನಿರ್ಮಿಸಿ ಹಳ್ಳಿಗಳಿಗೆ ಭೇಟಿ ನೀಡಿ ಬುದ್ಧ, ಬಸವ, ಅಂಬೇಡ್ಕರರ ತತ್ವ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ  ಮೂಲಕ ಸೌಹಾರ್ದತೆ ಬೆಳೆಸಲಾಗುವುದು. 

ಸಮಿತಿಯ ಗೌರವ ಸಲಹೆಗಾರರಾಗಿ ವಿಠಲ ದೊಡ್ಮನಿ, ಅಲ್ಲಮಪ್ರಭು ಪಾಟೀಲರು ಕಾರ್ಯನಿರ್ವಹಿಸುವರು. ಸಂಚಾಲಕರಾಗಿ ಅರುಣಕುಮಾರ ಪಾಟೀಲ, ಸೂರ್ಯಕಾಂತ ನಿಂಬಾಳಕರ, ಸಿದ್ದರಾಮ ಪಾಟೀಲ ಧನ್ನೂರ, ಎ.ಬಿ.ಹೊಸ್ಮನಿ, ಸುರೇಶ ಹಾದಿಮನಿ, ಸುಭಾಷ ಕೊಣಿನ್‌, ಗುರುಶಾಂತ ಪಟ್ಟೇದಾರ, ಮಹಾದೇವ ಧನ್ನಿ, ಕಲ್ಯಾಣಪ್ಪಾ ಪಾಟೀಲ, ಲಕೀಕಾಂತ ಹುಬ್ಬಳ್ಳಿ,ರವಿಂದ್ರ ಶಾಬಾದಿ, ಪ್ರಕಾಶ ಮೂಲಭಾರತಿ, ಅರ್ಜುನ ಭದ್ರೆ, ರಾಜಶೇಖರ ರಾಜೇಶ್ವರ ಇರುವರು. 

Advertisement

ಇನ್ನು ಕೆಲವರನ್ನು ಸಮಿತಿಯಲ್ಲಿ ಸಂಚಾಲಕರಾಗಿ ನೇಮಿಸಲಾಗುವುದು. ಹಿಂದುಳಿದ, ಅಲ್ಪಸಂಖ್ಯಾತರ ವರ್ಗದ ಪ್ರತಿನಿಧಿಗಳನ್ನು ಸಮಿತಿಯಲ್ಲಿ ಸಂಚಾಲಕರಾಗಿ ನೇಮಿಸಲು ಸಭೆ ನಿರ್ಣಯಿಸಿತು. ಸಭೆಯಲ್ಲಿ ಡಾ| ಶ್ರೀಶೈಲ ಘೂಳಿ, ರವೀಂದ್ರ ಶಾಬಾದಿ, ಸುಭಾಷ ಕೋಣಿನ್‌, ಪ್ರಕಾಶ ಮೂಲಭಾರತಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಮುಂದಿನ ಸಭೆಯನ್ನು ಜೂ.25 ರಂದು ಬೆಳಗ್ಗೆ 11:00ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ನೀಲಕಂಠರಾವ ಮೂಲಗೆ, ಕಲ್ಯಾಣಪ್ಪಾ ಮಳಖೇಡ, ಸಿದ್ದರಾಮ ಪಾಟೀಲ, ಜಂಬನಗೌಡ, ಕಲ್ಯಾಣಪ್ಪಾ ಗೋಧಿ, ಚಂದ್ರಶೇಖರ ತಳ್ಳಳ್ಳಿ, ಶರಣಗೌಡ ಸಂಕನೂರ,

-ಸುರೇಶ ಪಾಟೀಲ ಜೋಗೂರ, ಶಿವಪುತ್ರಪ್ಪ ಡೆಂಕಿ, ಎಸ್‌.ವಿ. ಮಠಪತಿ, ವೀರಣ್ಣ ಗೊಳೆದ, ಮಲ್ಲಿನಾಥ ಪಾಟೀಲ ಕಾಳಗಿ, ವೀರಣ್ಣ ಇಂಡಿ, ಮಂಜುನಾಥ ಹಾಗರಗಿ, ಅಶ್ವಿ‌ನ್‌ ಬಿ. ಜಗತ್‌, ಶ್ರೀಕಾಂತ ಒಂಟಿ, ಶಾಮಸುಂದರ ಮೂಲಭಾರತಿ, ಬಿ.ಜಿ. ಬೆಳಗಿ, ಜಗನ್ನಾಥ ಪಟಟ್ಟಣಶೆಟ್ಟಿ, ಆಲೋಕ ಸೊರಡೆ, ಮಲ್ಲಿಕಾರ್ಜುನ ಮಿಟಗಾರೆ, ರಾಜಶೇಖರ ರಾಜೇಶ್ವರ ಹಾಗೂ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next