Advertisement
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, ಕರಾವಳಿಯ ಹೆದ್ದಾರಿಗಳ ಬಗ್ಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆ ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ರಸ್ತೆ ವಿಚಾರದಲ್ಲಿ ಪ್ರತಾಪ್‌ಸಿಂಹ ಜತೆಗೆ ಕರಾವಳಿ ಶಾಸಕರಾದ ಐವನ್ ಡಿ’ಸೋಜಾ, ಬಿ.ಕೆ.ಹರಿಪ್ರಸಾದ್, ಭೋಜೇ ಗೌಡ, ಮಂಜುನಾಥ ಭಂಡಾರಿ ಪಕ್ಷಾತೀತವಾಗಿ ಧ್ವನಿ ಗೂಡಿಸಿದರು.
ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮಾತನಾಡಿ, ನಾನು ಇತ್ತೀಚೆಗೆ ಬಂಡವಾಳ ಸೆಳೆಯಲು ರಾಜ್ಯದ ಉನ್ನತ ಮಟ್ಟದ ನಿಯೋಗದೊಂದಿಗೆ ಜಪಾನ್, ದಕ್ಷಿಣ ಕೊರಿಯಾಕ್ಕೆ ಪ್ರವಾಸ ಹೋಗಿದ್ದೆ. ಅಲ್ಲಿ ಹಲವು ಕಂಪೆನಿಗಳು ಮಂಗಳೂರು ಬಂದರಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದವು. ನಾವು ಬಂದರಿಗೆ ಚೆನ್ನೈಯನ್ನು ಅವಲಂಬಿಸಬೇಕು ಎಂದು ಹೇಳಿರುವುದು ರಾಜ್ಯಕ್ಕೆ ಬಂಡವಾಳ ಸೆಳೆಯಲು ಸಮಸ್ಯೆ ಆಗುತ್ತಿರುವುದಕ್ಕೆ ಒಂದು ಕಾರಣ ಎನ್ನಬಹುದು ಎಂದರು.