Advertisement

ನೀಟ್‌ ಪಾಸ್‌ ಮಾಡಿದ ತೌಫೀಲ್‌; ಕಾಶ್ಮೀರದ ಬುಡಕಟ್ಟು ಸಮುದಾಯದ ಯುವಕನ ಸಾಧನೆ

09:42 PM Feb 22, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತೌಫೀಲ್‌ ಅಹ್ಮದ್‌ ಎಂಬ ಯುವಕ ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಈ ಸಾಧನೆ ಮಾಡಿದ ಕೇಂದ್ರಾಡಳಿತ ಪ್ರದೇಶದ ಬುಡಕಟ್ಟು ಜನಾಂಗದ ಮೊದಲ ಯುವಕ ಎಂಬ ಸಾಧನೆಗೆ ಪಾತ್ರನಾಗಿದ್ದಾನೆ.

Advertisement

ಮೊಬೈಲ್‌ನಲ್ಲಿ ಯು ಟ್ಯೂಬ್‌ ಮೂಲಕ ನೀಟ್‌ಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ನೋಡಿ ಆತ ಪರೀಕ್ಷೆ ಸಿದ್ಧತೆ ನಡೆಸಿದ್ದ. ಆತ ಶ್ರೀನಗರ ಜಿಲ್ಲೆಯ ಮುಲಾ°ರ್‌ ಹರ್ವಾನ್‌ ಎಂಬ ಗ್ರಾಮಕ್ಕೆ ಸೇರಿದವನಾಗಿದ್ದಾನೆ.

ಮನೆಯಲ್ಲಿ ಕೂಡ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಕೂಡ ಇರಲಿಲ್ಲ. ಇತರ ವಿದ್ಯಾರ್ಥಿಗಳಂತೆ ಆತನಿಗೆ ನೀಟ್‌ಗೆ ಕೋಚಿಂಗ್‌ ಪಡೆಯಲೂ ಆರ್ಥಿಕವಾಗಿ ಸಾಧ್ಯವಿರಲಿಲ್ಲ. ಇದರ ಜತೆಗೆ ಸೀಮಿತ ವ್ಯಾಪ್ತಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿದ್ದುದರಿಂದ ಆತ ಅಧ್ಯಯನ ನಡೆಸಲೂ ಕಷ್ಟಪಟ್ಟಿದ್ದ. ಆತನ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ಸಾರಿಗೆ ಸಂಪರ್ಕವೂ ಇಲ್ಲ. ಎರಡು ಕಿಮೀ ನಡೆದುಕೊಂಡು ಆತ ಸರ್ಕಾರಿ ಶಾಲೆಗೆ ಹೋಗಿ ಅಧ್ಯಯನ ಮಾಡಿದ ಹೆಗ್ಗಳಿಕೆ ಆತನದ್ದು.

ಇದನ್ನೂ ಓದಿ:ಸುನೀಲ್‌ ಶೆಟ್ಟಿ ನಿರ್ಮಾಣದ “ಇನ್‌ವಿಸಿಬಲ್‌ ಮ್ಯಾನ್‌’ ನಲ್ಲಿ ನಟಿಸಲಿದ್ದಾರೆ ಈಶಾ ಡಿಯೋಲ್‌

ಭೂಸೇನೆಯ ತರಬೇತಿ:
ಭೂಸೇನೆ ಎಚ್‌ಪಿಎಸಿಎಲ್‌ ಜತೆಗೂಡಿ “ಕಾಶ್ಮೀರ ಸೂಪರ್‌ 50 ಇನಿಶಿಯೇಟಿವ್‌’ನ ಅನ್ವಯ ಉತ್ತರ ಕಾಶ್ಮೀರ ಭಾಗದಲ್ಲಿ ಮೆಡಿಕಲ್‌ ಕೋರ್ಸ್‌ನಲ್ಲಿ ಆಸಕ್ತಿ ಇರುವ 50 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ತೌಫೀಲ್‌ಗೆ ತರಬೇತಿ ನೀಡಲಾಗಿತ್ತು. ಶೈಕ್ಷಣವಾಗಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ಏರ್ಪಡಿಸಿ ಈ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. 2018ರಲ್ಲಿ 30 ಮಂದಿ ವಿದ್ಯಾರ್ಥಿಗಳ ಮೂಲಕ ಈ ಪ್ರಯತ್ನ ಶುರು ಮಾಡಲಾಗಿತ್ತು. ಅದರಲ್ಲಿ 25 ಮಂದಿ ನೀಟ್‌ನಲ್ಲಿ ತೇರ್ಗಡೆಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next