Advertisement

ಶಾ ಭೇಟಿ: ಕುಕ್ಕೆಯಲ್ಲಿ ಸಂಸದ ಪರಿಶೀಲನೆ

11:32 AM Feb 16, 2018 | Team Udayavani |

ಸುಬ್ರಹ್ಮಣ್ಯ : ಕರಾವಳಿಯ ಬಿಜೆಪಿ ಹೆಬ್ಟಾಗಿಲು ಸುಳ್ಯದಿಂದ ಬಿಜೆಪಿಯ ಪಕ್ಷ ಸಂಘಟನೆ ಆರಂಭವಾಗಲಿದ್ದು, ಅಮಿತ್‌ ಶಾ ಅವರು ಕುಕ್ಕೆ ಸುಬ್ರಹ್ಮಣ್ಯದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಕರಾವಳಿಯ ಕಾರ್ಯಕರ್ತರಲ್ಲಿ ಮತ್ತಷ್ಟು ಶಕ್ತಿ ತುಂಬಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜತೆ ಮಾತನಾಡಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂಸದರು, ಅಮಿತ್‌ ಶಾ ಅವರು ತಂಗಲಿರುವ ಕೊಠಡಿಗಳ ವೀಕ್ಷಣೆ ಹಾಗೂ ನವಶಕ್ತಿ ಸಮಾವೇಶ ನಡೆಯುವ ಕುಲ್ಕುಂದದ ಮೈದಾನದ ಪರಿಶೀಲನೆ ನಡೆಸಿ, ಪೂರ್ವಸಿದ್ಧತೆಗಳ ಕುರಿತು ಸ್ಥಳೀಯ ನಾಯಕರ ಜತೆ ಚರ್ಚಿಸಿದರು.

ನವಶಕ್ತಿ ಸಮಾವೇಶದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಿಂದ ಅಪೇಕ್ಷಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ನಾಯಕರು ಉಪಸ್ಥಿತರಿರುವರು. ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಅವರು ತಂಗುವುದಕ್ಕೆ ವ್ಯವಸ್ಥೆ ಹಾಗೂ ಸಮಾವೇಶ ನಡೆಯುವ ಸ್ಥಳದಲ್ಲಿ ಆಗಬೇಕಿರುವ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲು ಬಂದಿದ್ದೇನೆ. ಎಲ್ಲವೂ ಸುವ್ಯವಸ್ಥಿತವಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ನಾಯಕ ಮೋನಪ್ಪ ಭಂಡಾರಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್‌ ವಳಲಂಬೆ, ಬಿಜೆಪಿ ಪ್ರಮುಖರಾದ ದಿನೇಶ್‌ ಸಂಪ್ಯಾಡಿ, ರಾಜೇಶ್‌ ಎನ್‌.ಎಸ್‌., ಬಿ.ಎನ್‌. ದಿನೇಶ್‌, ಸುಬ್ರಹ್ಮಣ್ಯ ಭಟ್‌, ಚಿದಾನಂದ ಕಂದಡ್ಕ, ಭವಾನಿಶಂಕರ ಪೂಂಬಾಡಿ, ಸತೀಶ್‌ ಮಾನಾಡು, ಮೋನಪ್ಪ ಮಾನಾಡು, ಅಶೋಕ ಆಚಾರ್ಯ, ರಾಜೇಶ್‌ ಕುಲ್ಕುಂದ ಉಪಸ್ಥಿತರಿದ್ದರು.

ಕೊಠಡಿ ಕಾಯ್ದಿರಿಸಲು ಬೇಡಿಕೆ! 
ಅಮಿತ್‌ ಶಾ ಕುಕ್ಕೆ ಸುಬ್ರಹ್ಮಣ್ಯ ಭೇಟಿ ವೇಳೆ ಅವರು ತಂಗುವ ಕೊಠಡಿ ಯಾವುದೆಂದು ಇನ್ನೂ ಅಂತಿಮವಾಗಿಲ್ಲ. ಗುರುವಾರ ಸಂಸದರು ಶಾ ಅವರು ತಂಗುವ ವ್ಯವಸ್ಥೆಗಾಗಿ ಸೂಕ್ತ ಕೊಠಡಿ ಹುಡುಕಾಟ ನಡೆಸಿದರು. ಹಲವು ವಸತಿಗೃಹಗಳನ್ನು ವೀಕ್ಷಿಸಿದ್ದು ಯಾವ ಹೊಟೇಲ್‌ ಎಂಬುದನ್ನು ಅಂತಿಮಪಡಿಸಿಲ್ಲ. ಹುಡುಕಾಟದ ವೇಳೆ ಹಲವು ವಸತಿಗೃಹಗಳ ಮಾಲಕರು ತಮ್ಮ ಕೊಠಡಿ ಕಾಯ್ದಿರಿಸುವಂತೆ ಸಂಸದರಲ್ಲಿ ಬೇಡಿಕೆ ಇಟ್ಟರು. ಅಮಿತ್‌ ಶಾ ತಂಗುವ ಕೊಠಡಿ ಕಾಯ್ದಿರಿಸಲು ನಗರದಲ್ಲಿ ಭಾರಿ ಬೇಡಿಕೆಗಳು ಕೇಳಿಬಂದಿವೆ. ಸ್ಥಳೀಯ ದೇವಸ್ಥಾನದ ವಿವಿಐಪಿ ವಸತಿಗೃಹ, ಶ್ರೀ ಸಂಪುಟ ನರಸಿಂಹ ಮಠದ ವ್ಯಾಸಮಂದಿರ, ಖಾಸಗಿ ಹೊಟೇಲ್‌ ಗಳಾದ ವಿಜಯ ಕಂಫ‌ರ್ಟ್ಸ್, ಅಕ್ಷಯದ್ವಾರ ಹೀಗೆ ಹಲವು ಹೊಟೇಲುಗಳ ಹೆಸರುಗಳು ಕೇಳಿ ಬಂದಿದ್ದು, ಅಂತಿಮವಾಗಿ ದೇಗುಲದ ವಿವಿಐಪಿ ವಸತಿಗೃಹ ‘ಆದಿಶೇಷ’ ಕಾಯ್ದಿರಿಸುವ ಸಾಧ್ಯತೆ ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next