ನವದೆಹಲಿ: ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಝೋಸ್ ತಮ್ಮ ಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಮಂಗಳವಾರ (ಜುಲೈ 20) ಕೈಗೊಳ್ಳಲಿದ್ದು, ಜೆಫ್ ಅವರ ಸ್ಪೇಸ್ ಟೂರಿಸಂ ಕಂಪನಿ ಬ್ಲೂ ಒರಿಜಿನ್ ನ ಟಿಬಿಸಿ ಕ್ಯಾಪ್ಸೂಲ್ ತಂಡದಲ್ಲಿ ಮಹಾರಾಷ್ಟ್ರದ 30 ವರ್ಷದ ಮಹಿಳೆಯೊಬ್ಬರು ಇದ್ದಿರುವುದು ವಿಶೇಷತೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಕ್ಯಾಡ್ಬರಿ ಚಾಕೋಲೇಟ್ ನಲ್ಲಿ ಗೋವಿನ ಕೊಬ್ಬು ಉಪಯೋಗಿಸಲ್ಲ-ಶೇ.100 ಸಸ್ಯಹಾರ; ಏನಿದು ವಿವಾದ?
ಬ್ಲೂ ಒರಿಜಿನ್ ನ ಸಬೋರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಅನ್ನು ನಿರ್ಮಿಸಿದ ಎಂಜಿನಿಯರ್ ಗಳ ತಂಡದ ಭಾಗವಾಗಿ ಮಹಾರಾಷ್ಟ್ರದ ಸಂಜಲ್ ಗವಾಂಡೆ(30ವರ್ಷ) ಬಾಹ್ಯಾಕಾಶ ಪಯಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜಲ್ ಮುಂಬೈನ ಕಲ್ಯಾಣ್ ನಲ್ಲಿ ಜನಿಸಿದ್ದರು. ಬಾಲ್ಯದಲ್ಲಿಯೇ ಬಾಹ್ಯಾಕಾಶ ನೌಕೆ ನಿರ್ಮಿಸುವ ಆಕೆ ಕನಸು ಇದೀಗ ಸಾಕಾರಗೊಂಡಂತಾಗಿದೆ.
“ನನ್ನ ಬಾಲ್ಯದ ಕನಸು ನನಸಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಟೀಮ್ ಬ್ಲೂ ಒರಿಜಿನ್ ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಗವಾಂಡೆ ಟೈಮ್ಸ್ ಆಫ್ ಇಂಡಿಯಾಕ್ಕೆ ದೂರವಾಣಿಯಲ್ಲಿ ಮಾತನಾಡುತ್ತ ಪ್ರತಿಕ್ರಿಯೆ” ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.
ಸಂಜಲ್ ಗವಾಂಡೆ ಕಲ್ಯಾಣ್ -ಡೊಂಬಿವಿಲಿ ಮುನ್ಸಿಪಲ್ ಕಾರ್ಪೋರೇಶನ್ ನ ನಿವೃತ್ತ ಉದ್ಯೋಗಿ ಅಶೋಕ್ ಗವಾಂಡೆ ಮತ್ತು ಎಂಟಿಎನ್ ಎಲ್ ನಿವೃತ್ತ ಉದ್ಯೋಗಿ ಸುರೇಖಾ ಅವರ ಪುತ್ರಿ. ಆಕೆ ಬಾಲ್ಯದಲ್ಲಿಯೇ ಬಾಹ್ಯಾಕಾಶದ ಬಗ್ಗೆ ತುಂಬಾ ಆಸಕ್ತಿ ಹೊಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಮುಂಬಯಿ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಸಂಜಲ್ ಗವಾಂಡೆ ಮಿಚಿಗನ್ ನ ಟೆಕ್ನಾಲಜಿ ಯೂನಿರ್ವಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಸ್ಟರ್ ಡಿಗ್ರಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಸಂಜಲ್ ವಿಸ್ಕಾನ್ಸಿನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದ ನಂತರ ಮರ್ಕ್ಯುರಿ ಮೆರೈನ್ ನಲ್ಲಿ ಕೆಲಸ ಮಾಡಿದ್ದರು. ನಂತ ಕ್ಯಾಲಿಫೋರ್ನಿಯಾದ ಆರೆಂಜ್ ಸಿಟಿಯಲ್ಲಿ ಟೊಯೋಟಾ ರೇಸಿಂಗ್ ಕಾರುಗಳ ತಯಾರಿಕೆ ಕಂಪನಿಯಲ್ಲಿದ್ದರು ಎಂದು ತಂದೆ ಅಶೋಕ್ ಗವಾಂಡೆ ಇಂಡಿಯಾ ಟುಡೆ ಜತೆ ಮಾತನಾಡುತ್ತ ತಿಳಿಸಿದ್ದಾರೆ.