ಐಜ್ವಾಲ್: ದೇಶದ “ಬೀಟಾ ತಲೆಮಾರಿನ’ ಮೊದಲ ಮಗು ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಜನಿಸಿದೆ. 2024 ಡಿ.31ರ ಮಧ್ಯರಾತ್ರಿ ಐಜ್ವಾಲ್‌ನಲ್ಲಿ ಈ ಮಗು ಜನಿಸಿದೆ. ಐಜ್ವಾಲ್‌ನ ರಮಿjರ್‌ಮಾವಿ, ರೆಮ್ರು ವಾತ್ಸಂಗ ದಂಪತಿಯ ಮಗುನಾಗಿ “ಫ್ರ್ಯಾಂಕಿ ರೆಮ್ರುವಾತ್‌ದಿಕಾ ಜಡೇಂಗ್’ 2025ರ ಜನವರಿ 1ರಂದು ಐಜ್ವಾಲ್‌ನ ಸೈನಾಡ್ ಆಸ್ಪತ್ರೆಯಲ್ಲಿ ಜನ್ಮ ತಳೆದಿದ್ದಾನೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಈಗ ಫ್ರ್ಯಾಂಕಿ ಜನನದೊಂದಿಗೆ ಮೊದಲ ಗಂಡು ಮಗು ಕುಟುಂಬ ಸೇರಿದೆ ಎಂಬ ಸಂತರ ಒಂದೆಡೆಯಾದರೆ, ಈ ಮಗು ಹೊಸ ತಲೆಮಾರಿನ ಮುನ್ನುಡಿ ಎಂಬುದು ಮತ್ತಷ್ಟು ಸಂತಸ ತಂದಿದೆ.
ಏನಿದು ಜೆನ್ ಬೀಟಾ?
ಈ ವರ್ಷದ ಜ.1ರಿಂದ 2039 ಡಿ.31ರ ವರೆಗೆ ಜನಿಸಲಿರುವ ಮಕ್ಕಳನ್ನು “ಜೆನ್ ಬೀಟಾ’ ಕರೆಯಲಾಗುತ್ತದೆ. ಒಂದೊಂದು ತಲೆಮಾರಿಗೆ ಒಂದೊಂದು ಹೆಸರು ಇರಿಸಲಾಗುತ್ತದೆ. 1925ರಿಂದ ಈ ತಲೆಮಾರು ಲೆಕ್ಕಾಚಾರ ಆರಂಭಿಸಲಾಗಿದೆ.