Advertisement

ಕ್ಯಾಮೆರಾಕ್ಕೆ ಢಿಕ್ಕಿ ಹೊಡೆದು ಸೋತು ಹೋದ ಮೆಡ್ವೆಡೆವ್‌

09:08 AM Aug 23, 2021 | Team Udayavani |

ಸಿನ್ಸಿನಾಟಿ: ರಷ್ಯಾದ ಅಗ್ರ ಶ್ರೇಯಾಂಕಿತ ಟೆನಿಸಿಗ ಡ್ಯಾನಿಲ್‌ ಮೆಡ್ವೆಡೆವ್‌; “ವೆಸ್ಟರ್ನ್ ಆ್ಯಂಡ್‌ ಸದರ್ನ್’ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಸೋಲಿನ ಕಾರಣ ವಿಚಿತ್ರವಾಗಿದೆ.

Advertisement

ದ್ವಿತೀಯ ಸೆಟ್‌ ವೇಳೆ ಬೇಸ್‌ಲೈನ್‌ನಲ್ಲಿ ಚೆಂಡನ್ನು ಚೇಸ್‌ ಮಾಡುವ ವೇಳೆ ಅಂಕಣದಲ್ಲಿದ್ದ ಕ್ಯಾಮೆರಾಕ್ಕೆ ಢಿಕ್ಕಿಯಾದರು.  ಕ್ಯಾಮೆರಾ ಕೈಗೆ ಬಡಿಯಿತು. ಕ್ಯಾಮೆರಾದ ಜತೆಗೆ ಅವರೂ ಬಿದ್ದರು. ಈ ನೋವಿನಿಂದ ಮುಂದಿನೆರಡೂ ಸೆಟ್‌ ಕಳೆದುಕೊಂಡರು! ಅಂದಹಾಗೆ, ಡ್ಯಾನಿಲ್‌ ಮೆಡ್ವೆಡೆವ್‌ ಅವರ ಎದುರಾಳಿ ಆಗಿದ್ದವರು ಅವರದೇ ನಾಡಿನ ಆ್ಯಂಡ್ರೆ ರುಬ್ಲೇವ್‌.

ಇದನ್ನೂ ಓದಿ:ದೇಶಕ್ಕಾಗಿ ಮೂರನೇ ಚಿನ್ನ ಜಯಿಸುವೆ: ಜಜಾರಿಯಾ

ಗೆಲುವಿನ ಅಂತರ 2-6, 6-3, 6-3. ಇದು ಮೆಡ್ವೆಡೇವ್‌ ವಿರುದ್ಧ ರುಬ್ಲೇವ್‌ ಸಾಧಿಸಿದ ಮೊದಲ ಜಯ! ಮೊದಲ ಮಾಸ್ಟರ್ 1000 ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರುಬ್ಲೇವ್‌ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಗ್ರೀಸ್‌ನ ಸ್ಟೆಫಾನಸ್‌ ಸಿಸಿಪಸ್‌ ವಿರುದ್ಧ 6-4, 3-6, 7-6 (4) ಅಂತರದಿಂದ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next