Advertisement

ಗ್ರಾಮೀಣರಿಗೆ ವೈದ್ಯಕೀಯ ಪರೀಕ್ಷೆ

06:25 PM May 03, 2020 | Suhan S |

ನಂಜನಗೂಡು: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದ  ಕೋವಿಡ್ 19 ನಂಜನಗೂಡನ್ನು ಕೆಂಪು ವಲಯವನ್ನಾಗಿಸಿ ಎಲ್ಲರಲ್ಲೂ ಆತಂಕ ಉಂಟು ಮಾಡಿತ್ತು. ಇದೀಗ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ 19 ಪಾಸಿಟಿವ್‌ ಬಂದಿದ್ದ ಗ್ರಾಮಗಳಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದು, ಎಲ್ಲವೂ ನೆಗೆಟಿವ್‌ ಬಂದಿದ್ದ ರಿಂದ ತಾಲೂಕಿನ ಜನತೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.

Advertisement

ಏ.27ರಿಂದ ಗ್ರಾಮಗಳಿಗೆ ತೆರಳಿದ ವೈದ್ಯಕೀಯ ತಂಡ ಅಲ್ಲಿನ ಪಾಸಿಟಿವ್‌ ಸಂಪರ್ಕಕ್ಕೆ ಬಂದವರ ಎಲ್ಲರ ಪರೀಕ್ಷೆ ಮುಗಿಸಿದ್ದು, ಶನಿವಾರ ತಾಂಡವಪುರ ಗ್ರಾಮದಲ್ಲೂ ಎಲ್ಲ ಸಂಪರ್ಕಿತರ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ತಾಲೂ ಕಿನ ಹೆಬ್ಯಾ, ಬ್ಯಾಳಾರು, ಕೂಗಲೂರು, ದೇವರಸನಹಳ್ಳಿ ಹಾಗೂ ತಾಂಡವಪುರದಲ್ಲಿ 430 ಮಂದಿಯ ವೈದ್ಯಕೀಯ ಪರೀಕ್ಷೆ ನಡೆದಿದೆ. ಇಲ್ಲಿ ಎಲ್ಲರಿಗೂ

ಕೋವಿಡ್ 19 ನೆಗೆಟಿವ್‌ ವರದಿ ಬಂದಿದ್ದರಿಂದ ತಾಲೂಕು ಆಡಳಿತ ಹಾಗೂ ಜನತೆ ನಿಟ್ಟುಸಿರು ಬಿಡುವಂತಾಗಿದೆ.ಜ್ಯುಬಿಲಿಯಂಟ್‌ ಸಂಪರ್ಕಿತರೆಲ್ಲರ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ತಾಲೂಕು ಹಸಿರು ವಲಯಕ್ಕೆ ಬರುವುದಕ್ಕಾಗಿ ಕಾಯಬೇಕಾಗಿದೆ. ತಾಲೂಕು ವೈದ್ಯಾಧಿಕಾರಿ ಕಲಾವತಿ, ಡಾ.ನಾಗೇಂದ್ರ, ಡಾ.ರವೀಂದ್ರ ವೈದ್ಯಕೀಯ ತಪಾಸಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next