Advertisement
ಯುವತಿಯು ಬಿಗಿ ಪೊಲೀಸ್ ಭದ್ರತೆಯಲ್ಲಿ ವಕೀಲರ ತಂಡದ ಜತೆ ಬೆಳಗ್ಗೆ 9.30ರ ಸುಮಾರಿಗೆ ಆಡುಗೋಡಿ ಯ ಎಸ್‌ಐಟಿ ಟೆಕ್ನಿಕಲ್ ಸೆಲ್‌ಗೆ ಆಗಮಿಸಿದ್ದು, ಬಳಿಕ ಆಕೆಯನ್ನು ತನಿಖಾಧಿಕಾರಿ ಕವಿತಾ ನೇತೃತ್ವದಲ್ಲಿ ಶಿವಾಜಿ ನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
Related Articles
Advertisement
ಸದ್ಯದಲ್ಲೇ ಜಾರಕಿಹೊಳಿ ತಪಾಸಣೆ? :
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಮಾತ್ರವಲ್ಲದೆ, ಆರೋಪಿಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈಗಾಗಲೇ ಯುವತಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದಾರೆ. ಹೀಗಾಗಿ ಸದ್ಯದಲ್ಲೇ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ಎಸ್‌ಐಟಿ ವೈದ್ಯಕೀಯ ಪರೀಕ್ಷೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್‌ನಲ್ಲಿ ಪಿಐಎಲ್ :
ಸಿ.ಡಿ. ಪ್ರಕರಣವನ್ನು ಸಿಬಿಐಗೆ ವಹಿಸಲು ಆಥವಾ ಕೇಂದ್ರ ಸರಕಾರದ ಅಧೀನದ ವಿಶೇಷ ತನಿಖಾ ತಂಡಕ್ಕೆ ನೀಡುವಂತೆ ಕೋರಿ ವಕೀಲ ಎಸ್. ಉಮೇಶ್ ಅವರು ಹೈಕೊರ್ಟ್‌ಗೆ ಸಾರ್ವಜನಿ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಎಸ್‌ಐಟಿ ವಿರುದ್ಧ ದೂರು: ಜಗದೀಶ್ :
ಬೆಂಗಳೂರು: ಎಸ್‌ಐಟಿ ಅಧಿಕಾರಿಗಳು ಪ್ರಕರಣದ ಆರೋಪಿಗಳಿಗೆ ನೆರವಾಗುತ್ತಿದ್ದು, ಈ ಸಂಬಂಧ ತನಿಖಾಧಿಕಾರಿಗಳ ವಿರುದ್ಧ ಕೋರ್ಚಿಗೆ ದೂರು ನೀಡುವುದಾಗಿ ಸಂತ್ರಸ್ತೆ ಪರ ವಕೀಲ ಜಗದೀಶ್ ಹೇಳಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉದ್ದೇಶಪೂರ್ವಕವಾಗಿ ಎಸ್‌ಐಟಿ ಅಧಿಕಾರಿಗಳು ಹಾಗೂ ಪೊಲೀಸರು ಸಂತ್ರಸ್ತೆ ವಿಚಾರಣೆಗೆ ಹಾಜರಾದ ವೀಡಿಯೋವನ್ನು ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ತನಿಖಾ ಸಂಸ್ಥೆ ಆರೋಪಿ ಪರವಾಗಿ ಕೆಲಸ ಮಾಡುತ್ತಿದೆ. ಮಂಗಳವಾರ ಸಂತ್ರಸ್ತೆ ವಿಶೇಷ ಕೋರ್ಟ್ ನಿಂದ ಹೊರಬರುವಾಗ ಮತ್ತು ಆಡುಗೋಡಿಯ ಎಸ್‌ಐಟಿ ಕೊಠಡಿಗೆ ಹೋಗುವ ಮೊದಲು ಹಿಂಬದಿಯಿಂದ ಆಕೆಯನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ತನ್ನ ವಿರುದ್ಧ ಕೇಳಿ ಬಂದ ಆರೋಪ ಗಳಿಗೆ ಉತ್ತರಿಸಿರುವ ಜಗದೀಶ್, ಈ ಹಿಂದೆ ತಾನು ಭೂಗಳ್ಳರು, ಭ್ರಷ್ಟರ ವಿರುದ್ಧ ಹೋರಾಡಿದ್ದಕ್ಕೆ ಸುಳ್ಳು ಕೇಸು ದಾಖಲಿಸಲಾಗಿತ್ತು. ತಾನು ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ.