Advertisement

40 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

10:42 AM Nov 29, 2017 | |

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2017ನೇ ಸಾಲಿನ “ಮಾಧ್ಯಮ ವಾರ್ಷಿಕ ಪ್ರಶಸ್ತಿ’ ಪ್ರಕಟಗೊಂಡಿದ್ದು, ಈ ಬಾರಿ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ 40 ಜನ ಪತ್ರಕರ್ತರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಪ್ರಶಸ್ತಿಯು 20 ಸಾವಿರ ರೂ. ನಗದು, ಫ‌ಲಕ ಒಳಗೊಂಡಿದೆ. ಇದಲ್ಲದೆ, ತಳಸಮುದಾಯ ಕುರಿತ ಬರಹಗಳ ಅಂಕಣಕಾರರಿಗೆ ನೀಡುವ ಡಾ.ಬಿ.ಆರ್‌. ಅಂಬೇಡ್ಕರ್‌ “ಮೂಕನಾಯಕ ಪ್ರಶಸ್ತಿ’ಗೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರನ್ನು
ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಒಳಗೊಂಡಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.

ಮಾಳಪ್ಪ ಅಡಸಾರೆ (ಅಂತರಂಗ ಸುದ್ದಿ), ಡಿ. ಶಿವಲಿಂಗಪ್ಪ (ಕರ್ನಾಟಕ ಸಂಧ್ಯಾಕಾಲ), ಚೆನ್ನಬಸವಣ್ಣ (ಈಟಿವಿ ಕನ್ನಡ), ಶಿವಪ್ಪ ಮಡಿವಾಳ (ರಾಯಚೂರು ವಾಣಿ), ದತ್ತು ಸರ್ಕಿಲ್‌ (ಜನಕೂಗು), ಸಾದಿಕ್‌ ಅಲಿ (ಲೋಕದರ್ಶನ), ಸಿ.ಮಂಜುನಾಥ್‌ (ಈಶಾನ್ಯ
ಟೈಮ್ಸ್‌), ಸಂಗಮೇಶ ಚೂರಿ (ವಿಜಯ ಕರ್ನಾಟಕ), ಮಹೇಶ ಅಂಗಡಿ (ಸಂಜೆ ದರ್ಶನ), ರಾಮು ವಗ್ಗಿ (ಛಾಯಾಗ್ರಾಹಕ), ವಿಜಯಕುಮಾರ್‌ ಪಾಟೀಲ್‌ (ದಿ ಹಿಂದು), ಬಾಲಕೃಷ್ಣ ರಾಮಚಂದ್ರ ವಿಭೂತೆ (ಇಂಡಿಯನ್‌ ಎಕ್ಸ್‌ ಪ್ರಸ್‌), ಉಗಮ
ಶ್ರೀನಿವಾಸ್‌ (ಕನ್ನಡಪ್ರಭ), ಗಣಪತಿ ಗಂಗೊಳ್ಳಿ (ಸಂಜೆ ದರ್ಪಣ), ಶಿವಕುಮಾರ್‌ ಕಣಸೋಗಿ (ಪ್ರಜಾವಾಣಿ), ಬಸವರಾಜ ದೊಡ್ಡಮನಿ (ಟಿವಿ9), ರವಿ ಬಿದನೂರು (ಸಮಯ ನ್ಯೂಸ್‌), ಷ. ಮಂಜುನಾಥ (ಸುದ್ದಿ ಗಿಡುಗ), ಎಚ್‌.ಎನ್‌.ಮಲ್ಲೇಶ್‌
(ಉದಯ ಟಿವಿ), ಮಹಮದ್‌ ಯೂನುಸ್‌ (ಈ ಮುಂಜಾನೆ), ಕೋ.ನ.ಮಂಜುನಾಥ್‌ (ಪ್ರಿಯ ಪತ್ರಿಕೆ), ಕೆ.ಆರ್‌.ಮಂಜುನಾಥ್‌ (ಹಿರಿಯ ಪತ್ರಕರ್ತ), ಬಾಳ ಜಗನ್ನಾಥ ಶೆಟ್ಟಿ (ಜಯಕಿರಣ), ಡಾ. ಯು.ಪಿ. ಶಿವಾನಂದ (ಸುದ್ದಿ ಬಿಡುಗಡೆ), ರಮೇಶ್‌ ಕುಟ್ಟಪ್ಪ 
(ವಿಜಯವಾಣಿ), ಬಸವಣ್ಣ (ಛಾಯಾಗ್ರಾಹಕ), ಶಿವಣ್ಣ (ವಿಜಯವಾಣಿ), ಗೋವಿಂದ (ಆಂದೋಲನ), ವಸಂತಕುಮಾರ್‌ (ಹಿರಿಯ ಪತ್ರಕರ್ತ), ಡಿ.ಎಸ್‌.ಶಿವರುದ್ರಪ್ಪ (ಹಿರಿಯ ಪತ್ರಕರ್ತ), ಜಯಕುಮಾರ್‌ (ಜಯಮಿತ್ರ), ವೈ.ಎಸ್‌.ಎಲ್‌.ಸ್ವಾಮಿ (ಸಂಜೆವಾಣಿ), ಬಾಗೇಶ್ರೀ (ದಿ ಹಿಂದು), ಸೌಮ್ಯ ಅಜಿ (ಎಕನಾಮಿಕ್‌ ಟೈಮ್ಸ್‌), ಎಂ.ಸಿ.ಶೋಭಾ (ಸುವರ್ಣ ಟಿವಿ), ಬಿ.ಎನ್‌.ಶ್ರೀಧರ್‌ (ಪ್ರಜಾವಾಣಿ), ಸ್ಟಾಲಿನ್‌ ಪಿಂಟೊ (ಛಾಯಾಗ್ರಾಹಕ), ಆದಿನಾರಾಯಣ (ಈ ನಾಡು), ಮುಮ್ತಾಜ್‌ ಅಲೀಂ (ಸುದ್ದಿ ಟಿವಿ), ಟಿ. ಅಶ್ವತ್ಥ ರಾಮಯ್ಯ (ವಾಲ್ಮೀಕಿ ರೈಟ್ಸ್‌ ಆಫ್ ಇಂಡಿಯಾ) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅದೇ ರೀತಿ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ’ ಪ್ರಶಸ್ತಿಗೆ ದಾವಣಗೆರೆಯ “ನಗರ ವಾಣಿ’ ಹಾಗೂ ಅತ್ಯುತ್ತಮ ಸಿನಿಮಾ ಪತ್ರಕರ್ತ ರಿಗೆ ನೀಡುವ “ಅರಗಿಣಿ’ ಪ್ರಶಸ್ತಿಗೆ ಕೆ.ಎಂ.ವಿರೇಶ್‌ ಆಯ್ಕೆ ಯಾಗಿದ್ದಾರೆ. ಪ್ರಶಸ್ತಿಗಳನ್ನು ಮುಖ್ಯಮಂತ್ರಿ
ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. 

Advertisement

ಬರಗೂರು ರಾಮಚಂದ್ರಪ್ಪರಿಗೆ ಮೂಕನಾಯಕ ಪ್ರಶಸ್ತಿ
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನ
“ಅರಗಿಣಿ’ ಪ್ರಶಸ್ತಿಗೆ ಕೆ.ಎಂ.ವಿರೇಶ್‌ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next