Advertisement

ಮೇಧಾಳ ಸೇಫ್ ಆ್ಯಪ್‌

08:40 AM Feb 12, 2018 | Harsha Rao |

ವಾಷಿಂಗ್ಟನ್‌: ವರ್ಜೀನಿಯಾದ ಭಾರತೀಯ ಮೂಲದ ಮೇಧಾ ಗುಪ್ತ ಎಂಬ ಹೈಸ್ಕೂಲ್‌ ಹುಡುಗಿಯೊಬ್ಬಳು ಒಂಟಿಯಾಗಿ ಓಡಾಡುವ ಮಹಿಳೆಯರ ಸಹಾಯಕ್ಕಾಗಿ “ಟ್ರಾವೆಲ್‌ ಸೇಫ್’ ಎಂಬ ಆ್ಯಪ್‌ ಸಿದ್ಧಪಡಿಸಿ ಗಮನ ಸೆಳೆದಿದ್ದಾಳೆ. 

Advertisement

ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಮನಮೋಹನ್‌ ಗುಪ್ತ ಹಾಗೂ ದಿವ್ಯಾ ಗುಪ್ತ ದಂಪತಿಯ ಮಗಳಾದ ಈಕೆ, ಪ್ರತಿನಿತ್ಯ ಥಾಮಸ್‌ ಜೆಫ‌ರ್ಸನ್‌ ಹೈಸ್ಕೂಲ್‌ ಫಾರ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಶಾಲೆಯಿಂದ ತನ್ನ ಮನೆಗೆ ಶಾಲಾ ಬಸ್‌ನಲ್ಲೇ ಓಡಾಡುತ್ತಿದ್ದಳು. ಸಂಜೆ ವಾಪಸಾಗುವಾಗ ಮನೆ ಹತ್ತಿರಕ್ಕೆ ಬಸ್‌ ಡ್ರಾಪ್‌ ಮಾಡಿ ಹೋಗುತ್ತಿತ್ತು. ಆಗ, ಆಕೆ ಮನೆಗೆ ಸಾಗುವ ದಾರಿ ನಿರ್ಜನ ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಬೇಗನೇ ಕತ್ತಲಾಗುತ್ತಿದ್ದುದರಿಂದ ಆಕೆ ಭಯಗೊಳ್ಳುತ್ತಿದ್ದಳು. ಈ ಬಗ್ಗೆ ತೀವ್ರವಾಗಿ ಯೋಚಿಸಿದ ಅಲ್ಪ ಸ್ವಲ್ಪ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಲಿತಿದ್ದ ಈಕೆ, ಇಂಥ ಪರಿಸ್ಥಿತಿಗಳಿಗೆ ಒಳಗಾಗುವ ಮಹಿಳೆಯರಿಗಾಗಿ, ಇದೀಗ ಟ್ರಾವೆಲ್‌ ಸೇಫ್ ಆ್ಯಪ್‌ ತಯಾರಿಸಿದ್ದಾಳೆ. 

ಯಾವುದೇ ರಸ್ತೆಯಲ್ಲಿ ನಡೆದಾಡುವಾಗ ಭಯವಾದಾಗ, ಮೊಬೈಲ್‌ನಲ್ಲಿನ ಈ ಆ್ಯಪ್‌ ಚಾಲೂ ಮಾಡಿದ ಕೂಡಲೇ ಹತ್ತಿರದಲ್ಲಿರುವ, ಮಹಿಳೆಯರ ನಂಬಿಗಸ್ಥ ವ್ಯಕ್ತಿಗಳ ಮೊಬೈಲ್‌ಗ‌ಳಿಗೆ ಸಂದೇಶ ತಲುಪಿ, ಅವರು ಮಹಿಳೆಯರು ಇರುವ ಸ್ಥಳಕ್ಕೆ ಸಕಾಲದಲ್ಲಿ ಆಗಮಿಸಲು ಸಾಧ್ಯವಾಗುತ್ತದೆ. ಸದ್ಯಕ್ಕಿದು ಐಫೋನ್‌ಗಳಿಗೆ ಒಗ್ಗುವಂಥ ಆ್ಯಪ್‌ ಆಗಿದ್ದು, ಸದ್ಯದಲ್ಲೇ ಇದಕ್ಕೆ ಆ್ಯಪಲ್‌ ಸಂಸ್ಥೆಯಿಂದ ಮಾನ್ಯತೆ ದೊರೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next