ಗೋಣಿಕೊಪ್ಪ: ರೈತರು ಭತ್ತದ ಕೃಷಿಯಲ್ಲಿ ಸಂಪೂರ್ಣ ಯಾಂತ್ರೀಕರಣವನ್ನು ಅಳವಡಿಸಿಕೊಂಡಲ್ಲಿ ಉತ್ಪಾದನ ವೆಚ್ಚವನ್ನು ಕಡಿತಗೊಳಿಸಿಕೊಳ್ಳಬಹುದಾಗಿದೆ. ಎಂದು ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.
ಯುನೈಟೆಡ್ ಕೊಡವ ಅರ್ಗನೈಸೇಷನ್ ಯುಕೊ ಸಂಘಟನೆಯ “ನಾಡ ಮಣ್¡ ನಾಡ ಕೂಳ್’ ಅಭಿಯಾನದ ಅಂಗವಾಗಿ ಹುದಿಕೇರಿ ಹೋಬಳಿಯ ಚೇಂದಿರ ಮಧು ಅವರ ಭತ್ತದ ಗದ್ದೆಯಲ್ಲಿ ಏರ್ಪಡಿಸಿದ್ದ ಯಾಂತ್ರೀಕೃತ ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾಡ ಮಣ್¡ ನಾಡ್ ಕೂಳ್’ ಸಂಘಟನೆಯ ಯೋಜನಾ ನಿರ್ದೇಶಕರಾದ ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ ಕಳೆದ 20 ವರ್ಷಗಳ ಸತತ ಪ್ರಯತ್ನದಿಂದಾಗಿ ಇದೀಗ ರೈತರು ಹಂತ ಹಂತವಾಗಿ ಕೃಷಿಯಲ್ಲಿ ಯಾಂತ್ರೀಕರಣವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು 5 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ.100ರಷ್ಟು ಕೃಷಿ ಭೂಮಿ ವ್ಯವಸಾಯಕ್ಕೆ ಒಳಪಡಲಿದೆ ಎಂದು ತಿಳಿಸಿದರು.
ಶ್ರೀ ವಿನಾಯಕ ಜೆಎಲ್‌ಬಿ ಸಂಘದ ಮುಖಂಡ ಚಂಗುಲಂಡ ಸೂರಜ್ ಮಾತನಾಡಿ ಮುಂದಿನ ವರ್ಷಗಳಲ್ಲಿ ಕೊಡಗಿನಲ್ಲಿ ಕನಿಷ್ಠ ಒಂದು ಗದ್ದೆಯೂ ಪಾಳು ಬೀಳಬಾರದು ಎಂಬುದು ನಮ್ಮ ಆಶಯವಾಗಿದೆ ಎಂದರು.
ಹುದಿಕೇರಿ ಮಂಡಲ ಪಂ. ಅಭಿವೃದ್ಧಿ ಅಧಿಕಾರಿ ಸುರೇಶ್, ಚೇಂದಿರ ಮಧು ಮಾತನಾಡಿದರು. ಕಾರ್ಯಕ್ರಮದಲ್ಲಿ ಆತ್ಮ ಸಂಸ್ಥೆ ಹುದಿಕೇರಿ ಹೋಬಳಿಯ ಸಹಾಯಕಿ ಹರ್ಷಿತಾ, ಚಂಗುಲಂಡ ಅಯ್ಯಪ್ಪ, ತಿಮ್ಮಯ್ಯ, ಈಶ, ಮಂಡಂಗಡ ರವಿ, ತೀತಿರ ಕುಟ್ಟಪ್ಪ, ಚೇಂದಿರ ಕರುಂಬಯ್ಯ, ಚೇಂದಿರ ಕಾವೇರಮ್ಮ, ಮಂಡಂಗಡ ಸಜನ್, ಅರಮಣಮಾಡ ನಾಚಪ್ಪ, ಮತ್ರಂಡ ಮುತ್ತಪ್ಪ, ಚೇಂದಿರ ಚಿಟ್ಟಿಯಪ್ಪ, ಐಪುಮಾಡ ರೋನಿ, ಕಿರ್ತನ್ ಹಾಗೂ ಬೇಗೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.