Advertisement
ಸ್ಟೀಲ್, ಕಬ್ಬಿಣ, ಪೆಟ್ರೋಲ್, ರಸಗೊಬ್ಬರ; ಅಕ್ಕಿ, ಸಕ್ಕರೆ, ಬೇಳೆ ಯಂತಹ ದಿನಸಿ ಸಾಮಗ್ರಿಗಳ ಸಹಿತ ದಿನನಿತ್ಯದ ಬಳಕೆ ವಸ್ತುಗಳ ಮಾರಾಟದಲ್ಲಿ ಅತೀ ಹೆಚ್ಚು ತೂಕ -ಅಳತೆ ಮೋಸ ಪ್ರಕರಣ ವರದಿ ಯಾಗುತ್ತಿವೆ. ಮೂರೂವರೆ ವರ್ಷ ಗಳಲ್ಲಿ ಇಲಾಖೆ ರಾಜ್ಯದ 2,58,378 ಕಡೆ ದಾಳಿ ನಡೆಸಿ ವಂಚಕ ವ್ಯಾಪಾರಿಗಳ ವಿರುದ್ಧ 1,04,710 ಪ್ರಕರಣ ದಾಖಲಿಸಿ, 34,52,92,530 ರೂ. ದಂಡ ಸಂಗ್ರಹಿಸಿದೆ.
Related Articles
Advertisement
ವಂಚನೆ ಹೇಗೆ?ಕೆಲವು ಕಂಪೆನಿಗಳು ಮತ್ತು ಅಂಗಡಿ ಮಾಲಕರು ತೂಕ ಯಂತ್ರಗಳನ್ನು ತಾಂತ್ರಿಕವಾಗಿ ಬದಲಾಯಿಸುತ್ತಾರೆ. ಇದರಿಂದ ತೂಕದಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಇದು ಗ್ರಾಹಕರು ಗಮನಕ್ಕೆ ಬರುವುದು ಕಡಿಮೆ ಎಂದು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್ ದೂರು ನೀಡಿ
ವ್ಯಾಪಾರಿಗಳಿಂದ ವಂಚನೆ ಗಮನಕ್ಕೆ ಬಂದರೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ
//www.emapan.karnataka.gov.in ಗೆ ಭೇಟಿ ನೀಡಿ ಆನ್‌ಲೈನ್ ದೂರು ನೀಡಲು ಅವಕಾಶಗಳಿವೆ. ಕೂಡಲೇ ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿರುವ ಅಂಗಡಿಗೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಾರೆ. ತೂಕ -ಅಳತೆ ಸರಿಯಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಂಡು ಸಾಮಗ್ರಿ ಗಳನ್ನು ಖರೀದಿಸಿದರೆ ವಂಚನೆಗಳಿಗೆ ಕಡಿವಾಣ ಹಾಕಬಹುದು.
– ಡಾ| ರಾಜೇಂದ್ರ ಪ್ರಸಾದ್,
ಕಾನೂನು ಮಾಪನ ಶಾಸ್ತ್ರ ನಿಯಂತ್ರಕರು - ಅವಿನಾಶ್ ಮೂಡಂಬಿಕಾನ