Advertisement
ಗೀತಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ಶ್ರೀ ಲಿಂಗೇಶ್ವರ ದೇವಸ್ಥಾನ, ಹೊಂಡದ ವೃತ್ತದ ಸಮೀಪದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನ, ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ಈಶ್ವರ, ಗಣಪತಿ ದೇವಸ್ಥಾನ,
Related Articles
Advertisement
ಖರ್ಜೂರ ಕೆಜಿಗೆ 40-50, ಸೇಬು 80- 100, ಬಾಳೆಹಣ್ಣು 30-40, ದ್ರಾಕ್ಷಿ 40, ಸಪೋಟ 60, ಕರಬೂಜ 30…ರೂಪಾಯಿ ಎಲ್ಲಾ ಬೆಲೆ ಹೆಚ್ಚಿಗೆ ಇದೆ. ದಾವಣಗೆರೆಯ ಹಳೆ ಪಿಬಿ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ… ಹೀಗೆ ಎಲ್ಲಾ ಕಡೆ ಜನರು ಹಬ್ಬಕ್ಕೆ ಬೇಕಾದ ಹೂವು- ಹಣ್ಣು ಖರೀದಿ ಮಾಡಿದರು. ಬೆಲೆ ಜಾಸ್ತಿಯಾದರೂ ಹಬ್ಬಕ್ಕೆ ಎಷ್ಟು ಬೇಕೋ ಅಷ್ಟನ್ನು ಖರೀದಿಸುವುದು ಸಾಮಾನ್ಯವಾಗಿತ್ತು.
ಶಾಂತಿ ಸದ್ಭಾವನಾ ಯಾತ್ರೆ…: ಶಿವರಾತ್ರಿ ಅಂಗವಾಗಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ದಾವಣಗೆರೆ ಶಾಖೆಯಿಂದ ಶಾಂತಿ ಸದ್ಭಾವನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 8ಕ್ಕೆ ಪಿಜೆ ಬಡಾವಣೆಯಲ್ಲಿ ಶಾಖೆಯಲ್ಲಿ ಬಿ.ಕೆ. ಲೀಲಾಜಿ ಧ್ವಜಾರೋಹಣ ನೆರವೇರಿಸುವರು. ಸಂಜೆ 5ಕ್ಕೆ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾಗುವ ಶಾಂತಿ ಸದ್ಭಾವನಾ ಯಾತ್ರೆಗೆ ಮಾಜಿ ಮೇಯರ್ ಅಶ್ವಿನಿ ಚಾಲನೆ ನೀಡುವರು.
ಜಿಲ್ಲಾ ಆಸ್ಪತ್ರೆ, ಪಿಜೆ ಬಡಾವಣೆ ಬ್ರಹ್ಮಕುಮಾರಿಸ್ ರಸ್ತೆ, ಸೇಂಟ್ ಪಾಲ್ಸ್ ರಸ್ತೆ, ಚೇತನಾ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ಮಹಾತ್ಮಗಾಂಧಿ ವೃತ್ತ, ಅಶೋಕ ಚಿತ್ರಮಂದಿರ, ಕೆ.ಆರ್. ರಸ್ತೆ, ಹಗೇದಿಬ್ಬ ವೃತ್ತ, ಹೊಂಡದ ವೃತ್ತದ ಮೂಲಕ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಮುಕ್ತಾಯವಾಗಲಿದೆ. ಶಾಂತಿ ಸದ್ಭಾವನಾ ಯಾತ್ರೆಯಲ್ಲಿ 12 ದ್ವಾದಶಿ ಜ್ಯೋತಿರ್ಲಿಂಗಗಳು ಒಳಗೊಂಡತೆ 21 ಶಿವಲಿಂಗ, ಸ್ತಬ್ದ ಚಿತ್ರಗಳ ಪ್ರದರ್ಶನ ಇರಲಿದೆ.