Advertisement
“ರೈಲುಗಳಲ್ಲಿ, ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕೈಗೆಟ ಕುವ ಬೆಲೆಯಲ್ಲಿ ಆಹಾರ ಒದಗಿಸಲಾ ಗುವುದು. ಎಕಾನಮಿ ಮೀಲ್ಸ್‌ಗೆ 20 ರೂ. ಹಾಗೂ ಸ್ನ್ಯಾಕ್ ಮೀಲ್ಸ್‌ಗೆ 50 ರೂ. ನಿಗದಿಪಡಿಸಲಾಗಿದೆ. ಕಳೆದ ವರ್ಷ ಆರಂಭಿಕವಾಗಿ 51 ರೈಲ್ವೇ ನಿಲ್ದಾಣಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದ್ದು, ಈಗ ಒಟ್ಟಾರೆ 100 ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ’ ಎಂದು ಉತ್ತರ ರೈಲ್ವೆ ಪ್ರಧಾನ ವ್ಯವಸ್ಥಾಪಕ ಶೋಭನ್ ಚೌಧರಿ ತಿಳಿಸಿದ್ದಾರೆ.
ದೂರದ ಪ್ರಯಾಣ ಬೆಳೆಸುವ ರೈಲ್ವೇ ಪ್ರಯಾಣಿಕರು ಕೆಲವು ಬಾರಿ ಟಿಕೆಟ್ ಖಾತ್ರಿಯಾಗದೇ ವೇಟಿಂಗ್ ಲೀಸ್ಟ್‌ನಲ್ಲಿ ಕಾಯುವುದು ಅನಿವಾರ್ಯ. ಇದಕ್ಕೆ ಅಂತ್ಯಹಾಡಲು ರೈಲ್ವೇ ಮುಂದಾಗಿದೆ. “ರೈಲ್ವೇಮೂಲ ಸೌಕರ್ಯ ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಹೂಡಿಕೆ ಮಾಡಲಾಗಿದೆ. 5 ವರ್ಷಗಳಲ್ಲಿ ವೇಟಿಂಗ್ ಲಿಸ್ಟ್‌ಗೆ ಅಂತ್ಯಹಾಡುವುದು ಮೋದಿ ಅವರ ಗ್ಯಾರಂಟಿಯಾಗಿದೆ. ಹೊಸ ರೈಲು ಗಳಿಗಾಗಿ 1 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುವುದು’ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ