Advertisement

ನಾನು ಮತ್ತು ಕ್ಯಾಪ್ಟನ್ ಯಾವಾಗಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ: ಕುಲದೀಪ್ ಯಾದವ್

12:16 PM May 03, 2020 | keerthan |

ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಸದ್ಯ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರ. ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಜೋಡಿ ಟೀಂ ಇಂಡಿಯಾದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

Advertisement

ಖಾಸಗಿ ವೆಬ್ ಸೈಟ್ ಒಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕುಲದೀಪ್, ಅವರ ಮತ್ತು ನಾಯಕ ವಿರಾಟ್ ಕೊಹ್ಲಿಯ ನಡುವಿನ ಮಾತುಕತೆಯನ್ನು ಬಹಿರಂಗ ಮಾಡಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಕೊಹ್ಲಿ ಫುಟ್ ಬಾಲ್ ಫ್ಯಾನ್, ಅದರಲ್ಲೂ ರೊನಾಲ್ಡೋ ಅಭಿಮಾನಿ. ಅಂತೆಯೇ ಕುಲದೀಪ್ ಯಾದವ್ ಕೂಡಾ ಬ್ರೆಜಿಲ್ ಆಟಗಾರ ನೈಯ್ಮರ್ ಅಭಿಮಾನಿ. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಆಗಾಗ ಚರ್ಚೆಗಳಾಗುತ್ತದೆಯಂತೆ.

2012ರಲ್ಲಿ ನಾನು ಮೊದಲು ನೈಯ್ಮರ್ ಆಟವನ್ನು ನೋಡಿದ್ದೆ. ಅವರ ಕೌಶಲ್ಯ ನನಗೆ ಇಷ್ಟವಾಗಿತ್ತು. ಈ ಬಗ್ಗೆ ಕೊಹ್ಲಿ ಜೊತೆ ಚರ್ಚೆ, ವಾದ ಮಾಡುತ್ತೇನೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.

ನನಗೆ ಬಾರ್ಸಿಲೋನಾ ಕ್ಲಬ್ ಇಷ್ಟ. ಒಮ್ಮೆ ರೊನಾಲ್ಡೊ ಪೂರ್ಚುಗಲ್ ಪರ ಹ್ಯಾಟ್ರಿಕ್ ಬಾರಿಸಿದ್ದರು. ಆಗ ಕೊಹ್ಲಿ ಬಂದು ನನಗೆ ವಿಡಿಯೋ ತೋರಿಸಿದ್ದರು. ಮತ್ತೊಮ್ಮೆ ಮೆಸ್ಸಿ ಹ್ಯಾಟ್ರಿಕ್ ಬಾರಿಸಿದಾಗ ನಾನು ವಿಡಿಯೋ ತೋರಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next