Advertisement

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

08:20 PM Apr 23, 2024 | Team Udayavani |

ನವದೆಹಲಿ: ಭಾರತೀಯ ಬ್ರಾಂಡ್‌ಗಳಾದ ಎಂಡಿಎಚ್‌ ಮತ್ತು ಎವರೆಸ್ಟ್‌ ಕಂಪನಿಗಳ ನಾಲ್ಕು ಮಸಾಲೆ ಪದಾರ್ಥಗಳನ್ನು ಸಿಂಗಾಪುರ ಮತ್ತು ಹಾಂಕಾಂಗ್‌ ನಿಷೇಧಿಸಿದ ಬೆನ್ನಲ್ಲೇ ಈ ದೇಶಗಳ ಆಹಾರ ಸುರಕ್ಷತಾ ಪ್ರಾಧಿಕಾರಗಳಿಂದ ಭಾರತ ಸರ್ಕಾರ ವಿವರಗಳನ್ನು ಕೇಳಿದೆ.

Advertisement

ಭಾರತವು ಮಸಾಲೆಗಳ ವಿಶ್ವದ ಅತಿದೊಡ್ಡ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ ದೇಶವಾಗಿದೆ. ನಿಷೇಧಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಲ್ಲಿಸುವಂತೆ ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಹಣಕಾಸು ಸಚಿವಾಲಯ ಸೂಚಿಸಿದೆ.

ಜತೆಗೆ ಎಂಡಿಎಚ್‌ ಮತ್ತು ಎವರೆಸ್ಟ್‌ ಕಂಪನಿಗಳಿಗೂ ಈ ಬಗ್ಗೆ ವಿವರಣೆ ನೀಡುವಂತೆ ಸಚಿವಾಲಯ ತಿಳಿಸಿದೆ. ಭಾರತೀಯ ಮಸಾಲೆ ಮಂಡಳಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಎಂಡಿಎಚ್‌ ಮತ್ತು ಎವರೆಸ್ಟ್‌ ಕಂಪನಿಗಳ ನಾಲ್ಕು ಮಸಾಲೆ ಪದಾರ್ಥಗಳಲ್ಲಿ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ “ಎಥೈಲೀನ್‌ ಆಕ್ಸೆ„ಡ್‌’ ಇದ್ದು, ಇದು ಕ್ಯಾನ್ಸರ್‌ಕಾರಕ ಎಂಬ ಕಾರಣ ನೀಡಿ ಸಿಂಗಾಪುರ, ಹಾಂಕಾಂಗ್‌ ಇವುಗಳನ್ನು ನಿಷೇಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next