Advertisement

ಮೆಲ್ಬರ್ನ್ನಲ್ಲಿ 2020ರ ಟಿ20 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ

10:34 AM Jan 31, 2018 | Team Udayavani |

ದುಬಾೖ: ಪುರುಷರ ಮತ್ತು ಮಹಿಳೆಯರ 2020ರ ಟಿ20 ವಿಶ್ವಕಪ್‌ ಕ್ರಿಕೆಟ್‌ಗೆ ಆಸ್ಟ್ರೇಲಿಯ ಆತಿಥ್ಯ ವಹಿಸಲಿದೆ. ಕೂಟದ ಎರಡೂ ಫೈನಲ್‌ ಪಂದ್ಯವನ್ನು ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ. ಇದೇ ಮೊದಲ ಬಾರಿಗೆ ಎರಡೂ ಕೂಟದ ಫೈನಲ್‌ ಪಂದ್ಯವನ್ನು ಒಂದೇ ಕ್ರೀಡಾಂಗಣದಲ್ಲಿ ನಡೆಸುವುದು ದಾಖಲೆಯಾಗಲಿದೆ.

Advertisement

ಫೆ. 21ರಿಂದ ಮಾರ್ಚ್‌ 8ರ ವರೆಗೆ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದೆ. ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, ಆಸ್ಟ್ರೇಲಿಯಾದ 8 ಕ್ರೀಡಾಂಗಣದಲ್ಲಿ ಕೂಟದ ವಿವಿಧ ಪಂದ್ಯಗಳು ನಡೆಯಲಿವೆ. ಮಾ. 8 ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ. ಅಂದೇ ಫೈನಲ್‌ ಪಂದ್ಯ ನಡೆಯಲಿರುವುದು ವಿಶೇಷವಾಗಿದೆ. ಪುರುಷರ ಟಿ20 ವಿಶ್ವಕಪ್‌ ಅ.18 ರಿಂದ ನ.15ರ ವರೆಗೆ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿದ್ದು, ನ.15 ರಂದು ಫೈನಲ್‌ ಪಂದ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next