Advertisement

ಎಂಸಿಡಿ ಚುನಾವಣೆ: 272 ಸ್ಥಾನಗಳಲ್ಲೂ ಆಪ್‌ಗೆ ಠೇವಣಿ ನಷ್ಟ; ಬಿಜೆಪಿ

04:24 PM Apr 22, 2017 | Team Udayavani |

ಹೊಸದಿಲ್ಲಿ : ಮುಂಬರುವ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ (ಎಂಸಿಡಿ) ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಎಲ್ಲ 272 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡು ಹೀನಾಯ ಸೋಲನುಭವಿಸಲಿದೆ ಎಂದು ದಿಲ್ಲಿ ಭಾರತೀಯ ಜನತಾ ಪಕ್ಷದ ವಕ್ತಾರ ತಜೀಂದರ್‌ ಪಾಲ್‌ ಎಸ್‌ ಬಗ್ಗಾ ಅವರು ಭವಿಷ್ಯ ನುಡಿದ್ದಾರೆ.

Advertisement

ನಿನ್ನೆ ಶುಕ್ರವಾರ ಅರವಿಂದ ಕೇಜ್ರಿವಾಲ್‌ ಅವರು “ಭಾರತೀಯ ಜನತಾ ಪಕ್ಷಕ್ಕೆ ಜನರು ಮತ ಹಾಕಿ ಅಧಿಕಾರಕ್ಕೇರಿಸಿದರೆ ತಮಗೆ ಹಾಗೂ ತಮ್ಮ ಮನೆಯವರಿಗೆ ಡೆಂಗೀ ಮತ್ತು ಚಿಕೂನ್‌ಗುನ್ಯಾ ರೋಗ ಬಂದಲ್ಲಿ ತಾವೇ ಜವಾಬ್ದಾರರಾಗಿರುತ್ತಾರೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಇದಕ್ಕೆ ಉತ್ತರವಾಗಿ ಇಂದು ಬಿಜೆಪಿ ವಕ್ತಾರ ಬಗ್ಗಾ ಅವರು, “ದಿಲ್ಲಿಯ ಮತದಾರರು ಕೇಜ್ರಿವಾಲ್‌ ಅವರಿಗೆ ಸರಿಯಾದ ಉತ್ತರವನ್ನೇ ನೀಡಲಿದ್ದಾರೆ; ಆಮ್‌ ಆದ್ಮಿ ಪಕ್ಷ ಎಂಸಿಡಿ ಚುನಾವಣೆಯಲ್ಲಿ ಎಲ್ಲ 272 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡು ಹೀನಾಯ ಸೋಲನುಭವಿಸಲಿದೆ‌’ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next