Advertisement

ದಿಲ್ಲಿ: ಕೇಜ್ರಿವಾಲ್‌ ಬಿರುಕು

11:22 AM Apr 27, 2017 | Karthik A |

ಹೊಸದಿಲ್ಲಿ: ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿಯ ಹೆಜ್ಜೆ ಕಾಣಬೇಕು ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಸೆಗೆ ಮತ್ತೂಂದು ಗರಿ ಸಿಕ್ಕಿದೆ. ದಿಲ್ಲಿಯ 3 ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ಚುನಾವಣೆಗಿಳಿದಿದ್ದ ಪಕ್ಷಕ್ಕೆ ಮತದಾರ ಜೈ ಎಂದಿದ್ದಾನೆ. ಎರಡು ವರ್ಷಗಳ ಹಿಂದಷ್ಟೇ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷದ ಆರ್ಭಟಕ್ಕೆ ತತ್ತರಿಸಿದ್ದ ಬಿಜೆಪಿಗೆ ಈ ಗೆಲುವು ಸಮಾಧಾನ ತಂದಿದೆ. ಹತ್ತು ವರ್ಷಗಳಿಂದ ಮೂರು ಪಾಲಿಕೆಗಳಲ್ಲೂ ಬಿಜೆಪಿಯದ್ದೇ ಪಾರಮ್ಯ. ಆದರೆ ಈ ಬಾರಿ ಆಡಳಿತಾರೂಢ ಆಪ್‌ ಕಡೆ ಈ ಪಾಲಿಕೆಗಳು ಹೊರಳಬಹುದು ಎಂಬ ಮಾತುಗಳಿದ್ದವು. 2 ವರ್ಷಗಳ ಹಿಂದಿನ ವಿಧಾನಸಭೆ ಚುನಾವಣಾ ಫ‌ಲಿತಾಂಶ ಇದಕ್ಕೆ ಪುಷ್ಟಿ ನೀಡಿತ್ತು. ಆದರೆ, ಈ ಮೂರು ಪಾಲಿಕೆಗಳ ಮತದಾರ ಆಪ್‌ಗೆ ಮಣಿದಿಲ್ಲ. ಬದಲಾಗಿ ಕಳೆದೆರಡು ಬಾರಿ ಅಧಿಕಾರದಲ್ಲಿದ್ದ ಬಿಜೆಪಿಯತ್ತಲೇ ವಾಲಿದ್ದಾನೆ.

Advertisement

ಬಿಜೆಪಿ ಪಾಲಿಗೆ ಈ ಜಯ ಮತ್ತಷ್ಟು ಶಕ್ತಿ ತಂದು ಕೊಟ್ಟಿದೆ. ಆದರೆ ಕೇಜ್ರಿವಾಲ್‌ಗೆ ಈ ಫ‌ಲಿತಾಂಶ ದೊಡ್ಡ ಮಟ್ಟದ ಹೊಡೆತ ನೀಡಿದೆ. ಫ‌ಲಿತಾಂಶ ಹೊರಬೀಳುತ್ತಿದ್ದಂತೆ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ಮಾಕನ್‌ ರಾಜೀನಾಮೆ ನೀಡಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿ ಕಾರ್ಯಕರ್ತರೆಲ್ಲರಿಗೂ ಅಭಿನಂದನೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next