Advertisement

ಮೆಕ್‌ಡೊನಾಲ್ಡ್ಸ್ ಆ್ಯಪಿಂದ ಗ್ರಾಹಕರ ಮಾಹಿತಿ ಸೋರಿಕೆ

10:03 AM Mar 20, 2017 | Karthik A |

ಹೊಸದಿಲ್ಲಿ: ಫಾಸ್ಟ್‌ ಫ‌ುಡ್‌ ಸಂಸ್ಥೆ ಮೆಕ್‌ ಡೊನಾಲ್ಡ್ಸ್ ಇಂಡಿಯಾದ ಮೊಬೈಲ್‌ ಆ್ಯಪ್‌ ‘ಮೆಕ್‌ ಡೆಲಿವರಿ’ಯಿಂದ ಶನಿವಾರ 22 ಲಕ್ಷ ಗ್ರಾಹಕರ ವೈಯಕ್ತಿಕ ದಾಖಲೆಗಳು ಸೋರಿಕೆಯಾಗಿವೆ ಎಂದು ಸೈಬರ್‌ ಭದ್ರತಾ ಸಂಸ್ಥೆ ಫ್ಯಾಲಿಬಲ್‌ ತಿಳಿಸಿದೆ.  ಹೆಸರು, ಇ-ಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ಮನೆ ಅಥವಾ ಕಚೇರಿ ವಿಳಾಸ, ಸಾಮಾಜಿಕ ಜಾಲತಾಣಗಳ ಲಿಂಕ್‌ಗಳು ಇವೆ. ಮೆಕ್‌ ಡೊನಾಲ್ಡ್ಸ್ ಈ ಅಚಾತುರ್ಯವನ್ನು ಮನಗಂಡು ಕೂಡಲೇ ಸರಿಪಡಿಸಿರುವುದಾಗಿ ಹೇಳಿದೆ. ಮೆಕ್‌ ಡೊನಾಲ್ಡ್ಸ್ (ವೆಸ್ಟ್‌ ಆ್ಯಂಡ್‌ ಸೌತ್‌ ಮತ್ತು ನಾರ್ತ್‌ ಆ್ಯಂಡ್‌ ಈಸ್ಟ್‌ ) ಎಂದು ವಹಿವಾಟು ನಡೆಸುತ್ತಿದೆ. ನಾರ್ತ್‌ ಆ್ಯಂಡ್‌ ಈಸ್ಟ್‌ನ ಬಳಕೆದಾರರು ಬೇರೆಯೇ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಆ ಪ್ರದೇಶದ ಬಳಕೆ ದಾರರ ಮಾಹಿತಿಗೆ ಧಕ್ಕೆಯಾಗಿಲ್ಲ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next